AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಡಾರ್ಕ್​ ಚಾಕೊಲೇಟ್ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ? ಇಲ್ಲಿದೆ ಮಾಹಿತಿ

ಅನೇಕ ಜನರು ಚಾಕೊಲೇಟ್ ತಿನ್ನಲು ಇಷ್ಟಪಡುತ್ತಾರೆ. ಡಾರ್ಕ್ ಚಾಕೊಲೇಟ್‌ಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಅನೇಕ ಅಧ್ಯಯನಗಳಿಂದ ತಿಳಿದುಬಂದಿದೆ. ಈಗ ಡಾರ್ಕ್ ಚಾಕೊಲೇಟ್‌ನ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.

ಗಂಗಾಧರ​ ಬ. ಸಾಬೋಜಿ
|

Updated on: May 12, 2023 | 7:00 AM

ಕೊಲೆಸ್ಟ್ರಾಲ್: ಡಾರ್ಕ್ ಚಾಕೊಲೇಟ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್​ನ್ನು 
ಕರಗಿಸುವುದಲ್ಲದೆ ಒಳ್ಳೆಯ ಕೊಲೆಸ್ಟ್ರಾಲ್​ನ್ನು ಹೆಚ್ಚಿಸುತ್ತದೆ ಎಂದು 
ಅಧ್ಯಯನಗಳು ಸಾಬೀತು ಮಾಡಿವೆ. ಹಾಗಾಗಿ ಡಾರ್ಕ್
ಚಾಕೊಲೇಟ್ ತಿನ್ನುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

ಕೊಲೆಸ್ಟ್ರಾಲ್: ಡಾರ್ಕ್ ಚಾಕೊಲೇಟ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್​ನ್ನು ಕರಗಿಸುವುದಲ್ಲದೆ ಒಳ್ಳೆಯ ಕೊಲೆಸ್ಟ್ರಾಲ್​ನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಹಾಗಾಗಿ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

1 / 5
ರಕ್ತದೊತ್ತಡ ನಿಯಂತ್ರಣ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಮೆಗ್ನೀಸಿಯಮ್ 
ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್ 
ತಿನ್ನುವುದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತದೆ.

ರಕ್ತದೊತ್ತಡ ನಿಯಂತ್ರಣ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಮೆಗ್ನೀಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ತಿನ್ನುವುದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತದೆ.

2 / 5
ಮೆದುಳಿನ ಕಾರ್ಯ: ಡಾರ್ಕ್ ಚಾಕೊಲೇಟ್ ಮೆಮೊರಿ ಪವರ್​​ ಹೆಚ್ಚಿಸಲು 
ಮತ್ತು ಮೆದುಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್ 
ತಿನ್ನುವುದರಿಂದ ಮೆದುಳಿಗೆ ರಕ್ತದ ಹರಿವು ಸುಧಾರಿಸುತ್ತದೆ.  
ಪರಿಣಾಮವಾಗಿ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಮೆದುಳಿನ ಕಾರ್ಯ: ಡಾರ್ಕ್ ಚಾಕೊಲೇಟ್ ಮೆಮೊರಿ ಪವರ್​​ ಹೆಚ್ಚಿಸಲು ಮತ್ತು ಮೆದುಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಮೆದುಳಿಗೆ ರಕ್ತದ ಹರಿವು ಸುಧಾರಿಸುತ್ತದೆ. ಪರಿಣಾಮವಾಗಿ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

3 / 5
ಹೃದಯದ ಆರೋಗ್ಯ: ಡಾರ್ಕ್ ಚಾಕೊಲೇಟ್ ಹೃದಯರಕ್ತನಾಳದ ಕಾಯಿಲೆಯಿಂದ ರಕ್ಷಿಸುತ್ತದೆ. ಇದರ ಪರಿಣಾಮವಾಗಿ ಹೃದಯರಕ್ತನಾಳದ ಕಾಯಿಲೆ ಮತ್ತು ಹೃದಯಾಘಾತದ 
ಅಪಾಯ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯ: ಡಾರ್ಕ್ ಚಾಕೊಲೇಟ್ ಹೃದಯರಕ್ತನಾಳದ ಕಾಯಿಲೆಯಿಂದ ರಕ್ಷಿಸುತ್ತದೆ. ಇದರ ಪರಿಣಾಮವಾಗಿ ಹೃದಯರಕ್ತನಾಳದ ಕಾಯಿಲೆ ಮತ್ತು ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.

4 / 5
ತೂಕ ನಿಯಂತ್ರಣ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವು ಡಾರ್ಕ್ ಚಾಕೊಲೇಟ್ ಸೇವಿಸಿದ 1000 ಜನರ ಮೇಲೆ ಅಧ್ಯಯನ ನಡೆಸಿತು. 
ಹೆಚ್ಚು ಚಾಕಲೇಟ್ ತಿನ್ನುವವರು ತೆಳ್ಳಗಿರುತ್ತಾರೆ ಮತ್ತು ಸಾಂದರ್ಭಿಕವಾಗಿ ತಿನ್ನುವವರಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತಾರೆ ಎಂದು ಅಧ್ಯಯನದಿಂದ ಸಾಬೀತಾಗಿದೆ.
ಇದು ತೂಕ ನಷ್ಟವನ್ನು ಉತ್ತೇಜಿಸುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ತೂಕ ನಿಯಂತ್ರಣ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವು ಡಾರ್ಕ್ ಚಾಕೊಲೇಟ್ ಸೇವಿಸಿದ 1000 ಜನರ ಮೇಲೆ ಅಧ್ಯಯನ ನಡೆಸಿತು. ಹೆಚ್ಚು ಚಾಕಲೇಟ್ ತಿನ್ನುವವರು ತೆಳ್ಳಗಿರುತ್ತಾರೆ ಮತ್ತು ಸಾಂದರ್ಭಿಕವಾಗಿ ತಿನ್ನುವವರಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತಾರೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಇದು ತೂಕ ನಷ್ಟವನ್ನು ಉತ್ತೇಜಿಸುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

5 / 5
Follow us