Devil Movie: ನಿರೀಕ್ಷೆ ಮೂಡಿಸಿದ ‘ಡೆವಿಲ್’; ದರ್ಶನ್ ಲುಕ್ಗೆ ಎಲ್ಲರೂ ಫಿದಾ
‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವ? ಡೆವಿಲ್’ ಎಂದು ಹೇಳುವ ದರ್ಶನ್ ಜೋರಾಗಿ ನಗುತ್ತಾರೆ. ಈ ಟೀಸರ್ ಗಮನ ಸೆಳೆದಿದೆ.
1 / 5
ನಟ ದರ್ಶನ್ ಅವರು ‘ಡೆವಿಲ್’ ಮೂಲಕ ಎಲ್ಲರ ಎದುರು ಬರಲು ಸಿದ್ಧರಾಗಿದ್ದಾರೆ. ಈ ಚಿತ್ರದಲ್ಲಿ ಅವರ ಲುಕ್ ಗಮನ ಸೆಳೆದಿದೆ. ಈ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.
2 / 5
ದರ್ಶನ್ ಅವರು ಮಾಸ್ ಆಗಿ ಕಾಣಿಸಿಕೊಳ್ಳುತ್ತಾರೆ. ‘ಡೆವಿಲ್’ ಚಿತ್ರದಲ್ಲೂ ಅವರಿಗೆ ಇದೇ ರೀತಿಯ ಲುಕ್ ಇರಲಿದೆ. ಅವರು ಬೇರೆಯದೇ ಗೆಟಪ್ನಲ್ಲಿ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಕಾರಣಕ್ಕೆ ‘ಡೆವಿಲ್’ ಗಮನ ಸೆಳೆಯುತ್ತಿದೆ.
3 / 5
ಇಂದು (ಫೆಬ್ರವರಿ 16) ದರ್ಶನ್ ಬರ್ತ್ಡೇ. ಅಭಿಮಾನಿಗಳು ಇದನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಧ್ಯರಾತ್ರಿ ದರ್ಶನ್ ಜೊತೆ ಅವರು ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಟೀಸರ್ ವೀಕ್ಷಣೆ ಮಾಡಿದ್ದಾರೆ.
4 / 5
ಪ್ರಕಾಶ್ ವೀರ್ ‘ಡೆವಿಲ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಅನುಭವ ಇದೆ. ‘ತಾರಕ್’ ಬಳಿಕ ಎರಡನೇ ಬಾರಿಗೆ ದರ್ಶನ್ ಜೊತೆ ಅವರು ಕೆಲಸ ಮಾಡುತ್ತಿದ್ದಾರೆ.
5 / 5
‘ಡೆವಿಲ್’ ಚಿತ್ರದ ಫಸ್ಟ್ ಲುಕ್ಗೆ ಅಭಿಮಾನಿಗಳಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
Published On - 6:52 am, Fri, 16 February 24