- Kannada News Photo gallery Cricket photos Yearender 2021 Indian football Sunil Chhetri went past Pele India won 8th SAFF title women braced for their moment of reckoning
Year ender 2021: ಪೀಲೆ ಹಿಂದಿಕ್ಕಿದ ಸುನಿಲ್ ಛೆಟ್ರಿ, ಮಿಂಚಿದ ಮಹಿಳಾ ತಂಡ; ಇದು ಭಾರತೀಯ ಫುಟ್ಬಾಲ್ ವರ್ಷದ ಕತೆ
Year ender 2021: ಈ ವರ್ಷ ಸುನಿಲ್ ಛೆಟ್ರಿ SAIF ಚಾಂಪಿಯನ್‌ಶಿಪ್‌ನಲ್ಲಿ ನೇಪಾಳ ವಿರುದ್ಧ ಮೊದಲ ಗೋಲು ಗಳಿಸುವ ಮೂಲಕ ಪೀಲೆಯನ್ನು ಹಿಂದಿಕ್ಕಿದರು. ಈಗ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 80 ಗೋಲುಗಳನ್ನು ಹೊಂದಿದ್ದಾರೆ
Updated on: Dec 28, 2021 | 5:37 PM

2021 ರ ವರ್ಷವು ಭಾರತೀಯ ಫುಟ್‌ಬಾಲ್‌ಗೆ ವಿಶೇಷವಾಗಿ ಗಮನಾರ್ಹವಾಗಿಲ್ಲ, ಇದರಲ್ಲಿ ಕೆಲವು ಗೆಲುವುಗಳು ಸಿಕ್ಕರೆ, ಕೆಲವು ಸೋಲುಗಳು ಸಿಕ್ಕಿವೆ. ಈ ವರ್ಷ ನಾಯಕ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಗೋಲುಗಳ ವಿಷಯದಲ್ಲಿ ಫುಟ್ಬಾಲ್ ಮಾಂತ್ರಿಕ ಪೀಲೆ ಅವರನ್ನು ಹಿಂದಿಕ್ಕಿದರು. ಜೊತೆಗೆ ಮಹಿಳಾ ತಂಡದ ಪ್ರದರ್ಶನದ ಬಗ್ಗೆಯೂ ಚರ್ಚೆಯಾಯಿತು. 2021 ರಲ್ಲಿ ಭಾರತೀಯ ಫುಟ್‌ಬಾಲ್ ಯಾವುದೇ ಪ್ರಮುಖ ಯಶಸ್ಸನ್ನು ಪಡೆಯಲಿಲ್ಲ. ಹೀಗಾಗಿ ತಂಡವು ಐವತ್ತರ ಮತ್ತು ಅರವತ್ತರ ದಶಕದ ತನ್ನ ಕಳೆದುಹೋದ ವೈಭವವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ಈ ಆಟದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುವ ಕ್ಷಣಕ್ಕಾಗಿ ಕಾಯುತ್ತಲೇ ಇತ್ತು.

ಈ ವರ್ಷ ಸುನಿಲ್ ಛೆಟ್ರಿ SAIF ಚಾಂಪಿಯನ್‌ಶಿಪ್‌ನಲ್ಲಿ ನೇಪಾಳ ವಿರುದ್ಧ ಮೊದಲ ಗೋಲು ಗಳಿಸುವ ಮೂಲಕ ಪೀಲೆಯನ್ನು ಹಿಂದಿಕ್ಕಿದರು. ಈಗ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 80 ಗೋಲುಗಳನ್ನು ಹೊಂದಿದ್ದಾರೆ ಮತ್ತು ಲಿಯೋನೆಲ್ ಮೆಸ್ಸಿಯನ್ನು ಸರಿಗಟ್ಟಿದ್ದಾರೆ. ಭಾರತವು ಬಾಂಗ್ಲಾದೇಶ ವಿರುದ್ಧ ಡ್ರಾ ಮಾಡಿಕೊಂಡಿತು. ನಂತರ ಶ್ರೀಲಂಕಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತು, ಇದು ವ್ಯಾಪಕ ಟೀಕೆಗೆ ಗುರಿಯಾಯಿತು. ಆದರೆ ಭಾರತ ತಂಡ ಎಚ್ಚರಿಕೆ ನೀಡಿ ಸಮಯಕ್ಕೆ ಸರಿಯಾಗಿ ತಿರುಗೇಟು ನೀಡುವ ಮೂಲಕ ಪಂದ್ಯಾವಳಿಯನ್ನು ಗೆದ್ದುಕೊಂಡಿತು.

