IND vs NZ: ಪುಣೆಯಲ್ಲಿ ಚೆನ್ನೈ ಹುಡುಗರ ಪವಾಡ; ಇತಿಹಾಸ ಬರೆದ ಸುಂದರ್- ಅಶ್ವಿನ್

IND vs NZ: ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಅದ್ಭುತ ಪ್ರದರ್ಶನ ಕಂಡುಬಂತು. ವಾಷಿಂಗ್ಟನ್ ಸುಂದರ್ 7 ವಿಕೆಟ್ ಪಡೆದು ಭಾರತವನ್ನು ಮೇಲುಗೈ ಸಾಧಿಸುವಂತೆ ಮಾಡಿದರು. ಅಶ್ವಿನ್ ಮತ್ತು ಸುಂದರ್ ಜೋಡಿ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೊದಲ ಆಫ್‌ಸ್ಪಿನ್ ಜೋಡಿ ಎಂಬ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ತಂಡವನ್ನು 259 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡ ಮೊದಲ ದಿನವೇ ಪ್ರಬಲ ಸ್ಥಾನದಲ್ಲಿದೆ.

|

Updated on:Oct 24, 2024 | 7:28 PM

ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ ಇದೀಗ ಗೆಲುವಿನ ಇರಾದೆಯೊಂದಿಗೆ ಪುಣೆ ಟೆಸ್ಟ್​ಗೆ ಕಾಲಿರಿಸಿದೆ. ಉಭಯ ತಂಡಗಳ ನಡುವೆ ಇಂದಿನಿಂದ ಆರಂಭವಾಗಿರುವ ಎರಡನೇ ಟೆಸ್​ ಪಂದ್ಯದ ಮೊದಲ ದಿನವೇ ರೋಹಿತ್ ಪಡೆ ದಿಟ್ಟ ಪ್ರದರ್ಶನ ನೀಡಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಕೇವಲ 259 ರನ್‌ಗಳಿಗೆ ಆಲೌಟ್ ಮಾಡಿದೆ.

1 / 8
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ ಬಲಿಷ್ಠ ಆರಂಭ ಪಡೆದುಕೊಂಡಿತು. ಆದರೆ ಆ ಬಳಿಕ ದಾಳಿಗಿಳಿದ ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್ ಕಿವೀಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಚೆನ್ನೈ ಮೂಲದ ಈ ಇಬ್ಬರು ಸ್ಪಿನ್-ಆಲ್ ರೌಂಡರ್‌ಗಳು ಭಾರತೀಯ ಕ್ರಿಕೆಟ್‌ನಲ್ಲಿ ಹಿಂದೆಂದೂ ಸಂಭವಿಸದ ದಾಖಲೆಯನ್ನು ನಿರ್ಮಿಸಿದರು.

2 / 8
3 ವರ್ಷಗಳ ನಂತರ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಾಷಿಂಗ್ಟನ್ ಸುಂದರ್ ಕೇವಲ 59 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಸುಂದರ್ ಪಾತ್ರರಾದರು.

3 / 8
ಅಷ್ಟೇ ಅಲ್ಲ, ಇದಕ್ಕೂ ಮುನ್ನ ಆಡಿದ್ದ 4 ಟೆಸ್ಟ್‌ಗಳ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 6 ವಿಕೆಟ್ ಪಡೆದಿದ್ದ ಸುಂದರ್ ಈಗ ಒಂದೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸುಂದರ್ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಸ್ಪೆಲ್ ಮಾಡಿದ ಭಾರತದ ಜಂಟಿ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

4 / 8
ಮೊದಲ ಇನ್ನಿಂಗ್ಸ್​ನಲ್ಲಿ ಸುಂದರ್ 7 ಮತ್ತು ಅಶ್ವಿನ್ 3 ವಿಕೆಟ್ ಪಡೆದರು. ಈ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೊದಲ ಆಫ್‌ಸ್ಪಿನ್ ಜೋಡಿ ಎಂಬ ದಾಖಲೆಯನ್ನು ಸುಂದರ್ ಹಾಗೂ ಅಶ್ವಿನ್ ಬರೆದಿದ್ದಾರೆ.

5 / 8
ಇನ್ನು ಈ ಟೆಸ್ಟ್ ಪಂದ್ಯದ ಮೊದಲ ದಿನವೇ ಎಲ್ಲಾ 10 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಕಬಳಿಸಿದ್ದಾರೆ. ಇದಕ್ಕೂ ಮುನ್ನ2024 ರ ಮಾರ್ಚ್​ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಧರ್ಮಶಾಲಾ ಪಂದ್ಯದಲ್ಲೂ ಎದುರಾಳಿ ತಂಡದ ಎಲ್ಲಾ 10    ವಿಕೆಟ್​ಗಳನ್ನು ಉರುಳಿಸಿದ್ದರು.

6 / 8
ಸುಂದರ್ ಉರುಳಿಸಿದ 7 ವಿಕೆಟ್‌ಗಳಲ್ಲಿ 5 ಬ್ಯಾಟ್ಸ್‌ಮನ್‌ಗಳನ್ನು ಬೌಲ್ಡ್ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ 5 ನೇ ಬೌಲರ್ ಆದರು. ಇದಕ್ಕೂ ಮುನ್ನ ಜಸುಭಾಯ್ ಪಟೇಲ್, ಬಾಪು ನಾಡಕರ್ಣಿ, ಅನಿಲ್ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಕೂಡ ಈ ಸಾಧನೆ ಮಾಡಿದ್ದರು.

7 / 8
ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಇದೀಗ ನಾಥನ್ ಲಿಯಾನ್ ಅವರನ್ನು ಹಿಂದಿಕಿದ್ದಾರೆ. ಅಶ್ವಿನ್ ಇದುವರೆಗೆ 189 ವಿಕೆಟ್‌ಗಳನ್ನು ಪಡೆದಿದ್ದರೆ, ಆಸ್ಟ್ರೇಲಿಯಾದ ನಾಥನ್ ಲಿಯಾನ್ 187 ವಿಕೆಟ್ ಪಡೆದಿದ್ದಾರೆ.

8 / 8

Published On - 7:00 pm, Thu, 24 October 24

Follow us
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ

ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ

ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ

ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್

ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ

ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್

ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?

ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ

ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್