Updated on: Apr 01, 2023 | 9:22 PM
ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ ನಡೆಯಿತು.
ವಿಶೇಷವಾಗಿ ಭಕ್ತರು ಈ ರಥವನ್ನ ಕೈಯಿಂದ ತಳ್ಳಿ ರಥೋತ್ಸವ ಮಾಡುತ್ತಾರೆ. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳು.
ವರ್ಷಕ್ಕೊಮ್ಮೆ ನಡೆಯುವ ರಥೋತ್ಸವಕ್ಕೆ ಈ ಬಾರಿ ಸಾವಿರಾರು ಜನ ಭಕ್ತರು ಸೇರಿದರು. ಪ್ರತಿಯೊಬ್ಬರು ಕೈಯಿಂದ ತಳ್ಳಿ ರಥ ಸಾಗಿಸುತ್ತಾರೆ.
ಪ್ರತಿಯೊಬ್ಬರು ಬಂದು ರಥ ತಳ್ಳಿಯೇ ಹೋಗುವುದು ಇಲ್ಲಿನ ವಾಡಿಕೆ. ಮೇಲಾಗಿ ತಮ್ಮ ಹರಕೆ ಕೂಡಾ ತಮ್ಮ ತಮ್ಮ ಇಚ್ಚಾನುಸಾರ ತಿರಿಸಿದರು.
ಭಕ್ತರೊಬ್ಬರು ಬಾಳೆಹಣ್ಣುಗಳಲ್ಲಿ ಮುಂದಿನ ಎಂಎಲ್ಎ ಜಿಎಸ್ ಶ್ಯಾಮ್ ಎಂದು ಬರೆದು ದೇವರಿಗೆ ಅರ್ಪಿಸಿದ್ದಾರೆ.