Dulquer Salmaan Birthday: ದುಲ್ಕರ್ ಸಲ್ಮಾನ್ ನಟಿಸಿರುವ ಈ ಚಿತ್ರಗಳನ್ನು ನೀವಿನ್ನೂ ನೋಡಿಲ್ಲವೇ? ಮಿಸ್ ಮಾಡಲೇಬೇಡಿ
TV9 Web | Updated By: shivaprasad.hs
Updated on:
Jul 28, 2021 | 12:49 PM
Dqsalmaan: ಮಲಯಾಳಂನ ಖ್ಯಾತ ನಟ, ತಮ್ಮ ಚಿತ್ರಗಳಿಂದ ಭಾರತದಾದ್ಯಂತ ಗುರುತಿಸಿಕೊಂಡಿರುವ ದುಲ್ಕರ್ ಸಲ್ಮಾನ್ ಜನ್ಮದಿನವಿಂದು. ಅವರ ಮುಂದಿನ ಚಿತ್ರ ‘ಕುರುಪ್’ ಕನ್ನಡದಲ್ಲೂ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ಬಂದಿದೆ. ಅದೇನೇ ಇದ್ದರೂ, ತಮ್ಮ ಅಭಿನಯದಿಂದ ಮನೆ ಮಾತಾಗಿರುವ ಅವರ ಅತ್ಯುತ್ತಮ ಚಿತ್ರಗಳ ಪಟ್ಟಿ ಇಲ್ಲಿದೆ.
1 / 10
ದುಲ್ಕರ್ ಸಲ್ಮಾನ್ ನಟಿಸಿರುವ ಒಂದು ಚಲನಚಿತ್ರ ಏನೆಲ್ಲಾ ಹೊಸತನ್ನು ದೃಶ್ಯ ರೂಪಕವಾಗಿ ಉಣಬಡಿಸಬಹುದು ಎಂಬುದಕ್ಕೆ ‘ಚಾರ್ಲಿ’ ಅತ್ಯುತ್ತಮ ಉದಾಹರಣೆ. ಇದರಲ್ಲಿ ಚಾರ್ಲಿ/ ಜಿನ್ ಪಾತ್ರ ಮಾಡಿರುವ ದುಲ್ಕರ್ಗೆ ಜೋಡಿಯಾಗಿ ಪಾರ್ವತಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ‘ಚುಂದರಿ ಪೆಣ್ಣೇ’ ಹಾಡನ್ನು ದುಲ್ಕರ್ ಸ್ವತಃ ಹಾಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಈ ಚಿತ್ರಕ್ಕೆ ಸಿಗದಿದ್ದರೂ, ನಂತರದಲ್ಲಿ ಇದು ಸಿನಿ ಪ್ರೇಮಗಳ ಮನೆಮಾತಾಯಿತು. ಜೀವನ ಪ್ರೀತಿ ಉಳ್ಳವರ ಹೃದಯದ ಮಾತುಗಳನ್ನು ಈ ಚಿತ್ರ ತೆರೆದಿಡುತ್ತದೆ. ನೀವಿನ್ನೂ ನೋಡಿಲ್ಲವಾದರೆ ಮಿಸ್ ಮಾಡಲೇಬೇಡಿ.
2 / 10
ಮಣಿರತ್ನಂ ನಿರ್ದೇಶನದ ‘ಓಕೆ ಕಣ್ಮಣಿ’ ಚಿತ್ರ ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಂಡಿತ್ತು. ನಿತ್ಯಾ ಮೆನನ್, ಪ್ರಕಾಶ್ ರಾಜ್ ಮೊದಲಾದವರು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮಣಿರತ್ನಂ ನಿರ್ದೇಶನದ ವಿಭಿನ್ನ ಚಿತ್ರವಾಗಿ ಈ ಚಿತ್ರ ಗುರುತಿಸಿಕೊಂಡಿದ್ದು, ಅಪಾರ ಯಶಸ್ಸನ್ನೂ, ವಿಮರ್ಶಕರಿಂದ ಮೆಚ್ಚುಗೆಯನ್ನೂ ಪಡೆದಿತ್ತು.
3 / 10
‘ನೀಲಾಕಾಶಂ ಪಚ್ಚ ಕಡಲ್ ಚುವನ್ನಭೂಮಿ’ ಎಂಬ ಚಂದದ ಆದರೆ ದೊಡ್ಡ ಹೆಸರಿರುವ ಈ ಚಿತ್ರದ ಕತೆಯೂ ಇಡೀ ಭಾರತದ ಹರಹನ್ನು ಹೊಂದಿದೆ. ನೀಲಿ ಆಕಾಶ, ಹಸಿರು ಸಮುದ್ರ, ಕೆಂಪು ಭೂಮಿ ಎಂಬ ಹೆಸರಿಗೆ ತಕ್ಕಂತೆ ವಿವಿಧ ತಾಣಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರವು ಬೈಕ್ನಲ್ಲಿ ಹಿಮಾಲಯಕ್ಕೆ ಹೊರಟ ಈರ್ವರ ಕತೆಯನ್ನು ಹೊಂದಿದೆ. ಕೊನೆಗೆ ಅವರ ಯಾತ್ರೆಯ ಮೂಲ ಉದ್ದೇಶ ಬದಲಾಗುತ್ತದೆ. ಅದು ಏಕೆ, ಹೇಗೆ, ನಂತರ ಅವರು ಎಲ್ಲಿಗೆ ಹೋಗುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ನೀವು ಚಿತ್ರವನ್ನೇ ನೋಡಬೇಕು.
4 / 10
‘100 ಡೇಸ್ ಆಫ್ ಲವ್’ ಈ ಚಿತ್ರ ಸಂಪೂರ್ಣವಾಗಿ ರೊಮ್ಯಾಂಟಿಕ ಮಾದರಿಯ ಚಿತ್ರ. ಅದ್ಭುತ ತಾಣಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ದುಲ್ಕರ್ ಜೊತೆಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ. ಕತೆಯಲ್ಲಿ ಬಹಳ ಹೊಸತನವಿಲ್ಲದಿದ್ದರೂ ಚಿತ್ರ ತನ್ನ ನಿರೂಪಣೆಯಿಂದಾಗಿ, ಜೀವಂತಿಕೆಯಿಂದಾಗಿ ಗಮನ ಸೆಳೆಯುತ್ತದೆ.
5 / 10
ದುಲ್ಕರ್ ಸಲ್ಮಾನ್ ವೃತ್ತಿ ಜೀವನದಲ್ಲಿ ನಿರ್ವಹಿಸಿದ ಅತ್ಯಂತ ವಿಭಿನ್ನ ಪಾತ್ರ ಇದು ಎಂದರೆ ತಪ್ಪಾಗಲಿಕ್ಕಿಲ್ಲ. ಕೀರ್ತಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ, ಖ್ಯಾತ ನಟಿ ಸಾವಿತ್ರಿ ಅವರ ಜೀವನ ಚಿತ್ರದಲ್ಲಿ ದುಲ್ಕರ್ ಜೆಮಿನಿ ಗಣೇಶನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ.
6 / 10
ಇರ್ಫಾನ್ ಖಾನ್, ಮಿಥಿಲಾ ಪಾಲ್ಕರ್ ಜೊತೆಗೆ ದುಲ್ಕರ್ ಕಾಣಿಸಿಕೊಂಡಿರುವ ಈ ಚಿತ್ರದಿಂದ ದುಲ್ಕರ್ ಸಲ್ಮಾನ್ ಬಾಲಿವುಡ್ ಪ್ರವೇಶಿಸಿದರು. ತಮಾಶೆಯ ಕಥಾ ಹಂದರ ಹೊಂದಿದ್ದರೂ ಜೀವನದ ಪಾಠಗಳನ್ನು ಈ ಚಿತ್ರ ಬಲುಸುಂದರವಾಗಿ ತೆರೆದಿಡುತ್ತದೆ. ಇದರಲ್ಲಿ ಇರ್ಫಾನ್ ಖಾನ್ ಅಭಿನಯ ನೋಡಿದವರಿಗೆ ಇರ್ಫಾನ್ ಪಾತ್ರ ವೈವಿಧ್ಯತೆಯ ಮತ್ತೊಂದು ಪರಿಚಯವೂ ಆಗುತ್ತದೆ. ಆಧುನಿಕ ಬದುಕು, ಸಾಂಪ್ರದಾಯಿಕ ಬದುಕು ಈ ನಡುವಿನ ಗೊಂದಲಗಳು, ವೃತ್ತಿ- ಪ್ರವೃತ್ತಿ ಈ ಎರಡರ ಆಯ್ಕೆಗಳು ಇವುಗಳನ್ನು ತಮಾಶೆಯ ಧಾಟಿಯಲ್ಲೇ ಚಿತ್ರ ಚರ್ಚಿಸುತ್ತದೆ.
7 / 10
ಅಂಜಲಿ ಮೆನನ್ ಕತೆ ಬರೆದು, ಅನ್ವರ್ ರಶೀದ್ ನಿರ್ದೇಶಿಸಿರುವ ಉಸ್ತಾದ್ ಹೋಟೆಲ್ ಚಿತ್ರ
8 / 10
ಬೆಂಗಳೂರು ಡೇಸ್ ಚಿತ್ರದ ಪೋಸ್ಟರ್
9 / 10
ದುಲ್ಕರ್ ಸಲ್ಮಾನ್, ವಿನಾಯಕನ್ ನಟಿಸಿರುವ ‘ಕಮ್ಮಟ್ಟಿಪಾದಮ್’
10 / 10
ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿರುವ ‘ವರನೆ ಅವಶ್ಯಮುಂಡು’ ಚಿತ್ರ.
Published On - 11:57 am, Wed, 28 July 21