ನಟ ಡಾರ್ಲಿಂಗ್ ಕೃಷ್ಣ ಅವರು ಪ್ರತಿ ಬಾರಿ ಸಿಸಿಎಲ್ನಲ್ಲಿ ಮಿಂಚುತ್ತಾರೆ. ಈ ಬಾರಿಯೂ ಅವರು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಆಸರೆ ಆಗಿ ನಿಂತಿದ್ದಾರೆ. ಈಗ ಸಿಸಿಎಲ್ ಪೂರ್ಣಗೊಂಡಿದ್ದು ಅವರಿಗೆ ವಿಶೇಷ ಗೌರವ ಸಿಕ್ಕಿದೆ.
ಸಿಸಿಎಲ್ ಭಾನುವಾರ ಪೂರ್ಣಗೊಂಡಿದೆ. ಕಿಚ್ಚನ ತಂಡ ಸೆಮಿಫೈನಲ್ನಲ್ಲೇ ಸೋತ್ತಿದ್ದರಿಂದ ಕಪ್ ಗೆಲ್ಲುವ ಆಸೆ ಕೊನೆ ಆಯಿತು. ಸಿಸಿಎಲ್ನವರು ಡಾರ್ಲಿಂಗ್ ಕೃಷ್ಣ ಅವರ ಬ್ಯಾಟಿಂಗ್ನ ಗಮನಿಸಿ ಗೌರವ ನೀಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರು ಈ ಬಾರಿ ಸಿಸಿಲ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪರ ಬ್ಯಾಟ್ ಬೀಸಿದರು. ಅವರಿಗೆ ‘ಬ್ಯಾಟರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಸಿಕ್ಕಿದೆ. ಈ ಅವಾರ್ಡ್ ಪಡೆದು ಅವರು ಖುಷಿಪಟ್ಟಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರು ಈ ಬಾರಿ ಶತಕ ಕೂಡ ಬಾರಿಸಿದ್ದರು. ಹಲವು ಪ್ರಮುಖ ಪಂದ್ಯಗಳಲ್ಲಿ ಅವರಿಂದ ರನ್ ಹೊಳೆಯೇ ಹರಿದಿದೆ. ಈ ಮೂಲಕ ಅವರು ತಂಡದ ಪ್ರಮುಖ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಮಿಲನಾ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರಿಗೆ ಮಗು ಕೂಡ ಜನಿಸಿದೆ.