WPL 2024: ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಚಮರಿ ಅಥಾಪತ್ತು ಎಂಟ್ರಿ..!
WPL 2024: : ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಫೆಬ್ರವರಿ 23 ರಿಂದ ಶುರುವಾಗಲಿದೆ. 5 ತಂಡಗಳ ನಡುವಣ ಮಹಿಳಾ ಕ್ರಿಕೆಟ್ ಕದನದಲ್ಲಿ ಒಟ್ಟು 22 ಪಂದ್ಯಗಳನ್ನು ಆಡಲಾಗುತ್ತದೆ. ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದರೆ, ಅಂತಿಮ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಮೈದಾನವು ಆತಿಥ್ಯವಹಿಸಲಿದೆ.
Updated on: Jan 27, 2024 | 9:58 AM

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ಗೆ ಶ್ರೀಲಂಕಾದ ಸ್ಪೋಟಕ ಆಟಗಾರ್ತಿ ಚಮರಿ ಅಥಾಪತ್ತು (Chamari Athapaththu) ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಬದಲಿ ಆಟಗಾರ್ತಿಯಾಗಿ ಎಂಬುದು ವಿಶೇಷ. ಅಂದರೆ ಈ ಹಿಂದೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಲಂಕಾ ಆಟಗಾರ್ತಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

2024ರ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಚಮರಿ ಅಥಾಪತ್ತು ಅನ್ಸೋಲ್ಡ್ ಆಗಿದ್ದರು. ಇದಕ್ಕೂ ಮುನ್ನ 2023 ರ ಹರಾಜಿನಲ್ಲೂ ಅವರು ಬಿಕರಿಯಾಗಿರಲಿಲ್ಲ. ಇದೀಗ ಬದಲಿ ಆಟಗಾರ್ತಿಯಾಗಿ ಯುಪಿ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈ ಬಾರಿಯ ಆಕ್ಷನ್ನಲ್ಲಿ ಯುಪಿ ವಾರಿಯರ್ಸ್ ಖರೀದಿಸಿದ್ದ ಇಂಗ್ಲೆಂಡ್ ಆಟಗಾರ್ತಿ ಲಾರೆನ್ ಬೆಲ್ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರ ಬದಲಿ ಆಟಗಾರ್ತಿಯಾಗಿ ಶ್ರೀಲಂಕಾ ತಂಡದ ನಾಯಕಿ ಚಮರಿ ಅಥಾಪತ್ತು ಅವರನ್ನು ಯುಪಿ ವಾರಿಯರ್ಸ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ.

ಶ್ರೀಲಂಕಾ ಪರ 122 ಟಿ20 ಪಂದ್ಯಗಳನ್ನಾಡಿರುವ ಚಮರಿ ಅಥಾಪತ್ತು ಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿ. ಈಗಾಗಲೇ 120 ಇನಿಂಗ್ಸ್ಗಳ ಮೂಲಕ 2651 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 8 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ 40 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.

ಇದೀಗ ಅಲಿಸ್ಸಾ ಹೀಲಿ ನಾಯಕತ್ವದ ಯುಪಿ ವಾರಿಯರ್ಸ್ ತಂಡಕ್ಕೆ ಚಮರಿ ಅಥಾಪತ್ತು ಆಯ್ಕೆಯಾಗಿದ್ದು, ಈ ಮೂಲಕ ಶ್ರೀಲಂಕಾ ತಂಡದ ನಾಯಕಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ಹೊಸ ಇನಿಂಗ್ಸ್ ಆರಂಭಿಸುವ ವಿಶ್ವಾಸದಲ್ಲಿದ್ದಾರೆ.

ಯುಪಿ ವಾರಿಯರ್ಸ್ (UPW) ತಂಡ: ಅಲಿಸ್ಸಾ ಹೀಲಿ*, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್*, ಕಿರಣ್ ನವಗಿರೆ, ಚಮರಿ ಅಥಾಪತ್ತು*, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್‌ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್*, ತಹ್ಲಿಯಾ, ಡ್ಯಾನಿ ವ್ಯಾಟ್*, ವೃಂದಾ ದಿನೇಶ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಗೌಹರ್ ಸುಲ್ತಾನಾ.