ಭಾರತವು ದಾಖಲೆಯ ಎಂಟನೇ ಬಾರಿಗೆ SAIF ಚಾಂಪಿಯನ್‌ಶಿಪ್ ಗೆದ್ದಿದೆ. ಆದರೆ ಪ್ರಾದೇಶಿಕ ಪಂದ್ಯಾವಳಿಯಲ್ಲಿನ ಗೆಲುವು ತಂಡದ ವರ್ಚಸ್ಸ್ ಅನ್ನು ಹೆಚ್ಚು ಬದಲಾಯಿಸುವುದಿಲ್ಲ. ದೊಡ್ಡ ತಂಡಗಳ ವಿರುದ್ಧ ಗೆಲ್ಲುವುದು ಭಾರತಕ್ಕೆ ಅತ್ಯಗತ್ಯವಾಗಿದೆ. FIFA ವರ್ಲ್ಡ್ ಕಪ್ 2022 ಕ್ವಾಲಿಫೈಯರ್‌ನಲ್ಲಿ, ಭಾರತವು ಎಂಟು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಡ್ರಾ ಕಂಡಿದೆ. ನಂತರ ಮೂರರಲ್ಲಿ ಸೋತು, ಕೇವಲ ಒಂದನ್ನು ಗೆದ್ದು ಒಟ್ಟು ಏಳು ಅಂಕಗಳನ್ನು ಗಳಿಸಿತು. ಅರ್ಹತಾ ಸುತ್ತಿನ ಇ ಗುಂಪಿನಲ್ಲಿ ಭಾರತವು ಕತಾರ್ ಮತ್ತು ಒಮಾನ್ ನಂತರ ಮೂರನೇ ಸ್ಥಾನ ಗಳಿಸಿತು. 2023ರ ಎಎಫ್‌ಸಿ ಏಷ್ಯನ್ ಕಪ್ ಮೂಲಕ ಅರ್ಹತೆ ಪಡೆಯುವ ಅವಕಾಶ ಇನ್ನೂ ಇದೆ.

ಮಹಿಳಾ ಫುಟ್ಬಾಲ್ ತಂಡವು ದಕ್ಷಿಣ ಅಮೇರಿಕಾ ಪ್ರವಾಸ ಮಾಡಿತು ಮತ್ತು ಬ್ರೆಜಿಲ್ನಂತಹ ದಿಗ್ಗಜ ತಂಡದ ವಿರುದ್ಧ ಪಂದ್ಯವನ್ನು ಆಡಿತು. ಮುಂದಿನ ವರ್ಷ ಆತಿಥ್ಯ ವಹಿಸಲಿರುವ ಎಎಫ್‌ಸಿ ಏಷ್ಯನ್ ಕಪ್ ಹಾಗೂ 17 ವರ್ಷದೊಳಗಿನವರ ಫಿಫಾ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದ ಭಾರತ ಮಹಿಳಾ ತಂಡ 14 ಪಂದ್ಯಗಳಲ್ಲಿ 11ರಲ್ಲಿ ಸೋತಿದೆ. ಎಎಫ್‌ಸಿ ಮಹಿಳೆಯರ ಏಷ್ಯನ್ ಕಪ್‌ನಲ್ಲಿ ಭಾರತವು ಇರಾನ್, ಚೈನೀಸ್ ತೈಪೆ ಮತ್ತು ಚೀನಾದೊಂದಿಗೆ ಸೇರಿಕೊಂಡಿದೆ.

ಈ ವರ್ಷ ಇಂಡಿಯನ್ ಸೂಪರ್ ಲೀಗ್ ತಂಡ FC ಗೋವಾ AFC ಚಾಂಪಿಯನ್ಸ್ ಲೀಗ್ ಆಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ಲಬ್ ಆಗಿದೆ.



















