AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026: ಗುಜರಾತ್ ಜೈಂಟ್ಸ್ ತಂಡಕ್ಕೆ ಹೊಸ ನಾಯಕಿ ಆಯ್ಕೆ

Women's Premier League 2026: ವುಮೆನ್ಸ್ ಪ್ರೀಮಿಯರ್ ಲೀಗ್​ನ 4ನೇ ಸೀಸನ್​ ಜನವರಿ 9 ರಿಂದ ಶುರುವಾಗಲಿದೆ. 5 ತಂಡಗಳ ನಡುವಣ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.

ಝಾಹಿರ್ ಯೂಸುಫ್
|

Updated on:Dec 30, 2025 | 10:26 AM

Share
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​​ನಲ್ಲಿ ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ಆಶ್ಲೇ ಗಾರ್ಡ್ನರ್ (Ashleigh Gardner) ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ನನ್ನು ಮುಂದಿನ ಸೀಸನ್​ಗಾಗಿ ನಾಯಕಿಯಾಗಿ ನೇಮಿಸಲಾಗಿದೆ ಎಂದು ಗುಜರಾತ್ ಜೈಂಟ್ಸ್ ಫ್ರಾಂಚೈಸಿ ತಿಳಿಸಿದೆ.

1 / 5
ಕಳೆದ ಸೀಸನ್​ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಬೆತ್ ಮೂನಿ ಮುನ್ನಡೆಸಿದ್ದರು. ಮೂನಿ ನಾಯಕತ್ವದಲ್ಲಿ ಗುಜರಾತ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅಲ್ಲದೆ 2025 ರಲ್ಲಿ ಗೆದ್ದಿದ್ದು ಕೇವಲ 4 ಮ್ಯಾಚ್​ಗಳನ್ನು ಮಾತ್ರ.

2 / 5
ಇದೇ ಕಾರಣದಿಂದಾಗಿ ಇದೀಗ ಗುಜರಾತ್ ಜೈಂಟ್ಸ್ ಫ್ರಾಂಚೈಸಿಯು ನಾಯಕಿಯನ್ನು ಬದಲಿಸಿದೆ. ಅದರಂತೆ ಮುಂದಿನ ಸೀಸನ್​ ವುಮೆನ್ಸ್ ಪ್ರೀಮಿಯರ್ ಲೀಗ್​​ನಲ್ಲಿ ಗುಜರಾತ್ ಜೈಂಟ್ಸ್​ ತಂಡವನ್ನು ಆಸ್ಟ್ರೇಲಿಯನ್ ಆಲ್​ರೌಂಡರ್ ಆಶ್ಲೇ ಗಾರ್ಡ್ನರ್ ಮುನ್ನಡೆಸಲಿದ್ದಾರೆ. 

3 / 5
ಗುಜರಾತ್ ಜೈಂಟ್ಸ್ ತಂಡ: ಆಶ್ಲೇ ಗಾರ್ಡ್ನರ್ (ನಾಯಕಿ), ಭಾರತಿ ಫುಲ್ಮಾಲಿ, ಡೇನಿಯಲ್ ವ್ಯಾಟ್-ಹಾಡ್ಜ್, ಕನಿಕಾ ಅಹುಜಾ, ಸೋಫಿ ಡಿವೈನ್, ಕಶ್ವೀ ಗೌತಮ್, ಕಿಮ್ ಗಾರ್ತ್, ಅನುಷ್ಕಾ ಶರ್ಮಾ , ಆಯುಷಿ ಸೋನಿ, ಯಾಸ್ತಿಕಾ ಭಾಟಿಯಾ, ಬೆತ್ ಮೂನಿ, ಶಿವನ್ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ತನುಜಾ ಕನ್ವರ್, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು, ಜಾರ್ಜಿಯಾ ವೇರ್ಹ್ಯಾಮ್ ಮತ್ತು ಹ್ಯಾಪಿ ಕುಮಾರಿ.

4 / 5
ವುಮೆನ್ಸ್ ಪ್ರೀಮಿಯರ್ ಲೀಗ್​ನ 4ನೇ ಸೀಸನ್​ ಜನವರಿ 9 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

5 / 5

Published On - 10:23 am, Tue, 30 December 25