Updated on: Nov 04, 2021 | 3:23 PM
ದೀಪಾವಳಿಗೆ ಉತ್ತರ ಭಾರತೀಯರಿಗೆ ಹೊಸ ವರ್ಷ. ಲೆಕ್ಕಪತ್ರಗಳನ್ನು ಹೊಸದಾಗಿ ಆರಂಭಿಸುವ ದಿನ. ಹೊಸದಾಗಿ ವ್ಯಾಪಾರ- ವ್ಯವಹಾರದ ಪುಸ್ತಕಗಳನ್ನು ಲೆಕ್ಕ ನೋಡಿಕೊಳ್ಳುವ ಸಮಯ ಇದು. ಆದ್ದರಿಂದ ದೀಪಾವಳಿಗೆ ಮುಂದಿನ ಒಂದು ವರ್ಷದ ಭವಿಷ್ಯ ಹೇಗಿರುತ್ತದೆ, ಅದರಲ್ಲೂ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಯವರಿಗೆ ಹೇಗಿರುತ್ತದೆ ಎಂದು ತಿಳಿಸುವ ಪ್ರಯತ್ನ ಇದು. ಈ ಬಾರಿಯ ದೀಪಾವಳಿಯಿಂದ ಮುಂದಿನ ದೀಪಾವಳಿಗೆ ಅಂದರೆ ನವೆಂಬರ್ 4, 2021ರಿಂದ ಅಕ್ಟೋಬರ್ 24, 2022ರ ತನಕ ಹೇಗಿರುತ್ತದೆ ಹಣಕಾಸಿನ ಸ್ಥಿತಿಗತಿ ಎಂಬುದನ್ನು ಗ್ರಹಗಳ ಗೋಚಾರದ ಆಧಾರದ ಮೇಲೆ ತಿಳಿಸಲಾಗುತ್ತದೆ. 2021ರ ನವೆಂಬರ್ನಿಂದ 2022ರ ಅಕ್ಟೋಬರ್ ಮಧ್ಯೆ ಪ್ರಮುಖ ಗ್ರಹಗಳ ಸಂಚಾರವನ್ನು ಒಮ್ಮೆ ತಿಳಿದುಕೊಳ್ಳಿ. ಗುರು: ನವೆಂಬರ್ 20ರಿಂದ ಏಪ್ರಿಲ್ 13, 2022ರ ತನಕ ಕುಂಭ ರಾಶಿ ಹಾಗೂ ಏಪ್ರಿಲ್ 13, 2022ರಿಂದ ಮುಂದಿನ ದೀಪಾವಳಿ ತನಕ ಮೀನ ರಾಶಿಯಲ್ಲಿ ಇರುತ್ತದೆ. ಶನೈಶ್ಚರ: ನವೆಂಬರ್ನಿಂದ ಏಪ್ರಿಲ್ 29, 2022ರ ತನಕ ಮಕರ ರಾಶಿಯಲ್ಲಿ ಸಂಚಾರ. ಆ ನಂತರ ಏಪ್ರಿಲ್ 29, 2022ರಿಂದ ಜುಲೈ 12, 2022ರ ತನಕ ಕುಂಭದಲ್ಲಿ ವಕ್ರೀ ಸಂಚಾರ. ಈ ಅವಧಿ ಮುಗಿದ ಮೇಲೆ ಶನಿ ಮತ್ತೆ ಮಕರ ರಾಶಿಗೆ ಪ್ರವೇಶಿಸಿ, ಮುಂದಿನ ದೀಪಾವಳಿಗೂ ಮಕರದಲ್ಲೇ ಇರುತ್ತದೆ. ಇನ್ನು ರಾಹು- ಕೇತು. ನವೆಂಬರ್ 2021ರಿಂದ ಏಪ್ರಿಲ್ 12, 2022ರ ತನಕ ವೃಷಭದಲ್ಲಿ ರಾಹು, ವೃಶ್ಚಿಕದಲ್ಲಿ ಕೇತು ಸಂಚಾರ ಆಗುತ್ತದೆ. ಅದಾದ ಮೇಲೆ ಮುಂದಿನ ದೀಪಾವಳಿ ತನಕ ಮೇಷದಲ್ಲಿ ರಾಹು ಹಾಗೂ ತುಲಾದಲ್ಲಿ ಕೇತು ಇರುತ್ತದೆ. ಪ್ಲವನಾಮ ಸಂವತ್ಸರದ ಆರು ತಿಂಗಳು, ಶುಭಕೃತ ನಾಮ ಸಂವತ್ಸರದ ಆರು ತಿಂಗಳು ಹೀಗೆ ಒಂದು ವರ್ಷದಲ್ಲಿ ಬರುವ ಎರಡು ಸಂವತ್ಸರಗಳ ಗೋಚಾರ ಫಲದ ಮಾಹಿತಿ ನಿಮಗಾಗಿ ಇಲ್ಲಿದೆ.
ಮೇಷ ಉದ್ಯಮದಾರರಿಗೆ ಬಾಕಿ ಹಣ ಬರಬೇಕಿದೆ. ಹೊಸ ಯೋಜನೆಗಳಿಗೆ ಕೈ ಹಾಕುವುದಕ್ಕೆ ಉತ್ತೇಜನ ಸಿಗುತ್ತದೆ. ಸಾಲ ಮಾಡಿಯಾದರೂ ಉದ್ಯಮ ವಿಸ್ತರಿಸುವ ಹಂಬಲ ಮೂಡುತ್ತದೆ. ಆದರೆ ನೆನಪಿಡಿ, ಅತಿಯಾದ ಲಾಭ ಆಗಲಿ ಅಂತ ದುಡ್ಡಿನ ಬೆನ್ನು ಹತ್ತಿ, ನೀತಿ- ನಿಯಮಗಳನ್ನು ಮೀರಬೇಡಿ. ಇದಕ್ಕೂ ಮುಂಚೆ ನೀವು ತೆಗೆದುಕೊಂಡಿದ್ದ ನಿರ್ಧಾರದಿಂದ ಲಾಭ ಆಗಿದೆ ಎಂಬ ಒಂದೇ ಕಾರಣಕ್ಕೆ ಈಗಲೂ ಅದೇ ದಾರಿ ತುಳಿಯಬೇಡಿ. ಈ ವರ್ಷ ನಿಮಗೆ ಬರುವ ಲಾಭವನ್ನು ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೂಡಿಟ್ಟುಕೊಳ್ಳಿ. ಷೇರು ವ್ಯವಹಾರದಲ್ಲಿ ಇರುವವರಿಗೆ ದೊಡ್ಡ ನಷ್ಟ ಆಗಬಹುದು. ನಿಮ್ಮ ನಿರ್ಧಾರದ ಬಗ್ಗೆ ಗುಮಾನಿ ಇದ್ದಲ್ಲಿ ತಜ್ಞರಿಂದ ಮಾರ್ಗದರ್ಶನ ಪಡೆಯಿರಿ. ಖರ್ಚಿನಲ್ಲಿ ಹಿಡಿತ ಇರಲಿ.
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ವೃಶ್ಚಿಕ
ಧನುಸ್ಸು
ಮಕರ
ಕುಂಭ
ಮೀನ
Published On - 3:18 pm, Thu, 4 November 21