IND vs ENG 2nd Test: 4 ವರ್ಷಗಳ ಬರ ಅಂತ್ಯ: ಜೈಸ್ವಾಲ್​ಗು ಮುನ್ನ ಟೆಸ್ಟ್​ನಲ್ಲಿ ಕೊನೆಯ ದ್ವಿಶತಕ ಬಂದಿದ್ದು 2019 ರಲ್ಲಿ

Yashasvi Jaiswal Double Hundred: ಯಶಸ್ವಿ ಜೈಸ್ವಾಲ್ ಏಕಾಂಗಿಯಾಗಿ ನಿಂತು ಇಂಗ್ಲೆಂಡ್‌ನ ಪ್ರತಿಯೊಬ್ಬ ಬೌಲರ್‌ಗಳನ್ನು ಎದುರಿಸಿದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಇವರು ದ್ವಿಶತಕ ಸಿಡಿಸಿ ಅಬ್ಬರಿಸಿದರು. 22 ವರ್ಷದ ಜೈಸ್ವಾಲ್ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಮೂರನೇ ಅತಿ ಕಿರಿಯ ಭಾರತೀಯ.

Vinay Bhat
|

Updated on: Feb 03, 2024 | 11:53 AM

ಯಶಸ್ವಿ ಜೈಸ್ವಾಲ್ ವಿಶಾಖಪಟ್ಟಣದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಒಂದು ತುದಿಯಲ್ಲಿ ಇಂಗ್ಲೆಂಡ್ ಬೌಲರ್‌ಗಳು ಭಾರತದ ಉಳಿದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರೆ ಇನ್ನೊಂದು ತುದಿಯಲ್ಲಿ ಯಶಸ್ವಿ ಜೈಸ್ವಾಲ್ ಬಂಡೆಯಂತೆ ನಿಂತು ತಂಡಕ್ಕೆ ಆಧಾರವಾದರು.

1 / 6
ಜೈಸ್ವಾಲ್ ಏಕಾಂಗಿಯಾಗಿ ನಿಂತು ಇಂಗ್ಲೆಂಡ್‌ನ ಪ್ರತಿಯೊಬ್ಬ ಬೌಲರ್‌ಗಳನ್ನು ಎದುರಿಸಿದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಇವರು ದ್ವಿಶತಕ ಸಿಡಿಸಿ ಅಬ್ಬರಿಸಿದರು. 22 ವರ್ಷದ ಜೈಸ್ವಾಲ್ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಮೂರನೇ ಅತಿ ಕಿರಿಯ ಭಾರತೀಯ. ದ್ವಿಶತಕ ಗಳಿಸುವ ಮೂಲಕ ಯಶಸ್ವಿ ಭಾರತೀಯ ಕ್ರಿಕೆಟ್‌ನಲ್ಲಿ 4 ವರ್ಷಗಳ ಬರಗಾಲವನ್ನೂ ಕೊನೆಗೊಳಿಸಿದರು.

2 / 6
ಕೊನೆಯ 4 ವರ್ಷಗಳಿಂದ ಭಾರತದ ಯಾವುದೇ ಬ್ಯಾಟ್ಸ್‌ಮನ್‌ಗಳು ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಲು ಸಾಧ್ಯವಾಗಲಿಲ್ಲ. ಮಯಾಂಕ್ ಅಗರ್ವಾಲ್ ಕೊನೆಯ ಬಾರಿಗೆ ದ್ವಿಶತಕ ಬಾರಿಸಿದ್ದು 2019ರಲ್ಲಿ. ಈ ಬರವನ್ನು ಕೊನೆಗೊಳಿಸಿ, ಜೈಸ್ವಾಲ್ ಅವರು ವಿನೋದ್ ಕಾಂಬ್ಳಿ ಮತ್ತು ಸುನಿಲ್ ಗವಾಸ್ಕರ್ ನಂತರ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೂರನೇ ಕಿರಿಯ ಭಾರತೀಯರಾದರು.

3 / 6
290 ಎಸೆತಗಳನ್ನು ಎದುರಿಸಿದ ಅವರು 7 ಸಿಕ್ಸರ್ ಹಾಗೂ 19 ಬೌಂಡರಿಗಳ ನೆರವಿನಿಂದ 209 ರನ್ ಗಳಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ದ್ವಿಶತಕವಾಗಿದೆ, ಇದು ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ಅವರ ಗರಿಷ್ಠ ಸ್ಕೋರ್ ಕೂಡ ಆಗಿದೆ. ಇದಕ್ಕೂ ಮೊದಲು ಟೆಸ್ಟ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ 171 ರನ್ ಆಗಿತ್ತು.

4 / 6
ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಆಂಡರ್ಸನ್ ಔಟ್ ಮಾಡಿದರು. ಅವರ ಇನ್ನಿಂಗ್ಸ್ ಸಮಯದಲ್ಲಿ, 3 ಅರ್ಧಶತಕಗಳ ಜೊತೆಯಾಟದಲ್ಲಿ ಪಾಲುದಾರರಾಗಿದ್ದರು. ಮೊದಲ ದಿನದ 179 ರನನ್ ಬಾರಿಸಿದ್ದ ಯಶಸ್ವಿ ಎರಡನೇ ದಿನ ಆಟ ಆರಂಭಿಸಿದರು. ಎರಡನೇ ದಿನ ಅವರು ತಮ್ಮ ಸ್ಕೋರ್‌ಗೆ ಇನ್ನೂ 30 ರನ್ ಸೇರಿಸದರು.

5 / 6
ಯಶಸ್ವಿ ಜೈಸ್ವಾಲ್ 10ನೇ ಇನ್ನಿಂಗ್ಸ್‌ನಲ್ಲಿ ಟೆಸ್ಟ್‌ನಲ್ಲಿ ಮೊದಲ ದ್ವಿಶತಕ ದಾಖಲಿಸಿದರು. ಇದಕ್ಕೂ ಮೊದಲು ಆಡಿದ 9 ಇನ್ನಿಂಗ್ಸ್‌ಗಳಲ್ಲಿ ಅವರು 1 ಶತಕ ಮತ್ತು 2 ಅರ್ಧ ಶತಕಗಳನ್ನು ಹೊಂದಿದ್ದಾರೆ. ಯಶಸ್ವಿ ಜೈಸ್ವಾಲ್ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ 25ನೇ ಭಾರತೀಯ ಕೂಡ ಆಗಿದ್ದಾರೆ.

6 / 6
Follow us
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು

ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