Date Palm: ದೂರದ ಮರಳುಗಾಡಿನಲ್ಲಿ ಅಲ್ಲ; ಇಲ್ಲೇ ಚಿಕ್ಕಬಳ್ಳಾಪುರದಲ್ಲಿ ಖರ್ಜೂರ ಬೆಳೆಯುತ್ತಾರೆ ನೋಡಿ
ಗೊಂಚಲು ಗೊಂಚಲು ಹಳದಿ ಕಲರ್ ಖರ್ಜೂರ ಒಂದೆಡೆಯಾದ್ರೆ… ಮತ್ತೊಂದೆಡೆ ಬೂದು ಬಣ್ಣದ, ಪಿಂಕ್ ಕಲರ್ ಗಳ ತರೇವಾರಿ ಖರ್ಜೂರದ ಗೊನೆಗಳು. ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ಪ್ರಗತಿಪರ ರೈತ ಲಕ್ಷ್ಮಿನಾರಾಯಣರ ಖರ್ಜೂರ ತೋಟದಲ್ಲಿ.