
ಧನಶ್ರೀ ವರ್ಮಾ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಕ್ರಿಕೆಟರ್ ಯಜುವೇಂದ್ರ ಚಹಲ್ನ ವಿವಾಹ ಆದ ಬಳಿಕ ಇವರಿಗೆ ಭಾರಿ ಜನಪ್ರಿಯತೆ ಬಂತು. ಈಗ ಧನಶ್ರೀ ಹಾಗೂ ಚಹಲ್ ಬೇರೆ ಆಗಿದ್ದಾರೆ. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಧನಶ್ರೀ ಅವರು ವೃತ್ತಿಯಲ್ಲಿ ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್. ಧನಶ್ರೀ ಹಾಗೂ ಚಹಲ್ ಕೊವಿಡ್ ಸಮಯದಲ್ಲಿ ಮದುವೆ ಆದರು. ಈ ವಿವಾಹ ಹೆಚ್ಚು ವರ್ಷ ಉಳಿಯಲಿಲ್ಲ. ಕೆಲವೇ ವರ್ಷಗಳಲ್ಲಿ ಇವರು ಬೇರೆ ಆದರು. ಅಧಿಕೃತವಾಗಿ ಧನಶ್ರೀ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ.

ವಿಚ್ಛೇದನದ ಬಳಿಕ ಧನಶ್ರೀ ಅವರು ಕುಗ್ಗಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಹಂಚಿಕೊಂಡಿರೋ ಹೊಸ ಫೋಟೋ ವೈರಲ್ ಆಗಿದೆ.

ಜೀವನದಲ್ಲಿ ಯಾವುದಾದರೂ ಕೆಟ್ಟ ಘಟನೆ ನಡೆದರೆ ಅದನ್ನು ನೆನೆದು ಕೊರಗುತ್ತಾ ಕೂರುವ ಜಾಯಮಾನ ಧನಶ್ರೀ ಅವರದ್ದಲ್ಲ. ಏನೇ ಬಂದರೂ ಅದನ್ನು ಖುಷಿಯಿಂದ ಸ್ವೀಕರಿಸುವ ಕೆಲಸವನ್ನು ಅವರು ಮಾಡುತ್ತಾರೆ. ಈಗ ವಿಚ್ಛೇದನದ ಬಳಿಕ ಖುಷಿಯಿಂದ ಇರೋದನ್ನು ಕಲಿತಿದ್ದಾರೆ.

ಧನಶ್ರೀ ಅವರಿಗೆ ಚಿತ್ರರಂಗದಿಂದ ಆಫರ್ ಬರುತ್ತಿದೆ. ಅವರನ್ನು ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅವರಿಗೆ ಯಾವುದೇ ಬೇಸರ ಇಲ್ಲದೆ ಇವರು ಪೋಸ್ ಕೊಡುತ್ತಾರೆ. ಮುಂದೆ ಇವರು ಬಿಗ್ ಬಾಸ್ಗೆ ಕಾಲಿಟ್ಟರೂ ಅಚ್ಚರಿ ಏನಿಲ್ಲ.