AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dragon Lady: ಡ್ರ್ಯಾಗನ್​ನಂತೆ ಕಾಣಲು 39 ಲಕ್ಷ ಖರ್ಚು ಮಾಡಿದ ಮಹಿಳೆ; ಹೇಗಿದ್ದಾಳೆ ನೋಡಿ

ಕೆಲವರ ವರ್ತನೆ, ಕಾಣಿಸಿಕೊಳ್ಳುವ ರೀತಿ ತುಂಬಾ ವಿಚಿತ್ರವಾಗಿರುತ್ತದೆ. ಮೆಡುಸಾ ಎನ್ನುವ ಮಹಿಳೆ ಇದಕ್ಕೆ ತಾಜಾ ಉದಾಹರಣೆ. ಡ್ರ್ಯಾಗನ್ ತರಹದ ಮುಖವನ್ನು ಪಡೆಯಲು ಅವರು ಸುಮಾರು 39 ಲಕ್ಷ ರೂಪಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಈಗ ಆಕೆಯ ರೂಪವೇ ಜನರನ್ನು ಭಯಪಡಿಸುವಂತಿದೆ.

TV9 Web
| Updated By: Rakesh Nayak Manchi|

Updated on: Feb 02, 2023 | 9:31 PM

Share
Dragon Lady Medusa Woman who spent Rs 39 lakh to look like a dragon Lady photos

ಕೆಲವರ ವರ್ತನೆ, ಕಾಣಿಸಿಕೊಳ್ಳುವ ರೀತಿ ತುಂಬಾ ವಿಚಿತ್ರವಾಗಿರುತ್ತದೆ. ಇವಾ ಟಿಯಾಮತ್ ಮೆಡುಸಾ ಎನ್ನುವ ಮಹಿಳೆ ಇದಕ್ಕೆ ತಾಜಾ ಉದಾಹರಣೆ. ಡ್ರ್ಯಾಗನ್ ತರಹದ ಮುಖವನ್ನು ಪಡೆಯಲು ಅವರು ಸುಮಾರು 39 ಲಕ್ಷ ರೂಪಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಈಗ ಆಕೆಯ ರೂಪವೇ ಜನರನ್ನು ಭಯಪಡಿಸುವಂತಿದೆ.

1 / 5
Dragon Lady Medusa Woman who spent Rs 39 lakh to look like a dragon Lady photos

ಅಮೆರಿಕದ ಟೆಕ್ಸಾಸ್​ನ ಬ್ರೂನಿ ಎಂಬಲ್ಲಿ ಜನಿಸಿದ ಮೆಡುಸಾ ತನ್ನ ಸದ್ಯದ ರೂಪವನ್ನು ಜನರು ಹೆದರುವಂತೆ ಮಾಡಿದ್ದಾರೆ, ವಾಸ್ತವವಾಗಿ, ಅವರು ಪ್ಲಾಸ್ಟಿಕ್ ಸರ್ಜರಿ ಮೂಲಕ ಡ್ರ್ಯಾಗನ್ ಆಗಿ ರೂಪಾಂತರಗೊಂಡಿದ್ದಾರೆ. ಈ ಹೊಸ ನೋಟವನ್ನು ಪಡೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ.

2 / 5
Dragon Lady Medusa Woman who spent Rs 39 lakh to look like a dragon Lady photos

ವರದಿಗಳ ಪ್ರಕಾರ, ಅವಳು ಡ್ರ್ಯಾಗನ್‌ನಂತೆ ಕಾಣಲು ಶಸ್ತ್ರಚಿಕಿತ್ಸೆಗೆ ಸುಮಾರು 39 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ತನ್ನ ಕಿವಿಯನ್ನು ಸಂಪೂರ್ಣವಾಗಿ ಕತ್ತರಿಸಿದ್ದು, ಮೂಗನ್ನೂ ಅರ್ಧ ಕತ್ತರಿಸಿದ್ದಾರೆ. ಇದಲ್ಲದೇ ತಲೆ ಮೇಲೆ ಎಂಟು ಕೊಂಬುಗಳನ್ನು ಮಾಡಿದ್ದು, ತನ್ನ ನಾಲಿಗೆಯನ್ನು ಹಾವಿನಂತೆ ಎರಡಾಗಿ ಕತ್ತರಿಸಿದ್ದಾರೆ.

3 / 5
Dragon Lady Medusa Woman who spent Rs 39 lakh to look like a dragon Lady photos

ಶಸ್ತ್ರಚಿಕಿತ್ಸೆಯ ಹೊರತಾಗಿ, ತನ್ನ ದೇಹದ ಮೇಲೆ ಹಲವು ರೀತಿಯ ಹಚ್ಚೆಗಳನ್ನು ಸಹ ಹಾಕಿಸಿಕೊಂಡಿದ್ದಾರೆ. ಅವರು ತಮ್ಮ ಕಣ್ಣುಗಳ ಬಿಳಿ ಬಣ್ಣವನ್ನು ಸಹ ಹಸಿರು ಬಣ್ಣಕ್ಕೆ ತಿರುಗಿಸಿದ್ದಾರೆ. ಕಣ್ಣುಗಳು ಸಹ ಹಸಿರು ಬಣ್ಣದಲ್ಲಿ ಕಾಣುತ್ತಿವೆ.

4 / 5
Dragon Lady Medusa Woman who spent Rs 39 lakh to look like a dragon Lady photos

ವರದಿಗಳ ಪ್ರಕಾರ, ಮೆಡುಸಾ ಅವರು ಮಗುವಾಗಿದ್ದಾಗ ತನ್ನ ಪೋಷಕರು ತನ್ನನ್ನು ಮನೆಯಿಂದ ಹೊರಹಾಕಿದ್ದರು. ಅಂದಿನಿಂದ ಹಾವುಗಳೊಂದಿಗೆ ವಾಸಿಸಲು ಆರಂಭಿಸಿದ್ದರು. ಸರೀಸೃಪ ಜಾತಿಗೆ ಧನ್ಯವಾದ ಹೇಳಲು ತನ್ನನ್ನು ಈ ರೀತಿ ಮಾಡಿದ್ದಾರೆ.

5 / 5