ಬರೋಬ್ಬರಿ 15 ವಿಕೆಟ್; ಆಂಗ್ಲರ ನಾಡಿನಲ್ಲಿ ಚಾಹಲ್ ಚಮತ್ಕಾರ

Updated on: Aug 10, 2026 | 3:02 PM

Yuzvendra Chahal's England Magic: ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ಕಂಬ್ಯಾಕ್ ಆಶಯದೊಂದಿಗೆ ಆಡುತ್ತಿರುವ ಸ್ಪಿನ್ನರ್ ಯುಜುವೇಂದ್ರ ಚಾಹಲ್, ಇಂಗ್ಲೆಂಡ್ ದೇಶೀಯ ಏಕದಿನ ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನಾರ್ಥಾಂಪ್ಟನ್‌ಶೈರ್‌ ಪರ 7 ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಪ್ರದರ್ಶನ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

1 / 5
ಟೀಂ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳುವ ಸಲುವಾಗಿ ವಿದೇಶಿ ನೆಲದಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್​ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದೇಶೀಯ ಏಕದಿನ ಕಪ್‌ನಲ್ಲಿ ಕೌಂಟಿ ತಂಡ ನಾರ್ಥಾಂಪ್ಟನ್‌ಶೈರ್‌ ಪರ ಆಡುತ್ತಿರುವ ಚಾಹಲ್, ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗುತ್ತಿದ್ದಾರೆ(PC-County).

2 / 5
ಇತ್ತೀಚೆಗೆ ನಡೆದ ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ, ಚಾಹಲ್ ಮತ್ತೊಮ್ಮೆ ತಮ್ಮ ಮ್ಯಾಜಿಕ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ ತಮ್ಮ ಖೋಟಾದ 10 ಓವರ್‌ಗಳಲ್ಲಿ ಕೇವಲ 35 ರನ್‌ಗಳನ್ನು ನೀಡಿ 3 ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಚಾಹಲ್ ಅವರ ಈ ಮ್ಯಾಜಿಕ್​ನಿಂದಾಗಿ ನಾರ್ಥಾಂಪ್ಟನ್‌ಶೈರ್, ಸೋಮರ್‌ಸೆಟ್ ತಂಡವನ್ನು ಕೇವಲ 185 ರನ್‌ಗಳಿಗೆ ಆಲೌಟ್ ಮಾಡಿ ಆ ನಂತರ ಏಳು ವಿಕೆಟ್‌ಗಳ ಸುಲಭ ಜಯ ದಾಖಲಿಸಿತು(PC-County).

3 / 5
ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಲಯದಲ್ಲಿರುವ ಚಾಹಲ್ ಏಕದಿನ ಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿದೇಶಿ ಬೌಲರ್‌ಗಳಲ್ಲಿ ಬೌಲರ್ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಆಡಿದ ಏಳು ಪಂದ್ಯಗಳಲ್ಲಿ, ಅವರು 21.00 ಸರಾಸರಿಯಲ್ಲಿ ಒಟ್ಟು 15 ವಿಕೆಟ್​ಗಳನ್ನು ಪಡೆದಿದ್ದಾರೆ(PC-County).

4 / 5
 ವಾರ್ವಿಕ್‌ಷೈರ್ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್‌ ಕಬಳಿಸುವ ಮೂಲಕ ಈ ಪಂದ್ಯಾವಳಿಯನ್ನು ಪ್ರಾರಂಭಿಸಿದ ಚಾಹಲ್ ಆ ನಂತರ ಕೆಂಟ್ ತಂಡದ ವಿರುದ್ಧ ಎರಡು ವಿಕೆಟ್‌, ಲೀಸೆಸ್ಟರ್‌ಷೈರ್ ವಿರುದ್ಧ ಒಂದು ವಿಕೆಟ್ ಪಡೆದರು. ನಂತರ ಲಂಕಾಷೈರ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಪಡೆದ ಚಾಹಲ್, ನಾಟಿಂಗ್‌ಹ್ಯಾಮ್‌ಷೈರ್ ವಿರುದ್ಧ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು(PC-County).

5 / 5
ವಿದೇಶಿ ನೆಲದಲ್ಲಿ ವಿಕೆಟ್​ಗಳ ಭೇಟೆ ನಡೆಸುತ್ತಿರುವ ಚಾಹಲ್ ಅವರನ್ನು ಭಾರತ ತಂಡದಲ್ಲಿ ಮಾತ್ರ ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಚಾಹಲ್ ಸುಮಾರು ಮೂರು ವರ್ಷಗಳಿಂದ ಭಾರತ ಪರ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಆದಾಗ್ಯೂ, ಇಂಗ್ಲೆಂಡ್‌ನಲ್ಲಿ ಅವರ ಅದ್ಭುತ ಪ್ರದರ್ಶನ ಮತ್ತೊಮ್ಮೆ ಆಯ್ಕೆದಾರರು ಮತ್ತು ಅಭಿಮಾನಿಗಳ ಗಮನ ಸೆಳೆದಿದೆ(PC-County).

Loading...
Unable to load recommendations.
Follow Us