Cristiano Ronaldo: ವರ್ಷಕ್ಕೆ 1,687 ಕೋಟಿ ರೂ: ಹೊಸ ಕ್ಲಬ್ ಜೊತೆ ರೊನಾಲ್ಡೊ ಬಿಗ್ ಡೀಲ್?
TV9 Web | Updated By: ಝಾಹಿರ್ ಯೂಸುಫ್
Updated on:
Nov 30, 2022 | 8:31 PM
Cristiano Ronaldo: 2013 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಮ್ಯಾನೇಜರ್ ಆಗಿದ್ದ ಅಲೆಕ್ಸ್ ಫರ್ಗುಸನ್ ನಿವೃತರಾದ ಬಳಿಕ ಕ್ಲಬ್ನಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ರೊನಾಲ್ಡೊ ಆರೋಪಿಸಿದ್ದರು. ವಿಶೇಷ ಎಂದರೆ ಕ್ರಿಸ್ಟಿಯಾನೊ ಅವರನ್ನು ವಿಶ್ವ ಫುಟ್‌ಬಾಲ್ ಪರಿಚಯಿಸಿದ್ದು ಕೂಡ ಇದೇ ಫರ್ಗುಸನ್.
1 / 9
Cristiano Ronaldo: ವಿಶ್ವದ ಖ್ಯಾತ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮುಂದಿನ ಕ್ಲಬ್ ಯಾವುದೆಂಬ ಚರ್ಚೆಗಳ ಶುರುವಾಗಿದೆ. ಏಕೆಂದರೆ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿರುವ ಪೋರ್ಚುಗಲ್ ಸ್ಟಾರ್ ಹೊಸ ಕ್ಲಬ್ ಅನ್ನು ಎದುರು ನೋಡುತ್ತಿದ್ದಾರೆ.
2 / 9
ಇದರ ನಡುವೆ ಸೌದಿ ಅರೇಬಿಯಾ ಮೂಲದ ಅಲ್ ನಾಸ್ರ್ ಫುಟ್‌ಬಾಲ್ ಕ್ಲಬ್ ಕ್ರಿಸ್ಟಿಯಾನೊ ಜೊತೆ ಬಿಗ್ ಡೀಲ್ ಕುದಿರಿಸಿದೆ ಎಂದು ವರದಿಯಾಗಿದೆ. ಅದು ಕೂಡ 432 ಮಿಲಿಯನ್ ಪೌಂಡ್ ನೀಡುವ ಮೂಲಕ ಎಂಬುದೇ ಅಚ್ಚರಿ.
3 / 9
ಸ್ಪ್ಯಾನಿಷ್ ಪತ್ರಿಕೆಯ ಔಟ್‌ಲೆಟ್ ಮಾರ್ಕಾ ವರದಿ ಪ್ರಕಾರ, ಕ್ರಿಸ್ಟಿಯಾನೊ ರೊನಾಲ್ಡೊ ಅವರೊಂದಿಗೆ ಅಲ್ ನಾಸ್ರ್ ಫುಟ್‌ಬಾಲ್ ಕ್ಲಬ್ ಡೀಲ್ ಕುದಿರಿಸಿದ್ದು, ಅದರಂತೆ ಶೀಘ್ರದಲ್ಲೇ ರೊನಾಲ್ಡೊ ಹೊಸ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಒಪ್ಪಂದದ ಪ್ರಕಾರ ಕ್ರಿಸ್ಟಿಯಾನೊ 432 ಮಿಲಿಯನ್ ಪೌಂಡ್ ಪಡೆದು ಅಲ್ ನಾಸ್ರ್ ಪರ ಎರಡೂವರೆ ವರ್ಷ ಆಡಲಿದ್ದಾರೆ. ಅಂದರೆ ಪ್ರತಿ ವರ್ಷ ಪೋರ್ಚುಗಲ್ ಆಟಗಾರನಿಗೆ ಕ್ಲಬ್ ಭಾರತೀಯ ಮೌಲ್ಯ 1,687 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಸಲಿದೆ.
4 / 9
ಅಲ್-ನಾಸ್ರ್ ಸೌದಿ ಅರೇಬಿಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಒಂದು. ಹೀಗಾಗಿಯೇ ಕ್ರಿಸ್ಟಿಯಾನೊ ಕೂಡ ಹೊಸ ಕ್ಲಬ್ನತ್ತ ಮುಖ ಮಾಡಲು ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಡೀಲ್ ಯಶಸ್ವಿಯಾದರೆ, ಕ್ರಿಸ್ಟಿಯಾನೊ ನಾಲ್ಕನೇ ಕ್ಲಬ್ ಪರ ಆಡಿದಂತಾಗುತ್ತದೆ.
