ದಿಶಾ ಪಟಾಣಿ ಅವರು ಸದಾ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಂಡು ಗಮನ ಸೆಳೆಯುತ್ತಾರೆ. ಅವರು ಹಂಚಿಕೊಳ್ಳುವ ಫೋಟೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಬರುತ್ತದೆ. ಆದರೆ, ಒಂದು ವರ್ಗದ ಜನರು ಟ್ರೋಲ್ ಮಾಡುತ್ತಾರೆ.
ಯಾವುದೇ ಸೆಲೆಬ್ರಿಟಿಗಳು ಫೋಟೋ ಹಂಚಿಕೊಂಡರೆ ಅದರ ಬಗ್ಗೆ ಕೊಂಕು ತೆಗೆಯುವವರು ಒಂದಷ್ಟು ಮಂದಿ ಇರುತ್ತಾರೆ. ದಿಶಾಗೂ ಅದೇ ರೀತಿ ಆಗಿದೆ.
ದಿಶಾ ಪಟಾಣಿ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಬಂದಾಗ ಅವರ ಮುಖ ಇದ್ದಿದ್ದಕ್ಕೂ ಈಗ ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಇದನ್ನೇ ಇಟ್ಟುಕೊಂಡು ಟೀಕೆ ಮಾಡಲಾಗಿದೆ.
‘ಮುಖಕ್ಕೆ ನೀವು ಎಷ್ಟು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದೀರಿ’ ಎಂದು ಅನೇಕರು ಕೇಳಿದ್ದಾರೆ. ಇನ್ನೂ ಕೆಲವರು ಅಶ್ಲೀಲವಾಗಿ ಕಮೆಂಟ್ ಹಾಕಿದ್ದಾರೆ.
‘ಟೈಗರ್ ಶ್ರಾಫ್ ಜೊತೆ ದಿಶಾ ಪಟಾಣಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ದಿಶಾ ಒಪ್ಪಿಕೊಂಡಿಲ್ಲ. ಇವರು ಮದುವೆ ಆಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.