ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿತ್ತು.
ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಜಾನುವಾರುಗಳ ಜೊತೆಗೆ ಮಾಲೀಕರು ರ‍್ಯಾಂಪ್ ವಾಕ್ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿವರ್ಷ ರೈತರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗುತ್ತಿದೆ.
ಹಸು ಎತ್ತುಗಳ ಜೊತೆ ಮಾಲೀಕರು ವೇದಿಕೆ ಮೇಲೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಬಳಿಕ ಜಾನುವಾರುಗಳಿಗೆ ಹೂಮಳೆ ಸುರಿಸಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ರ‍್ಯಾಂಪ್ ವಾಕ್, ಪ್ಯಾಷನ್ ಶೋನಲ್ಲಿ ಭಾಗವಹಿಸಿದ ಮಾಲೀಕರಿಗೆ ಬೂಸ, ಕಬ್ಬು ಮೇವು ವಿತರಣೆ ಮಾಡಲಾಗಿದೆ.
ಜಾನುವಾರುಗಳ ಈ ರ‍್ಯಾಂಪ್ ವಾಕ್ ನೋಡಲು ಗುಂಪು ಗುಂಪಾಗಿ ಕುಟುಂಬ ಸಮೇತ ಜನರು ಆಗಮಿಸಿ ವೀಕ್ಷಣೆ ಮಾಡಿದ್ದಾರೆ.