WPL 2026: ಗುಜರಾತ್ ಜೈಂಟ್ಸ್ ತಂಡಕ್ಕೆ ಹೊಸ ನಾಯಕಿ ಆಯ್ಕೆ
Women's Premier League 2026: ವುಮೆನ್ಸ್ ಪ್ರೀಮಿಯರ್ ಲೀಗ್ನ 4ನೇ ಸೀಸನ್ ಜನವರಿ 9 ರಿಂದ ಶುರುವಾಗಲಿದೆ. 5 ತಂಡಗಳ ನಡುವಣ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.
Updated on:Dec 30, 2025 | 10:26 AM

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ಆಶ್ಲೇ ಗಾರ್ಡ್ನರ್ (Ashleigh Gardner) ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ನನ್ನು ಮುಂದಿನ ಸೀಸನ್ಗಾಗಿ ನಾಯಕಿಯಾಗಿ ನೇಮಿಸಲಾಗಿದೆ ಎಂದು ಗುಜರಾತ್ ಜೈಂಟ್ಸ್ ಫ್ರಾಂಚೈಸಿ ತಿಳಿಸಿದೆ.

ಕಳೆದ ಸೀಸನ್ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಬೆತ್ ಮೂನಿ ಮುನ್ನಡೆಸಿದ್ದರು. ಮೂನಿ ನಾಯಕತ್ವದಲ್ಲಿ ಗುಜರಾತ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅಲ್ಲದೆ 2025 ರಲ್ಲಿ ಗೆದ್ದಿದ್ದು ಕೇವಲ 4 ಮ್ಯಾಚ್ಗಳನ್ನು ಮಾತ್ರ.

ಇದೇ ಕಾರಣದಿಂದಾಗಿ ಇದೀಗ ಗುಜರಾತ್ ಜೈಂಟ್ಸ್ ಫ್ರಾಂಚೈಸಿಯು ನಾಯಕಿಯನ್ನು ಬದಲಿಸಿದೆ. ಅದರಂತೆ ಮುಂದಿನ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಆಸ್ಟ್ರೇಲಿಯನ್ ಆಲ್ರೌಂಡರ್ ಆಶ್ಲೇ ಗಾರ್ಡ್ನರ್ ಮುನ್ನಡೆಸಲಿದ್ದಾರೆ.

ಗುಜರಾತ್ ಜೈಂಟ್ಸ್ ತಂಡ: ಆಶ್ಲೇ ಗಾರ್ಡ್ನರ್ (ನಾಯಕಿ), ಭಾರತಿ ಫುಲ್ಮಾಲಿ, ಡೇನಿಯಲ್ ವ್ಯಾಟ್-ಹಾಡ್ಜ್, ಕನಿಕಾ ಅಹುಜಾ, ಸೋಫಿ ಡಿವೈನ್, ಕಶ್ವೀ ಗೌತಮ್, ಕಿಮ್ ಗಾರ್ತ್, ಅನುಷ್ಕಾ ಶರ್ಮಾ , ಆಯುಷಿ ಸೋನಿ, ಯಾಸ್ತಿಕಾ ಭಾಟಿಯಾ, ಬೆತ್ ಮೂನಿ, ಶಿವನ್ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ತನುಜಾ ಕನ್ವರ್, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು, ಜಾರ್ಜಿಯಾ ವೇರ್ಹ್ಯಾಮ್ ಮತ್ತು ಹ್ಯಾಪಿ ಕುಮಾರಿ.

ವುಮೆನ್ಸ್ ಪ್ರೀಮಿಯರ್ ಲೀಗ್ನ 4ನೇ ಸೀಸನ್ ಜನವರಿ 9 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
Published On - 10:23 am, Tue, 30 December 25
