ಚಾಣಕ್ಯ ನೀತಿ: ಇಂತಹ ಜನರ ಜೊತೆ ವಾದ ಮಾಡಿದರೆ ಶಕ್ತಿಯೂ ವ್ಯರ್ಥ, ಜೊತೆಗೆ ಪಶ್ಚಾತ್ತಾಪ ಪಡಬೇಕಾದೀತು! ಯಾರವರು?

ಇಂತಹ ಜನರ ಜೊತೆ ವಾದ ಮಾಡುವುದರಿಂದ ಶಕ್ತಿ ವ್ಯರ್ಥ ಜೊತೆಗೆ ಪಶ್ಚಾತ್ತಾಪ ಪಡಬೇಕಾದೀತು! ಯಾರವರು ಅಂದರೆ ಆಚಾರ್ಯ ಚಾಣಕ್ಯ ಅಂತಹ ಕೆಲವರನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಜನರೊಂದಿಗೆ ಎಂದಿಗೂ ವಾದ ಮಾಡಬೇಡಿ. ನಿಮ್ಮ ಸಮಯ ವ್ಯರ್ಥವಾಗುತ್ತದೆ. ಇದಲ್ಲದೆ, ಸಂಬಂಧಗಳು ಹದಗೆಡುತ್ತವೆ. ಈ 4 ರೀತಿಯ ಜನರೊಂದಿಗೆ ಎಂದಿಗೂ ವಾದ ಮಾಡಬೇಡಿ ಎಂದು ಚಾಣಕ್ಯ ಹೇಳಿದರು.

TV9 Web
| Updated By: ಸಾಧು ಶ್ರೀನಾಥ್​

Updated on: Jul 08, 2022 | 6:06 AM

ಕುಟುಂಬ ಸದಸ್ಯರು ಮತ್ತು ಸಂಬಂಧಿಕರು.. (Relatives): 
ನಿಮ್ಮ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಜೀವನದಲ್ಲಿ ನಿಮಗಾಗಿ ಬಹಳಷ್ಟು ಮಾಡುತ್ತಾರೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಆದ್ದರಿಂದ ಅವರೊಂದಿಗೆ ವಾದ ಮಾಡಬೇಡಿ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಬಂಧವು ಹದಗೆಡುತ್ತದೆ. ಪಶ್ಚಾತ್ತಾಪ ಪಡುವುದನ್ನು ಬಿಟ್ಟು ನಿಮಗೆ ಬೇರೆ ಆಯ್ಕೆ ಇರುವುದಿಲ್ಲ.

ಕುಟುಂಬ ಸದಸ್ಯರು ಮತ್ತು ಸಂಬಂಧಿಕರು.. (Relatives): ನಿಮ್ಮ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಜೀವನದಲ್ಲಿ ನಿಮಗಾಗಿ ಬಹಳಷ್ಟು ಮಾಡುತ್ತಾರೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಆದ್ದರಿಂದ ಅವರೊಂದಿಗೆ ವಾದ ಮಾಡಬೇಡಿ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಬಂಧವು ಹದಗೆಡುತ್ತದೆ. ಪಶ್ಚಾತ್ತಾಪ ಪಡುವುದನ್ನು ಬಿಟ್ಟು ನಿಮಗೆ ಬೇರೆ ಆಯ್ಕೆ ಇರುವುದಿಲ್ಲ.

1 / 4
ಗುರುವಿಗೆ ಇದೆ ವಿಶೇಷ ಸ್ಥಾನ.. (Teacher):
ನಿಮ್ಮ ಜೀವನದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಗುರು ನಿಮ್ಮನ್ನು ಕತ್ತಲೆಯಿಂದ ಹೊರತಂದು ಬೆಳಕಿನ ದಾರಿಯನ್ನು ತೋರಿಸುತ್ತಾನೆ. ಅಂತಹ ಶಿಕ್ಷಕರೊಂದಿಗೆ ಯಾವುದೇ ವ್ಯಾಜ್ಯ, ವಾದಗಳಿಗೆ ಆಸ್ಪದ ಕೊಡದಿರುವುದು ಉತ್ತಮ. ಅವರೊಂದಿಗೆ ಜಗಳವಾಡಿದರೆ.. ಅವರ ಗೌರವವನ್ನು ಕಡಿಮೆ ಮಾಡಿದಂತೆ.. ನಿಮ್ಮ ಕೋಪ ಕಡಿಮೆಯಾದಾಗ ನಿಮಗೆ ಪಶ್ಚಾತ್ತಾಪ ಪಡುವುದಲ್ಲದೆ ಬೇರೇನೂ ಇರುವುದಿಲ್ಲ.

