
ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾಲ್ಯದ ಚಿತ್ರಗಳನ್ನು ಶೇರ್ ಮಾಡಿ, ನೆನಪುಗಳನ್ನು ಹಂಚಿಕೊಂಡಿದ್ದರು. ಈ ಚಿತ್ರವನ್ನು ಹಂಚಿಕೊಂಡಿದ್ದ ಅವರು ರಾಹುಲ್ ದ್ರಾವಿಡ್ ಅವರ ಡೈಲಾಗ್ಸ್ ನೆನಪಿಸಿಕೊಂಡು ‘ಇಂದಿರಾನಗರ್ ಕಾ ಗೂಂಡಿ ಹೂ’ ಎಂದು ಕ್ಯಾಪ್ಶನ್ ನೀಡಿದ್ದರು.

ದೀಪಿಕಾ ಪಡುಕೋಣೆ ತಮ್ಮ ಸೋದರಿ ಅನಿಷಾ ಪಡುಕೋಣೆಯವರೊಂದಿಗೆ. ಅನಿಷಾ ಸದ್ಯ ಗಾಲ್ಫ್ ಆಟಗಾರ್ತಿಯಾಗಿದ್ದಾರೆ.

ಬಾಲ್ಯದಲ್ಲಿ ದೀಪಿಕಾ ಸಿನಿಮಾದೆಡೆಗೆ ಅಂತಹ ಆಕರ್ಷಣೆ ಹೊಂದಿರಲಿಲ್ಲ. ವಿದ್ಯಾಭ್ಯಾಸ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು.

ದೀಪಿಕಾ ಜನಿಸಿದ್ದು ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ. ನಂತರ ಅವರು ಭಾರತಕ್ಕೆ ಆಗಮಿಸಿದರು.

ದೀಪಿಕಾ ತಮ್ಮ 13ನೇ ವಯಸ್ಸಿನಲ್ಲಿ ನಟ ಅಮೀರ್ ಖಾನ್ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದ ಚಿತ್ರ ಇದು.