Yashasvi Jaiswal: ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದರು ಎಂಬುದು ಶುದ್ಧ ಸುಳ್ಳು: ಶಾಕಿಂಗ್ ವಿಚಾರ ಬಹಿರಂಗ

Yashasvi Jaiswal Coach Jwala Singh: ಯಶಸ್ವಿ ಜೈಸ್ವಾಲ್ ನಡೆದುಕೊಂಡು ಬಂದ ಹಾದಿಯ ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ಪ್ರತಿಬಾರಿ ಒಂದಲ್ಲ ಒಂದು ಸಾಧನೆ ಮಾಡಿದಾಗ ಪಾನಿಪುರಿ ಮಾರಿ ಜೀವನ ಸಾಗಿಸುತ್ತಿದ್ದರು ಎಂಬ ಸುದ್ದಿ ಓದಿಯೇ ಇರುತ್ತೀರಿ. ಆದರೆ, ಇದು ಸುಳ್ಳು ಸುದ್ದಿಯಂತೆ.

Vinay Bhat
|

Updated on: Jul 18, 2023 | 8:45 AM

ಭಾರತೀಯ ಕ್ರಿಕೆಟ್ ಲೋಕದಲ್ಲಿ ಸದ್ಯ ಟ್ರೆಂಡಿಂಗ್​ನಲ್ಲಿರುವ ಹೆಸರು ಎಂದರೆ ಅದು ಯಶಸ್ವಿ ಜೈಸ್ವಾಲ್. ಐಪಿಎಲ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲಿ ಅಬ್ಬರಿಸಿದರು.

1 / 10
ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿ ತನ್ನ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಸಾಧನೆ ಮಾಡಿದರು. ಈ ಮೂಲಕ ಭಾರತ ತಂಡದಲ್ಲಿ ತನ್ನ ಸ್ಥಾನವನ್ನ ಭದ್ರ ಪಡಿಸಿಕೊಂಡಿದ್ದಾರೆ.

2 / 10
ಯಶಸ್ವಿ ಜೈಸ್ವಾಲ್ ನಡೆದುಕೊಂಡು ಬಂದ ಹಾದಿಯ ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ಪ್ರತಿಬಾರಿ ಒಂದಲ್ಲ ಒಂದು ಸಾಧನೆ ಮಾಡಿದಾಗ ಪಾನಿಪುರಿ ಮಾರಿ ಜೀವನ ಸಾಗಿಸುತ್ತಿದ್ದರು ಎಂಬ ಸುದ್ದಿ ಓದಿಯೇ ಇರುತ್ತೀರಿ. ಆದರೆ, ಇದು ಸುಳ್ಳು ಸುದ್ದಿಯಂತೆ.

3 / 10
ಜೈಸ್ವಾಲ್ ಪಾನಿಪುರಿ ಮಾರಿ ಬೆಳೆದೇ ಇಲ್ಲವೆಂದು ಅವರ ಬಾಲ್ಯದ ಕೋಚ್ ಜ್ವಾಲಾ ಸಿಂಗ್ ಹೇಳಿದ್ದಾರೆ. ರಿಪಬ್ಲಿಕ್ ವರ್ಲ್ಡ್ ನಡೆಸಿದ ಸಂದರ್ಶನದಲ್ಲಿ ಜ್ವಾಲಾ ಅವರು ಮಾತನಾಡಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದಾರೆ.

4 / 10
ಅಂದು ನಾನು ಯಶಸ್ವಿ ಅವರನ್ನು ಸಂದರ್ಶಿಸಲು ಕೆಲವು ಮಾಧ್ಯಮದವರಿಗೆ ಹಲವು ಬಾರಿ ವಿನಂತಿಸಿದ್ದೆ. ಆದರೆ ಅವರು ನನ್ನನ್ನು ತಿರಸ್ಕರಿಸುತ್ತಲೇ ಇದ್ದರು. ಹೀಗಿರುವಾಗ ಒಂದು ದಿನ, ನಾನು ಇಂಗ್ಲೆಂಡ್​ನಲ್ಲಿ ಇದ್ದ ಸಂದರ್ಭ ಯಶಸ್ವಿ ಅವರನ್ನು ಸಂಪರ್ಕಿಸಿ ಸಂದರ್ಶಿಸಲು ಪ್ರಯತ್ನಿಸಿದರು. 16 ವರ್ಷದ ಜೈಸ್ವಾಲ್ ನನಗೆ ಕರೆಮಾಡಿ ವಿಷಯ ತಿಳಿಸಿದ. ನಾನು ಸರಿ, ಮುಂದುವರಿಯಿರಿ ಎಂದು ಹೇಳಿದೆ.

