- Kannada News Photo gallery Cricket photos WTC Final 2023 India vs Australia Day 5 Weather Report high chances of rain playing spoilsport on Sunday
IND vs AUS Day 5 Weather Forecast: ಭಾರತದ ಗೆಲುವಿಗೆ ಬೇಕು 280 ರನ್ಸ್: ರಣರೋಚಕ ಫೈನಲ್ ದಿನಕ್ಕೆ ಮಳೆಯ ಕಾಟ ಇದೆಯೇ?
WTC Final, IND vs AUS: ತುದಿಗಾಲಿನಲ್ಲಿ ನಿಲ್ಲಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಕೊನೆಯ ದಿನಕ್ಕೆ ಮಳೆಯ ಕಾಟ ಇದೆಯೇ?. ಕೆನ್ನಿಂಗ್ಟನ್ನ ಓವಲ್ ಮೈದಾನದ ಹವಾಮಾನ ವರದಿ ಏನಿದೆ ಎಂಬುದನ್ನು ನೋಡೋಣ.
Updated on:Jun 11, 2023 | 11:18 AM

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ರೋಚಕತೆ ಸೃಷ್ಟಿಸಿದೆ. ಇಂದು ಕೊನೆಯ ದಿನವಾಗಿದ್ದು ಭಾರತದ ಗೆಲುವಿಗೆ 280 ರನ್ಗಳು ಬೇಕಾಗಿದೆ. ಅತ್ತ ಆಸೀಸ್ ಗೆಲುವಿಗೆ ರೋಹಿತ್ ಪಡೆಯ 7 ವಿಕೆಟ್ ಕೀಳಬೇಕು.

ಹೀಗೆ ತುದಿಗಾಲಿನಲ್ಲಿ ನಿಲ್ಲಿಸಿರುವ ಈ ಪಂದ್ಯದ ಕೊನೆಯ ದಿನಕ್ಕೆ ಮಳೆಯ ಕಾಟ ಇದೆಯೇ?. ಕೆನ್ನಿಂಗ್ಟನ್ನ ಓವಲ್ ಮೈದಾನದ ಹವಾಮಾನ ವರದಿ ಏನಿದೆ ಎಂಬುದನ್ನು ನೋಡೋಣ.

ಭಾನುವಾರದಂದು ಅಂತಿಮ ದಿನ ಜೋರಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಲಂಡನ್‌ನ ಅಕ್ಯುವೆದರ್‌ನ ಪ್ರಕಾರ, ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಶೇ. 61 ರಷ್ಟು ಮಳೆಯಾಗುವ ಸಾಧ್ಯತೆಗಳಿವೆ. ಅದು 10 ಗಂಟೆ ಹೊತ್ತಿಗೆ ಶೇ. 49 ರಷ್ಟು ಮಳೆ ಇರಲಿದೆ ಎಂದು ಹೇಳಿದೆ.

3 ಗಂಟೆ ಹೊತ್ತಿಗೆ ಕೂಡ ಮಳೆ ಸುರಿಯಲಿದೆ. ಸಂಜೆ ಮಳೆಯ ಪ್ರಮಾಣ ಕಡಿಮಡ ಆಗಲಿದ್ದು ಶೇ. 2 ರಷ್ಟು ಇರಲಿದೆಯಂತೆ. ಒಂದುವೇಳೆ ಫೈನಲ್ ದಿನಕ್ಕೆ ಮಳೆ ಅಡ್ಡಿಪಡಿಸಿದರೆ ಕಳೆದ ವರ್ಷದ ಆವೃತ್ತಿಯಂತೆ, ಮಳೆ ಬಂದ ಸಮಯವನ್ನು ಸರಿದೂಗಿಸಲು ಮೀಸಲು ದಿನವನ್ನು ಇರಿಸಲಾಗಿದೆ.

ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸೀಸ್ 270 ರನ್ಗೆ ಡಿಕ್ಲೇರ್ ಘೋಷಿಸಿ 444 ರನ್ಗಳ ಟಾರ್ಗೆಟ್ ನೀಡಿತು. ಸದ್ಯ ಗುರಿ ಬೆನ್ನಟ್ಟಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ.

ಭಾರತದ ಗೆಲುವಿಗೆ ಇನ್ನೂ 280 ರನ್ಗಳ ಅವಶ್ಯಕತೆಯಿದ್ದು, 90 ಓವರ್ಗಳು ನೀಡಲಾಗಿದೆ. ವಿರಾಟ್ ಕೊಹ್ಲಿ (ಅಜೇಯ 44) ಹಾಗೂ ಅಜಿಂಕ್ಯ ರಹಾನೆ (ಅಜೇಯ 20) ಕ್ರೀಸ್ನಲ್ಲಿದ್ದಾರೆ.
Published On - 11:17 am, Sun, 11 June 23




