ಬಾಲಿವುಡ್ನ ಪ್ರಸಿದ್ಧ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗೆಳತಿ ಶಿಬಾನಿ ದಂಡೇಕರ್ ಜತೆ ವಿವಾಹ ಬಂಧನಕ್ಕೆ ಒಳಗಾಗಿರುವ ಫರ್ಹಾನ್ಗೆ ಇದು ಎರಡನೇ ಮದುವೆ.
ಫೆ.19ರಂದು ವಿವಾಹವಾಗಿದ್ದ ಫರ್ಹಾನ್- ಶಿಬಾನಿ, ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಪಾಪರಾಜಿಗಳಿಗೆ ಸಿಹಿಹಂಚಿ, ಫೋಟೋಗೆ ಭರ್ಜರಿ ಪೋಸ್ ನೀಡಿದ ಈ ಜೋಡಿಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಫರ್ಹಾನ್ ಹಾಗೂ ಶಿಬಾನಿ ವಿಶೇಷ ರೀತಿಯಲ್ಲಿ ವಿವಾಹವಾಗಿದ್ದರು. ಪರಸ್ಪರ ಬರೆದುಕೊಂಡ ಪ್ರತಿಜ್ಞೆಗಳನ್ನು ಓದಿಕೊಂಡು ಈರ್ವರೂ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು.
Published On - 8:13 am, Tue, 22 February 22