ಲೈಂಗಿಕ ಆರೋಗ್ಯವು ಸಂಗಾತಿಗಳ ನಡುವಿನ ಅನ್ಯೋನ್ಯತೆ ಮತ್ತು ಆನಂದವನ್ನು ಸುಧಾರಿಸುವುದಲ್ಲದೆ ಭಾವನಾತ್ಮಕವಾಗಿಯೂ ಸಂತೋಷವಾಗಿರುವಂತೆ ಮಾಡುತ್ತದೆ. ಲೈಂಗಿಕ ಶಕ್ತಿ ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸಲು ಹಲವು ಔಷಧಿಗಳು ಇದ್ದರೂ, ಇವು ಆರೋಗ್ಯಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಅನೇಕ ಜನರು ನೈಸರ್ಗಿಕವಾಗಿ ಲೈಂಗಿಕ ಶಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಫಲವತ್ತತೆ ಮತ್ತು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಅನೇಕ ಆಯುರ್ವೇದ ಆಹಾರಗಳಿವೆ. ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಆಯುರ್ವೇದ ಶಿಫಾರಸು ಮಾಡಿದ ಟಾಪ್ 5 ಆಹಾರಗಳ ಮಾಹಿತಿ ಇಲ್ಲಿದೆ.
ದಾಳಿಂಬೆ; ಈ ಹಣ್ಣಿನಲ್ಲಿ ಹಲವು ಪೋಷಕಾಂಶಗಳು ಅಡಗಿವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಸಂತಾನೋತ್ಪತ್ತಿ ಹಾರ್ಮೋನ್ಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ, ಇದು ಗರ್ಭಧಾರಣೆಯ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ದಾಳಿಂಬೆಯಲ್ಲಿ ಪಾಲಿಫಿನಾಲ್‌ಗಳು ಇರುವುದರಿಂದ ಇದು ರಕ್ತನಾಳಗಳ ಹರಿವನ್ನು ಸರಾಗವಾಗಿಸಿ ಹೃದಯ ಮತ್ತು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ದಾಳಿಂಬೆ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಆದ್ದರಿಂದ ನಿಮಿರುವಿಕೆಯ ಸಮಸ್ಯೆ ಎದುರಿಸುತ್ತಿರುವ ಪುರುಷರಿಗೆ ಮತ್ತು ಮುಟ್ಟಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ದಾಳಿಂಬೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಖರ್ಜೂರ; ಈ ಸೂಪರ್‌ಫುಡ್ ಪುರುಷ ಫಲವತ್ತತೆ ಮತ್ತು ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಪ್ರಸಿದ್ಧವಾಗಿದೆ. ಇದು ಪುರುಷ ಮತ್ತು ಮಹಿಳೆಯಲ್ಲಿ ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ಖರ್ಜೂರವನ್ನು ತಿನ್ನುವುದು ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಇದು ಒಳಗೊಂಡಿದೆ.
ಬಾರ್ಲಿ ಬೀಜಗಳು; ಬಾರ್ಲಿಯಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ. ಇವು ಪುರುಷರು ಮತ್ತು ಮಹಿಳೆಯರಲ್ಲಿ ಅಂಗಗಳಿಗೆ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬಾರ್ಲಿ ಬೀಜಗಳು ನಿಮಿರುವಿಕೆ ಮತ್ತು ಲೈಂಗಿಕ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ಶಕ್ತಿಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಬೆಳ್ಳುಳ್ಳಿ; ಬೆಳ್ಳುಳ್ಳಿಯಲ್ಲಿ ಹಲವು ಪೋಷಕಾಂಶಗಳಿವೆ. ಇದು ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಒಳಗೊಂಡಿದೆ. ಹಲವಾರು ಮಾನವ ಮತ್ತು ಪ್ರಾಣಿಗಳ ಅಧ್ಯಯನಗಳು ಬೆಳ್ಳುಳ್ಳಿ ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ತೋರಿಸಿದೆ. ಇದರಲ್ಲಿ ಇರುವ ಅಲಿಸಿನ್ ಎಂಬ ಸಂಯುಕ್ತವು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ವಾಲ್ ನಟ್ಸ್, ಡ್ರೈ ಫ್ರೂಟ್ಸ್; ಇವುಗಳಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಮಹಿಳೆಯರು ಪಿಸ್ತಾ, ವಾಲ್ ನಟ್ಸ್, ಬಾದಾಮಿ, ಗೋಡಂಬಿ ಮತ್ತು ಕಡಲೆಕಾಯಿಗಳಂತಹ ಬೀಜಗಳನ್ನು ತಿನ್ನುವ ಮೂಲಕ ಲೈಂಗಿಕ ಶಕ್ತಿ ಹೆಚ್ಚಿಸಬಹುದು. ಅವು ಅಮೈನೋ ಆಮ್ಲ ಎಲ್-ಅರ್ಜಿನೈನ್ ಅನ್ನು ಹೊಂದಿರುತ್ತವೆ. ಇದು ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಜನನಾಂಗಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಎಂಬುದು ಸಾಬೀತಾಗಿದೆ.
Published On - 10:41 pm, Thu, 11 May 23