
ನಟಿ ಸಮಂತಾ ರುತ್ ಪ್ರಭು ಹಾಗೂ ನಟ ವಿಜಯ್ ದೇವರಕೊಂಡ ಅವರು ಜೊತೆಯಾಗಿ ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ಈಗಾಗಲೇ ‘ಖುಷಿ’ ಚಿತ್ರಕ್ಕೆ ಕಾಶ್ಮೀರದಲ್ಲಿ ಒಂದು ಹಂತದ ಶೂಟಿಂಗ್ ಮುಗಿಸಲಾಗಿತ್ತು. ಆದರೆ ಮುಂದಿನ ಹಂತದ ಚಿತ್ರೀಕರಣಕ್ಕೆ ಸಮಂತಾ ಹಾಜರಾಗಿಲ್ಲ ಎನ್ನಲಾಗಿದೆ. ಇದರಿಂದ ಚಿತ್ರತಂಡಕ್ಕೆ ಸಮಸ್ಯೆ ಆಗಿತ್ತು.

ಮೂಲಗಳ ಪ್ರಕಾರ ಸಮಂತಾ ಅವರಿಗೆ ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ಸೂಕ್ತ ಚಿಕಿತ್ಸೆ ಪಡೆಯಲು ಅವರು ವಿದೇಶಕ್ಕೆ ತೆರಳಿದ್ದರು. ಹಾಗಾಗಿ ಅವರು ಮೊದಲೇ ಹೇಳಿದ ದಿನಾಂಕದಲ್ಲಿ ‘ಖುಷಿ’ ಚಿತ್ರದ ಶೂಟಿಂಗ್ಗೆ ಹಾಜರಾಗಲಿಲ್ಲ.

ಸಮಂತಾ ಅವರು ಸರಿಯಾಗಿ ಡೇಟ್ಸ್ ನೀಡದ ಕಾರಣ ವಿಜಯ್ ದೇವರಕೊಂಡ ಅವರಿಗೆ ತಲೆಬಿಸಿ ಆಗಿತ್ತು. ಆದರೆ ವಿದೇಶದಿಂದ ಮರಳಿದ ಬಳಿಕ ಎಷ್ಟು ಬೇಕಾದರೂ ಡೇಟ್ಸ್ ನೀಡುವುದಾಗಿ ಸಮಂತಾ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ‘ಮಹಾನಟಿ’ ಚಿತ್ರದಲ್ಲೂ ಸಮಂತಾ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ನಟಿಸಿದ್ದರು. ಈಗ ಅವರು ‘ಖುಷಿ’ ಸಿನಿಮಾದಲ್ಲಿ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಶಿವ ನಿರ್ವಾಣ ನಿರ್ದೇಶನ ಮಾಡುತ್ತಿದ್ದಾರೆ.
Published On - 2:14 pm, Tue, 18 October 22