
ನಟ ಕಿರಣ್ ರಾಜ್ ಅವರು ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಬ್ಯುಸಿ ಆಗಿದ್ದಾರೆ. ಎರಡಕ್ಕೂ ಸಮಯ ಹೊಂದಿಸಿಕೊಂಡು ಅವರು ಶೂಟಿಂಗ್ನಲ್ಲಿ ಭಾಗಿ ಆಗುತ್ತಾರೆ. ಹಲವು ಆಫರ್ಗಳು ಅವರ ಕೈಯಲ್ಲಿ ಇವೆ.

ಕಿರಣ್ ರಾಜ್ ಅವರಿಗೆ ಇಂದು (ಜುಲೈ 5) ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

‘ಕನ್ನಡತಿ’ ಸೀರಿಯಲ್ ಮೂಲಕ ಕಿರಣ್ ರಾಜ್ ಅವರು ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ದಿನದಿಂದ ದಿನಕ್ಕೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಈ ಧಾರಾವಾಹಿಯಲ್ಲಿ ಅವರು ಹರ್ಷ ಎಂಬ ಪಾತ್ರ ಮಾಡುತ್ತಿದ್ದಾರೆ.

ಚಿತ್ರರಂಗದಿಂದಲೂ ಕಿರಣ್ ರಾಜ್ ಅವರಿಗೆ ಅನೇಕ ಅವಕಾಶಗಳು ಹರಿದುಬರುತ್ತಿವೆ. ಅವರು ನಟಿಸಿದ ‘ಬಡ್ಡೀಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯ್ತು. ಅಭಿಮಾನಿಗಳಿಂದ ಸಿಕ್ಕ ಉತ್ತಮ ರೆಸ್ಪಾನ್ಸ್ ಕಂಡು ಕಿರಣ್ ರಾಜ್ ಖುಷಿ ಆಗಿದ್ದಾರೆ.

ನಟನೆ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಕಾರ್ಯಗಳಿಂದಲೂ ಕಿರಣ್ ರಾಜ್ ಗುರುತಿಸಿಕೊಂಡಿದ್ದಾರೆ. ತಮ್ಮದೇ ಫೌಂಡೇಶನ್ ಹೊಂದಿರುವ ಅವರು ಆ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.