ಮೈಸೂರು ಅರಮನೆಯಲ್ಲಿ ಸರಳ ದಸರಾ: ಆಯುಧ, ಗಜಪಡೆ ಮತ್ತು ಫಿರಂಗಿ ಗಾಡಿಗಳಿಗೆ ಪೂಜೆ

ಮೈಸೂರು: ಆಯುಧ ಪೂಜೆ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮೈಸೂರು ರಾಜಮನೆತನದಿಂದ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿದೆ. ಯದುವಂಶದ ಮಹಾರಾಜ ಯದುವೀರ್ ಒಡೆಯರ್‌ ಅರಮನೆಯ ಕಲ್ಯಾಣಮಂಟಪದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ್ರು. ನಂತರ 10.50ರಿಂದ 11.15 ಶುಭಲಗ್ನದಲ್ಲಿ ಸವಾರಿ ತೊಟ್ಟಿಯಲ್ಲಿ ಅರಮನೆಯ ವಾಹನಗಳು ಹಾಗೂ ಪ್ರಾಣಿಗಳಿಗೆ ಪೂಜೆ ನೆರವೇರಿಸಿದ್ರು. ಅರಮನೆ ಒಳಗೆ ಸಂಪೂರ್ಣ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. 35 ಮಂದಿ ಸಿಬ್ಬಂದಿ ಭಾಗಿಯಾಗುತ್ತಿದ್ದ ಕಾರ್ಯಕ್ರಮದಲ್ಲಿ ಕೇವಲ 7 ರಿಂದ 8 […]

ಮೈಸೂರು ಅರಮನೆಯಲ್ಲಿ ಸರಳ ದಸರಾ: ಆಯುಧ, ಗಜಪಡೆ ಮತ್ತು ಫಿರಂಗಿ ಗಾಡಿಗಳಿಗೆ ಪೂಜೆ
ಆಯೇಷಾ ಬಾನು

Updated on: Nov 23, 2020 | 12:39 PM

ಮೈಸೂರು: ಆಯುಧ ಪೂಜೆ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮೈಸೂರು ರಾಜಮನೆತನದಿಂದ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿದೆ. ಯದುವಂಶದ ಮಹಾರಾಜ ಯದುವೀರ್ ಒಡೆಯರ್‌ ಅರಮನೆಯ ಕಲ್ಯಾಣಮಂಟಪದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ್ರು.

ನಂತರ 10.50ರಿಂದ 11.15 ಶುಭಲಗ್ನದಲ್ಲಿ ಸವಾರಿ ತೊಟ್ಟಿಯಲ್ಲಿ ಅರಮನೆಯ ವಾಹನಗಳು ಹಾಗೂ ಪ್ರಾಣಿಗಳಿಗೆ ಪೂಜೆ ನೆರವೇರಿಸಿದ್ರು. ಅರಮನೆ ಒಳಗೆ ಸಂಪೂರ್ಣ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. 35 ಮಂದಿ ಸಿಬ್ಬಂದಿ ಭಾಗಿಯಾಗುತ್ತಿದ್ದ ಕಾರ್ಯಕ್ರಮದಲ್ಲಿ ಕೇವಲ 7 ರಿಂದ 8 ಮಂದಿ ಭಾಗಿಯಾಗಿದ್ದಾರೆ.

ದಸರಾ ಗಜಪಡೆಗೆ ಪೂಜೆ:
ಅರಮನೆ ಆವರಣದಲ್ಲಿ ಅರ್ಜುನ, ವಿಜಯ, ಕಾವೇರಿ ದಸರಾ ಗಜಪಡೆಗೆ ಅರಿಸಿನ, ಕುಂಕುಮ ಮತ್ತು ಹೂವು ಹಾಕಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾಗಿಯಾಗಿದ್ದರು. ಇನ್ನು ಪೊಲೀಸ್ ಇಲಾಖೆಯಿಂದ ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿದೆ.

Published On - 12:07 pm, Sun, 25 October 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us