Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿಯಲ್ಲಿ ಹನಿ ನೀರಿಗೂ ಹಾಹಾಕಾರ; ಆಹಾರಕ್ಕಾಗಿ ಒಣ ಜಮೀನಿಗೆ ನುಗ್ಗಿದ ಜಿಂಕೆಗಳ ನರಳಾಟ

ಹಾವೇರಿ ಜಿಲ್ಲೆಯ ಹೊರಭಾಗದಲ್ಲಿ ಕುಡಿಯುವ ನೀರಿಗಾಗಿ ಜಿಂಕೆಗಳು ಪರದಾಡುತ್ತಿರುವ ಮನಕಲಕುವ ದೃಶ್ಯಗಳು ಕಂಡುಬಂದಿವೆ. ತಿನ್ನಲು ಹಸಿರು ಹುಲ್ಲು ಹಾಗೂ ಕುಡಿಯಲು ನೀರಿಗಾಗಿ ಜಿಂಕೆಗಳು ಅಲೆದಾಡುತ್ತಿವೆ.

ಆಯೇಷಾ ಬಾನು
|

Updated on:Jun 24, 2023 | 11:23 AM

ಹಾವೇರಿ ಜಿಲ್ಲೆಯಲ್ಲಿ ವರುಣನ ದರ್ಶನವೇ ಆಗುತ್ತಿಲ್ಲ. ಒಂದು‌ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಭೂ ತಾಯಿ ಒಡಲು ತಂಪು ಮಾಡಬೇಕಿದ್ದ ಮಳೆರಾಯನೇಕೋ ಈ ಬಾರಿ ಮುನಿಸಿಕೊಂಡಿದ್ದಾನೆ.

1 / 6
ಹನಿ ನೀರಿಲ್ಲದೇ ಭೂತಾಯಿ ಒಣಗಿದ್ದಾಳೆ. ಬರಗಾಲದ ಛಾಯೆ ಆವರಿಸಿದೆ. ಬಿಸಿಲ ಬೇಗೆಗೆ ನೀರಲ್ಲದೇ ಅದೆಷ್ಟೋ ಪ್ರಾಣಿ ಪಕ್ಷಿಗಳು, ಜಾನುವಾರುಗಳು ಕಂಗೆಟ್ಟು ಹೋಗಿವೆ. ಕೆರೆ, ಬಾವಿ, ನದಿ ಯಾವುದರಲ್ಲೂ ತೊಟ್ಟು ನೀರಿಲ್ಲ.

2 / 6
ಹಾವೇರಿ ಜಿಲ್ಲೆಯ ಹೊರಭಾಗದಲ್ಲಿ ಕುಡಿಯುವ ನೀರಿಗಾಗಿ ಜಿಂಕೆಗಳು ಪರದಾಡುತ್ತಿರುವ ಮನಕಲಕುವ ದೃಶ್ಯಗಳು ಕಂಡುಬಂದಿವೆ. ತಿನ್ನಲು ಹಸಿರು ಹುಲ್ಲು ಹಾಗೂ ಕುಡಿಯಲು ನೀರಿಗಾಗಿ ಜಿಂಕೆಗಳು ಅಲೆದಾಡುತ್ತಿವೆ.

ಹಾವೇರಿ ಜಿಲ್ಲೆಯ ಹೊರಭಾಗದಲ್ಲಿ ಕುಡಿಯುವ ನೀರಿಗಾಗಿ ಜಿಂಕೆಗಳು ಪರದಾಡುತ್ತಿರುವ ಮನಕಲಕುವ ದೃಶ್ಯಗಳು ಕಂಡುಬಂದಿವೆ. ತಿನ್ನಲು ಹಸಿರು ಹುಲ್ಲು ಹಾಗೂ ಕುಡಿಯಲು ನೀರಿಗಾಗಿ ಜಿಂಕೆಗಳು ಅಲೆದಾಡುತ್ತಿವೆ.

3 / 6
ಒಣ ಜಮೀನಿನಲ್ಲಿ ಜಿಂಕೆಗಳ ಗುಂಪೊಂದು ಹಸಿರು ಹುಲ್ಲು ಕಾಣದೆ ಕಂಗಾಲಾಗಿವೆ. ಪ್ರತಿ ವರ್ಷ ಮುಂಗಾರು ಆರಂಭ ಆಗಿ ಇಷ್ಟೊತ್ತಿಗೆ ಒಳ್ಳೆಯ ಹುಲ್ಲು ಬೆಳೆಯುತ್ತಿತ್ತು. ಆದ್ರೆ ಈ ವರ್ಷ ಮುಂಗಾರು ವ್ಯತ್ಯಯವಾಗಿರುವುದರಿಂದ ಆಹಾರದ ನಿರೀಕ್ಷೆಯಲ್ಲಿ ಬಂದ ಜಿಂಕೆಗಳು ಕಂಗಾಲಾಗಿವೆ.

4 / 6
ಹಾವೇರಿ ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಜಿಂಕೆಗಳಿವೆ. ಮಳೆ ಚನ್ನಾಗಿಯಾದ್ರೆ ಜಿಂಕೆಗಳು ಈ ರೀತಿ ರಸ್ತೆ, ಜಮೀನುಗಳಲ್ಲಿ ಕಂಡುಬರುವುದಿಲ್ಲ. ಆದ್ರೆ ಈ ಬಾರಿ ಮಳೆಯಿಲ್ಲದ ಅವುಗಳು ಕೂಡ ಪರಿತಪಿಸುತ್ತಿವೆ.

5 / 6
ಮೂಕ ಪ್ರಾಣಿಗಳು ನೀರಿಗಾಗಿ, ಆಹಾರಕ್ಕಾಗಿ ಈ ರೀತಿ ಅಲೆದಾಡುವ ದೃಶ್ಯ ಮನಕಲಕುವಂತಿದೆ. ಹೀಗಾಗಿ ವರುಣನ ಆಗಮನಕ್ಕೆ ಅನೇಕ ಕಡೆ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.

6 / 6

Published On - 11:04 am, Sat, 24 June 23

Follow us
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ

ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ

ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ

ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ

ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ

ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ

ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..

ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್

ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ

ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