- Kannada News Photo gallery Devotees perform special puja to 300 year old Banyan Tree near Kambalipura in Hoskote Bangalore after Shivratri
ಜನ ಮರುಳೋ ಜಾತ್ರೆ ಮರುಳೋ: ಅಮಾವಾಸ್ಯೆ ದಿನ 300 ವರ್ಷ ಹಳೆಯ ಮರಕ್ಕೆ ಹರಕೆ ಕಟ್ಟಿ ಮಹಿಳೆಯರಿಂದ ಪ್ರದಕ್ಷಿಣೆ
ಹಬ್ಬ ಹರಿದಿನಗಳು ಬಂದ್ರೆ ಜನರು ಕಲ್ಲು ನೀರು ಸೇರಿದಂತೆ ದೇವರಿಗೆ ವಿಶೇಷ ಪೂಜೆ ಮಾಡೋದು ಸಹಜ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಶಿವರಾತ್ರಿ ನಂತರದ ಅಮಾವಾಸ್ಯೆಗೆ ಜನರೆಲ್ಲ ಕಾಡಿಗೆ ತೆರಳುತ್ತಿದ್ದು ಕಾಡಿನಲ್ಲಿರುವ 300 ವರ್ಷಗಳಷ್ಟು ಹಳೆಯ ಬೃಹತ್ ಮರಕ್ಕೆ ಪೂಜೆ ನೆರವೇರಿಸುವ ಮೂಲಕ ವಿಶಿಷ್ಟ ಆಚರಣೆ ಮಾಡ್ತಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ.
Updated on: Feb 21, 2023 | 12:49 PM

ಹಬ್ಬ ಹರಿದಿನಗಳು ಬಂದ್ರೆ ಜನರು ಕಲ್ಲು ನೀರು ಸೇರಿದಂತೆ ದೇವರಿಗೆ ವಿಶೇಷ ಪೂಜೆ ಮಾಡೋದು ಸಹಜ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಶಿವರಾತ್ರಿ ನಂತರದ ಅಮಾವಾಸ್ಯೆಗೆ ಜನರೆಲ್ಲ ಕಾಡಿಗೆ ತೆರಳುತ್ತಿದ್ದು ಕಾಡಿನಲ್ಲಿರುವ 300 ವರ್ಷಗಳಷ್ಟು ಹಳೆಯ ಬೃಹತ್ ಮರಕ್ಕೆ ಪೂಜೆ ನೆರವೇರಿಸುವ ಮೂಲಕ ವಿಶಿಷ್ಟ ಆಚರಣೆ ಮಾಡ್ತಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ.

ಒಂದಲ್ಲ ಎರಡಲ್ಲ ಹತ್ತಲ್ಲ ಇಪ್ಪತ್ತಲ್ಲ ನೂರೂ ಅಲ್ಲ... ಆದರೆ 3 ನೂರು ವರ್ಷಗಳ ಇತಿಹಾಸವಿರುವ ಮರ ಇದೀಗ ಹಲವು ಜನರ ಇಷ್ಟಾರ್ಥ ಸಿದ್ದಿಗೆ ಪ್ರಸಿದ್ದಿಯಾಗಿದ್ದು ಜನ ಮರುಳೋ, ಜಾತ್ರೆ ಮರುಳೋ ಅನ್ನೂ ರೀತಿ ಜನರು ಮರಕ್ಕೆ ಹರಕೆ ಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ. (ವರದಿ: ನವೀನ್, ಟಿವಿ 9, ದೇವನಹಳ್ಳಿ)

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಂಬಳಿಪುರದ ಹೊರ ವಲಯದ ಅರಣ್ಯದಲ್ಲಿ ಮುನ್ನೂರು ವರ್ಷಗಳ ಹಳೆಯದಾದ ಈ ಆಲದ ಮರವಿದೆ.

ಹೀಗಾಗಿ ಹಲವು ವರ್ಷಗಳಿಂದ ಗ್ರಾಮಸ್ಥರೆಲ್ಲ ಅಮಾವಾಸ್ಯೆ ಬಂದ್ರೆ ಸಾಕು ಕಷ್ಟಗಳಿರುವವರೆಲ್ಲ ಇಲ್ಲಿಗೆ ಬಂದು ಪೂಜೆ ಮಾಡಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಾರೆ. ಅದರಲ್ಲೂ ಶಿವರಾತ್ರಿ ನಂತರದ ಅಮಾವಾಸ್ಯೆ ದಿನ ಈ ಮರಕ್ಕೆ ವಿಶೇಷವಾದ ಶಕ್ತಿ ಬರುತ್ತೆ ಅನ್ನೂದು ಈ ಸುತ್ತಮುತ್ತಲಿನ ಗ್ರಾಮಸ್ಥರ ನಂಬಿಕೆ.

