Updated on: Oct 18, 2022 | 6:30 AM
ಸಾನ್ಯಾ ಐಯ್ಯರ್ ಅವರು ಕಳೆದ ವೀಕೆಂಡ್ನಲ್ಲಿ ಸೀರೆ ಉಟ್ಟು ಕಾಣಿಸಿಕೊಂಡಿದ್ದರು. ‘ವೀಕೆಂಡ್ ವಿತ್ ಸುದೀಪ’ ಕಾರ್ಯಕ್ರಮಕ್ಕಾಗಿ ಹಳದಿ ಬಣ್ಣದ ಸೀರೆ ಉಟ್ಟಿದ್ದರು.
ಈ ಕಾರ್ಯಕ್ರಮ ಮುಗಿದ ಬಳಿಕ ಮಳೆ ಬಂದಿದೆ. ಆಗ ಎಲ್ಲಾ ಸ್ಪರ್ಧಿಗಳು ಮಳೆಯಲ್ಲಿ ನೆನೆದಿದ್ದಾರೆ.
ಇದೇ ಸಂದರ್ಭಕ್ಕೆ ಬಿಗ್ ಬಾಸ್ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಹಾಡನ್ನು ಹಾಕಿದ್ದಾರೆ. ಎಲ್ಲಾ ಸ್ಪರ್ಧಿಗಳು ಮಳೆಯಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಸಾನ್ಯಾ ಐಯ್ಯರ್ ಕೂಡ ಮಳೆಯಲ್ಲಿ ನೆನೆದಿದ್ದಾರೆ. ಈ ಫೋಟೋಗಳನ್ನು ಅವರ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
‘ಸೋ ಕ್ಯೂಟ್..’ ಎಂಬಿತ್ಯಾದಿ ಕಮೆಂಟ್ಗಳು ಈ ಫೋಟೋಗೆ ಬಂದಿದೆ. ಸಾನ್ಯಾ ಐಯ್ಯರ್ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.