WPL 2024: ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯ ನೋಡಲು ಬರುವ ಮಹಿಳೆಯರಿಗೆ ಬಂಪರ್ ಗಿಫ್ಟ್..!

|

Updated on: Feb 23, 2024 | 3:02 PM

WPL 2024 Opening Ceremony: ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಪಂದ್ಯವನ್ನು ವೀಕ್ಷಿಸಲು ಮೊದಲು ಬರುವ 500 ಮಹಿಳಾ ಅಭಿಮಾನಿಗಳಿಗೆ ಉಚಿತವಾಗಿ ಟಿಕೆಟ್ ನೀಡುವುದಾಗಿ ಪ್ರಕಟಣೆ ಹೊರಡಿಸಲಾಗಿದೆ. ಈ ಬಗ್ಗೆ ಡಬ್ಲ್ಯುಪಿಎಲ್ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಸಿಸಿಐ ಮಾಹಿತಿ ನೀಡಿದೆ.

1 / 7
ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗುತ್ತಿದೆ. ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸುತ್ತಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

2 / 7
ಈ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಲ್ಲಿದ್ದು, ಖ್ಯಾತ ಬಾಲಿವುಡ್ ತಾರೆಯರು ಪ್ರದರ್ಶನ ನೀಡಲಿದ್ದಾರೆ. ಈ ಮೂಲಕ ಡಬ್ಲ್ಯುಪಿಎಲ್​ಗೆ ಭರ್ಜರಿ ಆರಂಭ ನೀಡುವ ಇರಾದೆಯಲ್ಲಿರುವ ಬಿಸಿಸಿಐ, ಉದ್ಘಾಟನಾ ಪಂದ್ಯವನ್ನು ನೋಡಲು ಬರುವ ಮಹಿಳೆಯರಿಗೆ ಬಂಪರ್ ಉಡುಗೊರೆಯೊಂದನ್ನು ನೀಡಿದೆ.

3 / 7
ಅದರಂತೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್  ನಡುವಿನ ಮೊದಲ ಪಂದ್ಯವನ್ನು ವೀಕ್ಷಿಸಲು ಮೊದಲು ಬರುವ 500 ಮಹಿಳಾ ಅಭಿಮಾನಿಗಳಿಗೆ ಉಚಿತವಾಗಿ ಟಿಕೆಟ್ ನೀಡುವುದಾಗಿ ಪ್ರಕಟಣೆ ಹೊರಡಿಸಲಾಗಿದೆ. ಈ ಬಗ್ಗೆ ಡಬ್ಲ್ಯುಪಿಎಲ್ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಸಿಸಿಐ ಮಾಹಿತಿ ನೀಡಿದೆ.

4 / 7
ಇನ್ನು ಇಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್​ನ ಖ್ಯಾತ ಸ್ಟಾರ್​ಗಳಾದ ಶಾರುಖ್ ಖಾನ್, ವರುಣ್ ಧವನ್, ಕಾರ್ತಿಕ್ ಆರ್ಯನ್, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಇತರರು ಪ್ರದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮ ಸಂಜೆ 6:30ಕ್ಕೆ ಆರಂಭವಾಗಲಿದೆ.

5 / 7
ಸ್ಟಾರ್​ಗಳಲ್ಲದೆ, ಈ ವೇಳೆ ಐದು ತಂಡಗಳ ನಾಯಕಿಯರು ಮೈದಾನದಲ್ಲಿ ಉಪಸ್ಥಿತರಿರಲಿದ್ದಾರೆ. ಹರ್ಮನ್ ಪ್ರೀತ್ ಕೌರ್ ಮತ್ತು ಲ್ಯಾನಿಂಗ್ ಹೊರತಾಗಿ, ಅಮೆಲಿಯಾ ಕೆರ್, ಮರಿಜಾನ್ನೆ ಕಪ್, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ನ್ಯಾಟ್ ಸಿವರ್ ಬ್ರಂಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

6 / 7
ಮುಂಬೈ ಇಂಡಿಯನ್ಸ್ ಮಹಿಳಾ ತಂಡ: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್, ಶಬ್ನಿಮ್ ಇಸ್ಮಾಯಿಲ್, ಜಿಂತಿಮಣಿ ಕಲಿತಾ, ಅಮನ್‌ದೀಪ್ ಕೌರ್, ಸೈಕಾ ಇಶಾಕ್, ಹುಮೈರಾ ಕಾಜಿ, ಇಸ್ಸಿ ವಾಂಗ್, ಪ್ರಿಯಾಂಕಾ ಬಾಲಾ, ಎಸ್ ಸಜನಾ, ಕೀರ್ತನಾ ಬಾಲಕೃಷ್ಣನ್, ಫಾತಿಮಾ ಜಾಫರ್

7 / 7
ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ: ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಆಲಿಸ್ ಕ್ಯಾಪ್ಸೆ, ಅನ್ನಾಬೆಲ್ ಸದರ್ಲ್ಯಾಂಡ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಪೂನಮ್ ಯಾದವ್, ಟಿಟಾಸ್ ಸಾಧು, ಮಿನ್ನು ಮಣಿ, ಜೆಸ್ ಜೋನಾಸ್ ಲಾರಾ ಹ್ಯಾರಿಸ್, ಅರುಂಧತಿ ರೆಡ್ಡಿ, ಅಶ್ವನಿ ಕುಮಾರಿ, ಅಪರ್ಣಾ ಮೊಂಡಲ್, ಸ್ನೇಹಾ ದೀಪ್ತಿ.