Updated on:Nov 13, 2022 | 10:10 AM
Davanagere Anaji Kere Honnamma Fair Celebrations Davanagere news in kannada
ಕೆರೆಯಾಗಳ ಹಳ್ಳಿಯಿಂದ ಕೊಡದಲ್ಲಿ ಹಾಲು ತುಪ್ಪ ತಂದು ಅಣಜಿ ಗ್ರಾಮದ ಕೆರೆಗೆ ಅರ್ಪಿಸುವುದಕ್ಕೆ ಪುರಾಣ ಕಲ್ಪನೆ ಇದೆ. ಕೆರೆಯಾಗಳ ಹಳ್ಳಿ ಹಾಗೂ ಅಣಜಿ ಗ್ರಾಮಕ್ಕೆ ಗಂಡು ಹೆಣ್ಣಿನ ನಂಟು. ಮದುವೆ ಸಂದರ್ಭದ ಎಲ್ಲಾ ಸಂಪ್ರದಾಯಗಳನ್ನು ಅಣಜಿ ಗ್ರಾಮಸ್ಥರು ಆಚರಣೆ ಮಾಡುತ್ತಾರೆ.
ಅಣಜಿ ಗ್ರಾಮ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಅಣಜಿ ಕೆರೆ ಜೀವನಾಡಿ. ಅಣಜಿ ಕೆರೆಯಲ್ಲಿ ನೀರು ಇತ್ತಂದರೆ ಈ ಭಾಗದಲ್ಲಿ ಸಮೃದ್ಧಿ ಇರುತ್ತದೆ. ಹಾಗಾಗಿ ಕೆರೆ ತುಂಬಿದ ಸಂದರ್ಭದಲ್ಲಿ ಬಾಗಿನ ಅರ್ಪಿಸಿ ಬಂದಂತಹ ಸಾವಿರಾರು ಜನರಿಗೆ ಊಟ ಹಾಕಿಸುವುದು ಸಂಪ್ರದಾಯ.
ಜಾತ್ರಾ ಮಹೋತ್ಸವದಲ್ಲಿ ಹತ್ತಾರು ಗ್ರಾಮ ದೇವತೆಗಳನ್ನು ಕರೆಸಿ ಗಂಗಾ ಪೂಜೆ ಮಾಡಿ ಉತ್ಸವ ಮಾಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದು ವಾಡಿಕೆಯಾಗಿದೆ.
ಸದ್ಯ ಚುನಾವಣೆ ಸಂದರ್ಭವಾಗಿರುವುದರಿಂದ ಇದೇ ಬಾಗಿನ ಕಾರ್ಯಕ್ರಮದ ಲಾಭ ಪಡೆಯಲು ರಾಜಕಾರಣಿಗಳ ದಂಡೆ ಅಣಜಿ ಗ್ರಾಮಕ್ಕೆ ಆಗಮಿಸಿದೆ. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳು ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಲು ಹವಣಿಸಿದ್ದಾರೆ. ಕಾಂಗ್ರೆಸ್ ಮುಖಂಡ ಬಸವಂತಪ್ಪ, ಬಿಜೆಪಿ ಮುಖಂಡರುಗಳಾದ ಮಾಜಿ ಶಾಸಕ ಬಸವರಾಜ್ ನಾಯ್ಕ್, ಇನ್ನೊಬ್ಬ ಬಿಜೆಪಿ ಟಿಕೇಟ್ ಆಕಾಂಕ್ಷಿ ಶ್ಯಾಮ್, ವಾಗೇಶ್ ಸ್ವಾಮಿ ಸೇರಿದಂತೆ ಹಲವರು ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಕೆರೆ ದಂಡೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳು ಬಾಗಿನ ಕಾರ್ಯಕ್ರಮಕ್ಕೆ ಹಬ್ಬದ ರಂಗು ನೀಡಿವೆ. ಮಹಿಳೆಯರು ಮಕ್ಕಳು ಹೊಸ ಬಟ್ಟೆ ತೊಟ್ಟು ಕೆರೆ ದಂಡೆಯ ಉತ್ಸವದಲ್ಲಿ ಪಾಲ್ಗೊಂಡು ಇಡೀ ದಿನ ಸಂಭ್ರಮ ಪಟ್ಟಿದ್ದಾರೆ. 43 ವರ್ಷಗಳ ನಂತರ ಅತಿವಿಸ್ತಾರದ ಕೆರೆ ತುಂಬಿದ್ದಕ್ಕೆ ಸುತ್ತಮುತ್ತಲಿನ ಗ್ರಾಮಗಳ ಮುಖದಲ್ಲಿ ನೆಮ್ಮದಿ ಸಂತೋಷ ಮೂಡಿ ಕೆರೆ ಹೊನ್ನಮ್ಮ ನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. (ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ)
Published On - 10:10 am, Sun, 13 November 22