
2024 ರ, ದೀಪಾವಳಿ ಹಬ್ಬವು ಅಕ್ಟೋಬರ್ 31 ರಂದು ಬಂದಿದೆ. ಈ ದಿನದಂದು ಕಾಣಿಸಿಕೊಳ್ಳುವ ಅನೇಕ ವಿಷಯಗಳು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಕೆಲವು ಜೀವಿಗಳನ್ನು ನೋಡುವುದರಿಂದ ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯಿದೆ.

ದೀಪಾವಳಿಯ ರಾತ್ರಿ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಕೆಲವು ಜೀವಿಗಳು ಕಾಣಿಸಿಕೊಂಡರೆ, ಅದು ಲಕ್ಷ್ಮಿ ಆಗಮನದ ಸೂಚನೆಯಂದು ಪರಿಗಣಿಸಲಾಗುತ್ತದೆ. ಲಕ್ಷೀದೇವಿ ಸಂಪನ್ನಗೊಂಡು ನಿಮ್ಮನ್ನು ಆರ್ಥಿಕ ಸಮಸ್ಯೆಯಿಂದ ಮುಕ್ತಿ ನೀಡಿ ಸಂತೋಷ ನೀಡುತ್ತಾಳೆ ಎಂದು ಶಕುನ ಶಾಸ್ತ್ರ ಹೇಳುತ್ತೆ.

ದೀಪಾವಳಿಯ ದಿನದಂದು ನೀವು ಮನೆಯಲ್ಲಿ ಹಲ್ಲಿಯನ್ನು ನೋಡಿದರೆ, ಶುಭ ಶಕುನ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹಲ್ಲಿಯನ್ನು ಓಡಿಸಬೇಡಿ. ದೀಪಾವಳಿ ಹಬ್ಬದಂದು ಹಲ್ಲಿಯನ್ನು ನೋಡುವುದು ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

ದೀಪಾವಳಿಯ ರಾತ್ರಿ ನೀವು ಗೂಬೆಯನ್ನು ನೋಡಿದರೆ, ಅದನ್ನು ತುಂಬಾ ಮಂಗಳಕರ ಎಂಬ ನಂಬಿಕೆಯಿದೆ. ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನ ಎಂದೂ ಪರಿಗಣಿಸಲಾಗುತ್ತದೆ. ದೀಪಾವಳಿಯ ರಾತ್ರಿ ಗೂಬೆಯನ್ನು ಕಂಡರೆ ನಿಮ್ಮ ಮನೆಗೆ ಲಕ್ಷ್ಮಿ ದೇವಿ ಬರಲಿದ್ದಾಳೆ ಎಂದರ್ಥ.

ಧರ್ಮಗ್ರಂಥಗಳ ಪ್ರಕಾರ ದೀಪಾವಳಿಯಂದು ನಿಮ್ಮ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಹೆಗ್ಗಣ ಕಂಡರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನೀವು ತುಂಬಾ ಅದೃಷ್ಟವಂತರು ಮತ್ತು ಹಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳಲಿವೆ ಎಂಬ ನಂಬಿಕೆಯಿದೆ.

ಇದಲ್ಲದೇ ದೀಪಾವಳಿಯಂದು ಕೇಸರಿ ಬಣ್ಣದ ಹಸು, ಬೆಕ್ಕನ್ನು ನೋಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಲಕ್ಷ್ಮಿ ದೇವಿಯ ಆಗಮನದ ಸೂಚಕವೆಂದು ಪರಿಗಣಿಸಲಾಗಿದೆ.
Published On - 12:43 pm, Thu, 24 October 24