
ಕ್ರಿಕೆಟಿಗ ಯಜುವೇಂಧರ್ ಚಾಹಲ್ ಮತ್ತು ನೃತ್ಯಗಾರ್ತಿ ಧನಶ್ರೀ ಮದುವೆ ಇತ್ತೀಚೆಗಷ್ಟೆ ಮುರಿದು ಬಿತ್ತು. ಕೋಟ್ಯಂತರ ರೂಪಾಯಿ ಜೀವನಾಂಶ ಮೊತ್ತವನ್ನು ಯಜುವೇಂಧರ್ ಚಾಹಲ್ ನೀಡಿದರು.

ವಿಚ್ಛೇದನದ ಬಳಿಕ ಧನಶ್ರೀ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗು ಸಿನಿಮಾ ಒಂದನ್ನು ಧನ್ಯಶ್ರೀ ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದರ ನಡುವೆ ಬಾಲಿವುಡ್ ಸಿನಿಮಾ ಒಂದರ ಐಟಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅದೂ ಖ್ಯಾತ ನಟ ರಾಜ್ಕುಮಾರ್ ರಾವ್ ನಟಿಸಿರುವ ಸಿನಿಮಾನಲ್ಲಿ ಧನಶ್ರೀ ನಟಿಸಿದ್ದಾರೆ.

ರಾಜ್ಕುಮಾರ್ ರಾವ್ ನಟನೆಯ ‘ಭೂಲ್ಚುಕ್ ಮಾಫ್’ ಸಿನಿಮಾದಲ್ಲಿನ ಐಟಂ ಹಾಡಿನಲ್ಲಿ ಧನಶ್ರೀ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಮೈ ಚಳಿ ಬಿಟ್ಟು ನಟಿಸಿದ್ದಾರೆ ನಟಿ.

ಸಿನಿಮಾದ ಹಾಡು ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದ್ದು, ಹಾಡು ಹಿಟ್ ಆಗಿದೆ. ಧನಶ್ರೀ ಡ್ಯಾನ್ಸ್ ಅನ್ನು ಸಹ ಜನ ಮೆಚ್ಚಿಕೊಳ್ಳುತ್ತಿದ್ದಾರೆ.

ಧನಶ್ರೀ, ವಿಚ್ಛೇದನದ ಬಳಿಕ ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯರಾಗುವ ಯತ್ನದಲ್ಲಿದ್ದಾರೆ. ‘ಭೂಲ್ಚುಕ್ ಮಾಫ್’ ಸಿನಿಮಾ ಮೇ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಧನಶ್ರೀ ವರ್ಮಾ ತೆಲುಗು ಸಿನಿಮಾ ಒಂದನ್ನು ಸಹ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೆ ಇನ್ನಷ್ಟೆ ಆರಂಭವಾಗಬೇಕಿದೆ. ಸಿನಿಮಾದಲ್ಲಿ ಎರಡನೇ ನಾಯಕಿಯಂತೆ ಧನಶ್ರೀ.