5 / 9
ಈ ಹಿಂದೆ ಪೋರ್ಚುಗಲ್ನ ಸ್ಪೋರ್ಟಿಂಗ್ ಕ್ಲಬ್ ಪರ ಕಣಕ್ಕಿಳಿಯುವ ಮೂಲಕ ಫುಟ್‌ಬಾಲ್ ಕೆರಿಯರ್ ಆರಂಭಿಸಿದ್ದ ಕ್ರಿಸ್ಟಿಯಾನೊ ಆ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಜೆರ್ಸಿಯಲ್ಲಿ ಮಿಂಚಿದ್ದರು. ಇದಾದ ಬಳಿಕ ಸ್ಪೇನ್ನ ರಿಯಲ್ ಮ್ಯಾಡ್ರಿಡ್ನತ್ತ ಮುಖ ಮಾಡಿದ್ದ ರೊನಾಲ್ಡೊ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಅಲ್ಲಿಂದ ಇಟಲಿಯ ಯುವೆಂಟಸ್ ಪರ ಆಡಿದ್ದ ರೊನಾಲ್ಡೊ ಕಳೆದ ವರ್ಷವಷ್ಟೇ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಗೆ ಮರಳಿದ್ದರು.
6 / 9
ಆದರೆ ಹಳೆಯ ಕ್ಲಬ್ ಪರ ಕಾಣಿಸಿಕೊಂಡರೂ ರೊನಾಲ್ಡೊ ಅವರಿಗೆ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜರ್ ಟೆನ್ ಹಾಗ್ - ರೊನಾಲ್ಡೊ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಈ ಬಗ್ಗೆ ಪೋರ್ಚುಗಲ್ ಆಟಗಾರ ಬಹಿರಂಗ ಹೇಳಿಕೆಗಳನ್ನು ನೀಡಿ ಆಕ್ರೋಶ ಹೊರಹಾಕಿದ್ದರು.
7 / 9
ಆದರೆ ಹಳೆಯ ಕ್ಲಬ್ ಪರ ಕಾಣಿಸಿಕೊಂಡರೂ ರೊನಾಲ್ಡೊ ಅವರಿಗೆ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜರ್ ಟೆನ್ ಹಾಗ್ - ರೊನಾಲ್ಡೊ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಈ ಬಗ್ಗೆ ಪೋರ್ಚುಗಲ್ ಆಟಗಾರ ಬಹಿರಂಗ ಹೇಳಿಕೆಗಳನ್ನು ನೀಡಿ ಆಕ್ರೋಶ ಹೊರಹಾಕಿದ್ದರು.
8 / 9
ಇದರ ನಡುವೆ ಸಂದರ್ಶನವೊಂದರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಹಾಗೂ ಮ್ಯಾನೇಜರ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಪರಸ್ಪರ ಸಮ್ಮತಿಯ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ - ರೊನಾಲ್ಡೊ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದರು. ಅದರಂತೆ ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಕ್ರಿಸ್ಟಿಯಾನೊ ತನ್ನ ನೆಚ್ಚಿನ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದಿದ್ದರು.
9 / 9
ಇದೀಗ ಫಿಫಾ ವಿಶ್ವಕಪ್ನಲ್ಲಿ 37 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ಇದು ರೊನಾಲ್ಡೊ ಅವರ ಕೊನೆಯ ವಿಶ್ವಕಪ್ ಕೂಡ ಆಗಿದೆ. ಇವೆಲ್ಲದರ ನಡುವೆ ಫುಟ್‌ಬಾಲ್ ಅಂಗಳದ ಆಕ್ರಮಣಕಾರಿ ಆಟಗಾರ ಎಂದೇ ಗುರುತಿಸಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅಲಿಯಾಸ್ ಸಿಎಸ್7 ಅವರನ್ನು ಸೌದಿ ಅರೇಬಿಯಾ ಕ್ಲಬ್ 1,687 ಕೋಟಿ ರೂ. ನೀಡಿ ಖರೀದಿಸಲು ಮುಂದಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.