Kannada News Photo gallery Dhanteras 2022 these famous temple dedicated to lord dhanvantari must visit on dhanteras
ಧನ್ ತೇರಾಸ್ 2022: ಧನ್ವಂತರಿಯ ಜನ್ಮದಿನವೇ ಧನ್ ತೇರಾಸ್! ಈ ಸಂದರ್ಭದಲ್ಲಿ ಆರೋಗ್ಯವನ್ನು ದಯಪಾಲಿಸುವ ಈ ದೇವಾಲಯಗಳಿಗೆ ಭೇಟಿ ನೀಡಿ
Dhanteras 2022: ಈ ಬಾರಿ ಧನ್ ತೇರಾಸ್ (Dhanteras -ಧನ್ ತ್ರಯೋದಶಿ) ಅಕ್ಟೋಬರ್ 23 ಬಂದಿದೆ. ಧನ್ ತೇರಾಸ್ ದಿನದಂದು ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಧನ್ವಂತರಿಯು ವಿಷ್ಣುವಿನ ಅವತಾರ ಮತ್ತು ಆಯುರ್ವೇದ ಔಷಧದ ಅದಿಪತಿ ದೇವರು ಎಂದು ಪರಿಗಣಿಸಲಾಗಿದೆ. ಧನ್ವಂತರಿಯ ಜನ್ಮದಿನವನ್ನು ಧನ್ ತೇರಾಸ್ ಎಂದು ಆಚರಿಸಲಾಗುತ್ತದೆ.
1. ಈ ಬಾರಿ ಧನ್ ತೇರಾಸ್ (Dhanteras -ಧನ್ ತ್ರಯೋದಶಿ) ಅಕ್ಟೋಬರ್ 23 ಬಂದಿದೆ. ಧನ್ ತೇರಾಸ್ ದಿನದಂದು ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಧನ್ವಂತರಿಯು ವಿಷ್ಣುವಿನ ಅವತಾರ ಮತ್ತು ಆಯುರ್ವೇದ ಔಷಧದ ಅದಿಪತಿ ದೇವರು ಎಂದು ಪರಿಗಣಿಸಲಾಗಿದೆ. ಧನ್ವಂತರಿಯ ಜನ್ಮದಿನವನ್ನು ಧನ್ ತೇರಾಸ್ ಎಂದು ಆಚರಿಸಲಾಗುತ್ತದೆ. ದಂತಕಥೆಯ ಪ್ರಕಾರ ಧನ್ವಂತರಿಯು ಧನ್ ತೇರಾಸ್ ಗಳ ದಿನದಂದು ಅಮೃತದ ಪಾತ್ರೆಯೊಂದಿಗೆ ಸಾಗರದಿಂದ ಬಂದ ದೇವ. ಧನ್ ತೇರಾಸ್ ದಿನದಂದು ನೀವು ಧನ್ವಂತರಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಯಾವ ಯಾವ ದೇವಾಲಯಗಳಿಗೆ ಭೇಟಿ ನೀಡಬಹುದು ಎಂದು ತಿಳಿಯೋಣ.
1 / 5
2. ರಂಗನಾಥಸ್ವಾಮಿ ದೇವಾಲಯ -ತಮಿಳುನಾಡಿನಲ್ಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ನೀಡಬಹುದು. ಶ್ರೀ ರಂಗ ಪಟ್ಟಣದಲ್ಲಿರುವ ಶ್ರೀ ರಂಗನಾಥನ ದೇವಸ್ಥಾನದ ಧನ್ವಂತರಿ ಮಂದಿರದಲ್ಲಿ ನಿತ್ಯ ಪೂಜೆಗಳು ನೆರವೇರುತ್ತವೆ. ಆ ಕಾಲದ ಮಹಾನ್ ಆಯುರ್ವೇದ ವೈದ್ಯ ಗರುಡವಾಹನ ಭಟ್ಟರು ಈ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ಗಿಡಮೂಲಿಕೆಗಳ ತೀರ್ಥವಾಗಿ ಗಿಡಮೂಲಿಕೆಗಳ ರಸವನ್ನು (ಕಷಾಯ) ನೀಡಲಾಗುತ್ತದೆ. ಸಮೀಪದ ಶಿಲಾಫಲಕದ ಪ್ರಕಾರ ಇದು 12ನೇ ಶತಮಾನಕ್ಕೆ ಸೇರಿದ್ದೆಂದು ತೋರುತ್ತದೆ.
2 / 5
3. ಶ್ರೀ ಧನ್ವಂತರಿ ದೇವಸ್ಥಾನ - ತಮಿಳುನಾಡಿನ ಧನ್ವಂತರಿ ದೇವರ ಮತ್ತೊಂದು ಪ್ರಸಿದ್ಧ ದೇವಾಲಯ. ಇದು ಕೊಯಮತ್ತೂರಿನಲ್ಲಿದೆ. ಧನ್ವಂತರಿಯನ್ನು ಮುಖ್ಯವಾಗಿ ಧನ್ ತೇರಾಸ್ ದಿನದಂದು ಪೂಜಿಸಲಾಗುತ್ತದೆ.
3 / 5
4. ಧನ್ವಂತರಿ ದೇವಸ್ಥಾನ - ಕೇರಳದ ಗುರುವಾಯೂರ್ ಸಮೀಪದ ನೆಲ್ಲುವೈ ಎಂಬ ಹಳ್ಳಿಯಲ್ಲಿ ಈ ಪುರಾತನ ದೇವಾಲಯವಿದೆ. ಈ ದೇವಾಲಯದಲ್ಲಿ ಅಶ್ವಿನಿ ದೇವತೆಗಳು ಧನ್ವಂತರಿಯ ವಿಗ್ರಹವನ್ನು ಸ್ಥಾಪಿಸಿದರು ಎಂಬ ನಂಬಿಕೆ ಇದೆ. ಈ ದೇವಾಲಯವು 5,000 ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾಗಿದೆ.
4 / 5
5. ತೊಟ್ಟುವ ಧನ್ವಂತರಿ ದೇವಾಲಯ - ಈ ದೇವಾಲಯವು ಧನ್ವಂತರಿ ದೇವರ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ದೇವರ ವಿಗ್ರಹವು ಸುಮಾರು 6 ಅಡಿ ಎತ್ತರವಿದೆ. ಈ ದೇವಾಲಯದಲ್ಲಿ ಬೆಣ್ಣೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ.