Kannada News Photo gallery Exciting story behind bellary jail: Harsh punishment given to prisoners, heres photos, Karnataka news in kannada
ಬಳ್ಳಾರಿ ಜೈಲ್ ಹಿಂದಿದೆ ರಣರೋಚಕ ಕಥೆ: ಕೈದಿಗಳಿಗೆ ನೀಡುತ್ತಿದ್ರು ಕಠಿಣಾತಿ ಕಠಿಣ ಶಿಕ್ಷೆ
ನಟ ದರ್ಶನ ಅವರ ಜೈಲಿನಲ್ಲಿರುವ ಫೋಟೋ, ವಿಡಿಯೋಗಳು ವೈರಲ್ ಆದ ಬಳಿಕ ಇದೀಗ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲ್ಗೆ ಶಿಫ್ಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಬಳ್ಳಾರಿ ಸೆಂಟ್ರಲ್ ಜೈಲ್ ಬಗ್ಗೆ ಚರ್ಚೆ ಶುರುವಾಗಿದೆ. ಈ ಜೈಲ್ಗೆ ತನ್ನದೆ ಆದ ಸುಮಾರು 140 ವರ್ಷಗಳಿಂದ ಕೈದಿಗಳಿಗಾಗಿ ಬಳಕೆಯಲ್ಲಿದೆ. ತನ್ನಲ್ಲಿ ರಣರೋಚಕ ಕಥೆಗಳನ್ನು ಅಗಿಸಿಟ್ಟುಕೊಂಡಿದೆ.
1 / 7
ಬಳ್ಳಾರಿ ಜೈಲ್ ತನ್ನಲ್ಲಿ ರಣರೋಚಕ ಕಥೆಗಳನ್ನು ಅಗಿಸಿಟ್ಟುಕೊಂಡಿದೆ. ಇಲ್ಲಿಯ ಜೈಲ್ ಪ್ರತಿಯೊಂದು ಬಂದೀಖಾನೆಗಳು ರಣಭೀಕರ ಕಥೆಗಳನ್ನು ತೆರೆದಿಡುತ್ತವೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಸ್ಥಾಪಿತವಾಗಿದ್ದ ಆಗಿನ ಜೈಲನಲ್ಲಿ ಕೈದಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ನೀಡುತ್ತಿದ್ದರು. ಕೈದಿಗಳು ಭೀಕರ ಶಿಕ್ಷೆಗೆ ಹೆದರಿ ಜೈಲ್ ಗೋಡೆ ಹಾರಿ ಹೋದ ನಿದರ್ಶನಗಳಿವೆ. ಹಾಗಿದ್ದರೆ ಹಿಂದಿನ ಕಾಲದ ಬ್ರಿಟಿಷ್ ಆಡಳಿತದಲ್ಲಿ ಸ್ಥಾಪಿತವಾಗಿದ್ದ ಜೈಲ್‌ಗಳ ಸದ್ಯದ ಸ್ಥಿತಿ ಹೇಗಿದೆ ಇಲ್ಲಿದೆ ಮಾಹಿತಿ.
2 / 7
ಹೌದು. ಆಗಿನ ಕಾಲದಲ್ಲಿ ಬಳ್ಳಾರಿ ಜೈಲು ಅಂದರೆ ಕೈದಿಗಳಿಗೆ ನಡುಕ ಹುಟ್ಟುತ್ತಿತ್ತು. ಅಂಡಮಾನ್ - ನಿಕೋಬಾರ್ ಜೈಲುಗಳ ಬಳಿಕ ಬಳ್ಳಾರಿ ಜೈಲಿನಲ್ಲೇ ಅತೀ ಕಠಿಣ ಶಿಕ್ಷೆಯನ್ನನು ಆಗಿನ ಕೈದಿಗಳಿಗೆ ವಿಧಿಸಲಾಗುತ್ತಿತ್ತು. ಹೀಗಾಗಿ ಭಾರತ ದೇಶದಲ್ಲಿ ಬಳ್ಳಾರಿ ಜೈಲು ಅಂದರೆ ಒಂದು ರೀತಿ ಪ್ರಖ್ಯಾತಿ ಪಡೆದಿದ್ದರೆ, ಮತ್ತೊಂದು ರೀತಿ ಕುಖ್ಯಾತಿ ಕೂಡ ಪಡೆದಿದೆ.
3 / 7
ಬಳ್ಳಾರಿ ಜೈಲಿನ ಇತಿಹಾಸವನ್ನ ಸಂಪಕ್ತಿವಾಗಿ ಹೇಳುವುದಾದರೆ, ಬಳ್ಳಾರಿಯ ಕಂಟೋನ್ಮೆಂಟ್ ಏರಿಯಾದಲ್ಲಿ ಆಗಿನ ಬ್ರಿಟಿಷ್ ಸರ್ಕಾರ 1872 ರಲ್ಲಿ ಸರಿಸುಮಾರು 172 ಎಕರೆ ವಿಸ್ತೀರ್ಣದಲ್ಲಿ ಅಲ್ಲಿಪುರ ಜೈಲ್ ಅನ್ನು ಸ್ಥಾಪನೆ ಮಾಡಿದ್ದರು. ಆ ಜೈಲಿನಲ್ಲಿ ಆಗ ಮದ್ರಾಸ್ ಪ್ರಾಂತ್ಯ ವ್ಯಾಪ್ತಿಯ ಕೈದಿಗಳು ಸೇರಿದಂತೆ ಬೇರೆ ಬೇರೆ ದೇಶದ ಕೈದಿಗಳನ್ನ ಈ ಬಂದೀಖಾನೆಗಳಲ್ಲಿ ಹಾಕುತ್ತಿದ್ದರು.
4 / 7
ಕೇವಲ 10 ಬೈ 6 ವ್ಯಾಪ್ತಿಯ ಒಂದೊಂದು ಬಂದೀಖಾನೆಯಲ್ಲಿ ಒಬ್ಬೊಬ್ಬ ಕೈದಿಯನ್ನ ಇರಿಸಲಾಗುತ್ತಿತ್ತು. ಸ್ವ್ಯಾತಂತ್ರ ಹೋರಾಟಗಾರರನ್ನ, ಬ್ರಿಟಿಷ್ ಆಡಳಿತ ವಿರೋಧಿಗಳನ್ನ, ದರೋಡೆಕೋರರು, ಕೊಲೆಗಡುಕರು, ಸಮಾಜಘಾತುಕ ಶಕ್ತಿಗಳನ್ನ ಈ ಬಂದೀಖಾನೆಗಳಲ್ಲಿ ಹಾಕಲಾಗುತ್ತಿತ್ತು. ಪ್ರಸ್ತುತ ಅದರ ನೆನಪಿಗಾಗಿ ಸ್ವ್ಯಾತಂತ್ರ ಸಮರ ಸೌಧವನ್ನಾಗಿ ಮ್ಯೂಸಿಯಂ ಮಾಡಲಾಗಿದೆ.
5 / 7
ಇನ್ನು ಅಲ್ಲಿಪುರ ಜೈಲಿನ ಬಳಿಕ ಮತ್ತೊಂದು ಜೈಲನ್ನ ಈಗಿನ ಟ್ರಾಮಾ ಕೇರ್ ವ್ಯಾಪ್ತಿಯ ಜಾಗೆಯಲ್ಲಿ ಟಿಬಿ ಸ್ಯಾನಿಟೋರಿಯಂ ಜೈಲನ್ನ ಸ್ಥಾಪನೆ ಮಾಡಲಾಗಿತ್ತು. ಈ ಜೈಲನ್ನ ಸ್ಥಾಪನೆ ಮಾಡಿದ ಉದ್ದೇಶ ಅಂದರೆ 1880 ರ ಬಳಿಕ ಮದ್ರಾಸ್ ಪ್ರಾಂತ್ಯದ ವ್ಯಾಪ್ತಿಯಲ್ಲಿ ಕ್ಷಯ ರೋಗ ಉಲ್ಬಣವಾಗುತ್ತೆ. ಹೀಗಾಗಿ ಅಲ್ಲಿಪುರ ಜೈಲಿನಲ್ಲಿದ್ದ ಆರೋಗ್ಯಯುಕ್ತ ಕೈದಿಗಳಿಗೆ ಕ್ಷಯ ರೋಗ ಹರಡಬಾರದು ಅನ್ನೊದೃಷ್ಟಿಯಿಂದ ಈ ಜೈಲನ್ನ ನಿರ್ಮಾಣ ಮಾಡಲಾಗಿತ್ತು.
6 / 7
ಆರೋಗ್ಯ ಸಮಸ್ಯೆ ಇರುವವರನ್ನ, ಕ್ಷಯ ರೋಗ ಕೈದಿಗಳನ್ನ ಇಲ್ಲಿಗೆ ಶಿಪ್ಟ್ ಮಾಡುತ್ತಿದ್ದರಂತೆ. ಪ್ರಸ್ತುತ ಟಿಬಿ ಸ್ಯಾನಿಟೋರಿಯಂ ಜೈಲಿನ ಬಂದೀಖಾನೆಗಳು ಪ್ರಸ್ತುತವು ಕಾಣಸಿಗುತ್ತಿದ್ದು ಅವುಗಳನ್ನ ಹಾಗೆ ಇರಿಸಲಾಗಿದೆ. ಈಗಲು ಅವುಗಳನ್ನ ಕಾಣಬಹುದಾಗಿದೆ. ಜೊತೆಗೆ ಅಲ್ಲಿ ಕ್ಷಯ ರೋಗದ ವಿಭಾಗವಾಗಿ ಆ ಕಟ್ಟಡವನ್ನ ಬಳಕೆ ಮಾಡಲಾಗುತ್ತಿದೆ. ನಂತರ 1884ರಲ್ಲಿ ಬಳ್ಳಾರಿ ಸೆಂಟ್ರಲ್ ಜೈಲನ್ನ ಸ್ಥಾಪನೆ ಮಾಡಲಾಯಿತು. ಅಲ್ಲಿಂದ ಈ ವರಗೆ ಅಂದರೆ ಸುಮಾರು 140 ವರ್ಷಗಳಿಂದ ಬಳ್ಳಾರಿ ಸೆಂಟ್ರಲ್ ಜೈಲ್ ಕೈದಿಗಳಿಗಾಗಿ ಬಳಕೆಯಲ್ಲಿದೆ.
7 / 7
ಬಳ್ಳಾರಿಯಲ್ಲಿ ಆಗಿನ ಕಾಲದ ಬ್ರಿಟಿಷ್ ಸರ್ಕಾರದ ಆಡಳಿತ ವ್ಯವಸ್ಥೆ ಮೂರು ಜೈಲ್‌ಗಳನ್ನ ಸ್ಥಾಪನೆ ಮಾಡಲಾಗಿತ್ತು. ಅದರಂತೆ ಅಲ್ಲಿಪುರ ಜೈಲು ಈಗ ಬಳ್ಳಾರಿ ವಿಮ್ಸ್ ಆವರಣದಲ್ಲಿ ಮ್ಯೂಸಿಯಂ ಆಗಿ ಮಾರ್ಪಟ್ಟಿದೆ. ಜೊತೆಗೆ ಟಿಬಿ ಸ್ಯಾನಿಟೋರಿಯಂ ಜೈಲು ಕ್ಷಯ ರೋಗದ ವಿಭಾಗವಾಗಿದೆ. ಈಗ ಸದ್ಯ ಉಳಿದು ಕೊಂಡಿದ್ದು 16 ಎಕರೆ ವಿಸ್ತೀರ್ಣದ ಬಳ್ಳಾರಿ ಸೆಂಟ್ರಲ್ ಜೈಲ್. ಆ ಜೈಲ್‌ನಲ್ಲಿ ನಟ ದರ್ಶನ್ ಶಿಫ್ಟ್ ಮಾಡಲಾಗಿದೆ.