ಹೀಗಾಗೆ ಇಂದು ಶಿವರಾತ್ರಿ ನಂತರದ ಮೊದಲ ಅಮಾವಾಸ್ಯೆ ಅಂತ ನೂರಾರು ಜನರು ಮರದ ಬಳಿಗೆ ಆಗಮಿಸಿದ್ದು ಮಧ್ಯರಾತ್ರಿವರೆಗೂ ಮರಕ್ಕೆ ತೆಂಗಿನಕಾಯಿಯ ಹರಕೆ ಕಟ್ಟಿ 108 ಪ್ರದಕ್ಷಿಣೆ ಹಾಕುವ ಮೂಲಕ ಕಷ್ಟಗಳ ಬಗೆಹರಿದು ನೆಮ್ಮದಿ ನೆಲಸಲಿ ಅಂತ ಪೂಜೆ ಮಾಡಿದ್ರು.

ಮುನ್ನೂರು ವರ್ಷಕ್ಕೂ ಅಧಿಕ ಹಳೆಯದಾದ ಈ ಬೃಹತ್ ಆಲದ ಮರದಲ್ಲಿ ಗ್ರಾಮ ದೇವತೆ ಕಾಟೆರಮ್ಮ ನೆಲೆಸಿದ್ದಾಳೆ ಅನ್ನೂ ನಂಬಿಕೆ ಜನರಲ್ಲಿದ್ದು ಶಿವರಾತ್ರಿಯ ನಂತರದ ಮೊದಲ ಅಮವಾಸ್ಯೆಯಂದ ಮರಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದರೆ ಕಷ್ಟಗಳು ದೂರವಾಗುತ್ತೆ ಅನ್ನೂ ನಂಬಿಕೆಯಿದೆಯಂತೆ.



ಇಂದು ಬೆಂಗಳೂರು ಸೇರಿದಂತೆ ಹಲವಡೆಯಿಂದ ಆಗಮಿಸಿದ ಭಕ್ತರು ಮರಕ್ಕೆ ಪೂಜೆ ಮಾಡಿದ್ರು. ಜತೆಗೆ ರಾತ್ರಿ ಇದೇ ಅರಣ್ಯ ಪ್ರದೇಶದ ದೇವಾಲಯದ ಮುಂದೆಯೆ ಪ್ರತ್ಯಂಗಿರ ಹೋಮ ವನ್ನ ಸಹ ಮಾಡಿಸಿ ಅಲ್ಲೆ ಊಟ ಮಾಡುವ ಮೂಲಕ ಅಮಾವಾಸ್ಯೆಯನ್ನ ಅರಣ್ಯದಲ್ಲಿ ಆಚರಿಸಿದ್ರು.


ಒಟ್ಟಾರೆ ತಂತ್ರಜ್ನಾನ ಮುಂದುವರೆದ ಕಾಲದಲ್ಲೂ ಅಮಾವಾಸ್ಯೆಯಂದು ಮರಕ್ಕೆ ಪೂಜೆ ಮಾಡಿದ್ರೆ ಒಳಿತಾಗುತ್ತೆ ಅನ್ನೂ ನಂಬಿಕೆಯಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಮರಕ್ಕೆ ಬಂದು ಪೂಜೆ ಮಾಡ್ತಿರುವುದು ನಿಜಕ್ಕೂ ಆಶ್ಚರ್ಯಕರವೇ ಆಗಿದೆ.


ಮುನ್ನೂರು ವರ್ಷಕ್ಕೂ ಅಧಿಕ ಹಳೆಯದಾದ ಈ ಬೃಹತ್ ಆಲದ ಮರದಲ್ಲಿ ಗ್ರಾಮ ದೇವತೆ ಕಾಟೆರಮ್ಮ ನೆಲೆಸಿದ್ದಾಳೆ ಅನ್ನೂ ನಂಬಿಕೆ