5 / 10
ಸಂದರ್ಶನಲ್ಲಿ ಜೈಶ್ವಾಲ್​ಗೆ ಕೆಲವು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದರು. ಯಶಸ್ವಿ, ಅವನ ಮುಗ್ಧತೆಯಿಂದ ಪಾನಿಪುರಿ ಘಟನೆಯನ್ನು ಪ್ರಸ್ತಾಪಿಸಿದ್ದಾನೆ. ಸಂದರ್ಶನ ಮಾಡಿದವರು ತಮ್ಮ ಕಥೆಗಳಿಗೆ ಪ್ರಾಮುಖ್ಯತೆ ನೀಡಲು, ಪಾನಿಪುರಿ ವಿಷಯವನ್ನು ತಮ್ಮ ಶೀರ್ಷಿಕೆಯಾಗಿ ಬಳಸಿ ದೊಡ್ಡ ಸುದ್ದಿ ಮಾಡಿದರು ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.

6 / 10
ಜೈಸ್ವಾಲ್ ಪ್ರತಿ ಬಾರಿ ಪ್ರದರ್ಶನ ನೀಡಿದಾಗ, ಪಾನಿಪುರಿ ಸ್ಟಾಲ್‌ನಲ್ಲಿ ವ್ಯಕ್ತಿಯೊಂದಿಗೆ ನಿಂತಿರುವ ಫೋಟೋ ಕಾಣಿಸುತ್ತದೆ. ಆದರೆ, ಆ ಫೋಟೋದಲ್ಲಿ ಇರುವುದು ಆತನ ತಂದೆ ಅಲ್ಲ. ಅದೊಂದು ಸಾಂದರ್ಭಿಕ ಚಿತ್ರವಷ್ಟೆ. ಜೈಸ್ವಾಲ್ ಹಾಗೂ ಅವನ ತಂದೆ ಜೀವನೋಪಾಯಕ್ಕಾಗಿ ಪಾನಿಪುರಿ ಮಾರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

7 / 10
2013 ರಲ್ಲಿ ಅವರು ನನ್ನೊಂದಿಗೆ ಕ್ರಿಕೆಟ್ ತರಬೇತಿಯನ್ನು ಪ್ರಾರಂಭಿಸಿದಾಗ ಪಾನಿಪುರಿಗಳನ್ನು ಮಾರಾಟ ಮಾಡುತ್ತಿರಲ್ಲ. ಅವನು ಮೊದಲು ಮುಂಬೈಗೆ ಬಂದು ಟೆಂಟ್‌ನಲ್ಲಿ ವಾಸಿಸುತ್ತಿದ್ದಾಗ, ಕೆಲವೇ ದಿನಗಳವರೆಗೆ ಮಾರಿರಬಹುದು. ಅವರಿಗೆ ಮೂಲ ಸೌಕರ್ಯಗಳಿರಲಿಲ್ಲ, ವಿದ್ಯುತ್ ಇರಲಿಲ್ಲ, ಸರಿಯಾದ ಆಹಾರವಿರಲಿಲ್ಲ, ಮಳೆಗಾಲದಲ್ಲಿ ಅವರ ಟೆಂಟ್ ನೀರಿನಿಂದ ತುಂಬಿರುತ್ತಿತ್ತು- ಜ್ವಾಲಾ ಸಿಂಗ್.

8 / 10
ನಾನು ಅವನನ್ನು ಕಳೆದ 10 ವರ್ಷಗಳಿಂದ ನೋಡುತ್ತಿದ್ದೇನೆ. ತರಬೇತಿ ನೀಡುತ್ತಿದ್ದೇನೆ. ಆದರೆ, ಈಗಲೂ U-19 ವಿಶ್ವಕಪ್ 2020 ರ ಮೊದಲು ಪಾನಿಪುರಿ ಮಾರುತ್ತಿದ್ದರು ಎಂದು ಬರೆಯುತ್ತಾರೆ. ಈ ರೀತಿಯ ಸ್ಟೋರಿಗಳು ಅವನಿಗೆ ಸಹಾಯ ಮಾಡಿದ ಜನರ ಕೊಡುಗೆಯನ್ನು ಕೀಳಾಗಿಸುತ್ತವೆ ಎಂಬುದು ಜ್ವಾಲಾ ಸಿಂಗ್ ಅಭಿಪ್ರಾಯ.

9 / 10
ಜೈಸ್ವಾಲ್ ಆರಂಭದಲ್ಲಿ ಮುಂಬೈಗೆ ಬಂದಾಗ, ಅವರ ಪೋಷಕರು ಪ್ರತಿ ತಿಂಗಳು 1000 ರೂ. ಕಳುಹಿಸುತ್ತಿದ್ದರು. ಅವರ ತಂದೆ ಪೇಂಟ್ ಅಂಗಡಿ ಹೊಂದಿದ್ದಾರೆ. ಜೈಸ್ವಾಲ್ ಇಂದು ಕ್ರಿಕೆಟ್ ಆಡುತ್ತಿರುವುದು ಸರಿಯಾದ ಕೋಚಿಂಗ್ ಸಿಕ್ಕ ಕಾರಣ. ನಾನು ಅವರಿಗೆ ಆಹಾರ, ವಸತಿ ಎಲ್ಲವನ್ನೂ ಒದಗಿಸಲು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನನ್ನ ಜೀವನದ 9 ಅಮೂಲ್ಯ ವರ್ಷಗಳನ್ನು ಜೈಸ್ವಾಲ್​ಗೆ ನೀಡಿದ್ದೇನೆ ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.

10 / 10
Follow us
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್

ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?

ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