ಗುರುವಿಗೆ ಇದೆ ವಿಶೇಷ ಸ್ಥಾನ.. (Teacher): ನಿಮ್ಮ ಜೀವನದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಗುರು ನಿಮ್ಮನ್ನು ಕತ್ತಲೆಯಿಂದ ಹೊರತಂದು ಬೆಳಕಿನ ದಾರಿಯನ್ನು ತೋರಿಸುತ್ತಾನೆ. ಅಂತಹ ಶಿಕ್ಷಕರೊಂದಿಗೆ ಯಾವುದೇ ವ್ಯಾಜ್ಯ, ವಾದಗಳಿಗೆ ಆಸ್ಪದ ಕೊಡದಿರುವುದು ಉತ್ತಮ. ಅವರೊಂದಿಗೆ ಜಗಳವಾಡಿದರೆ.. ಅವರ ಗೌರವವನ್ನು ಕಡಿಮೆ ಮಾಡಿದಂತೆ.. ನಿಮ್ಮ ಕೋಪ ಕಡಿಮೆಯಾದಾಗ ನಿಮಗೆ ಪಶ್ಚಾತ್ತಾಪ ಪಡುವುದಲ್ಲದೆ ಬೇರೇನೂ ಇರುವುದಿಲ್ಲ.

2 / 4
ಸ್ನೇಹಿತರು ನಿಜವಾದವರು..(Friends): 
ನಿಜವಾದ ಸ್ನೇಹಿತರು ನಿಮ್ಮ ಸಂತೋಷ ಮತ್ತು ದುಃಖಗಳ ಸಹಚರರು. ಅದೇ ಸಮಯದಲ್ಲಿ.. ಸ್ನೇಹಿತರಿಗೆ ನಿಮ್ಮ ಬಗ್ಗೆ ಅನೇಕ ರಹಸ್ಯಗಳು ತಿಳಿದಿವೆ. ಅಂತಹ ಸ್ನೇಹಿತರೊಂದಿಗೆ ಜಗಳವಾಡುವುದು ನಿಮ್ಮ ಸ್ನೇಹವನ್ನು ಕೆಡಿಸುತ್ತದೆ. ನಿಮ್ಮ ರಹಸ್ಯಗಳನ್ನು ಸಹ ಬಹಿರಂಗಪಡಿಸುತ್ತದೆ. ಆದ್ದರಿಂದ ಅವರೊಂದಿಗೆ ವಾದ ಮಾಡಬೇಡಿ.

ಸ್ನೇಹಿತರು ನಿಜವಾದವರು..(Friends): ನಿಜವಾದ ಸ್ನೇಹಿತರು ನಿಮ್ಮ ಸಂತೋಷ ಮತ್ತು ದುಃಖಗಳ ಸಹಚರರು. ಅದೇ ಸಮಯದಲ್ಲಿ.. ಸ್ನೇಹಿತರಿಗೆ ನಿಮ್ಮ ಬಗ್ಗೆ ಅನೇಕ ರಹಸ್ಯಗಳು ತಿಳಿದಿವೆ. ಅಂತಹ ಸ್ನೇಹಿತರೊಂದಿಗೆ ಜಗಳವಾಡುವುದು ನಿಮ್ಮ ಸ್ನೇಹವನ್ನು ಕೆಡಿಸುತ್ತದೆ. ನಿಮ್ಮ ರಹಸ್ಯಗಳನ್ನು ಸಹ ಬಹಿರಂಗಪಡಿಸುತ್ತದೆ. ಆದ್ದರಿಂದ ಅವರೊಂದಿಗೆ ವಾದ ಮಾಡಬೇಡಿ.

3 / 4
ಮೂರ್ಖನ ಜೊತೆ ವಾದ ಮಾಡಿದರೆ.. (Stupid): ಆಚಾರ್ಯರ ಪ್ರಕಾರ ಮೂರ್ಖನ ಜೊತೆ ವಾದ ಮಾಡಿದರೆ ಎಮ್ಮೆಯ ಮುಂದೆ ವೀಣೆ ನುಡಿಸಿದಂತೆ. ಮೂರ್ಖನು ನಿಮ್ಮ ಮಾತುಗಳನ್ನು ಅರ್ಥ ಮಾಡಿಕೊಳ್ಳಲಾರನು. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತೀರಿ. ಇದರ ನಂತರ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ.

ಮೂರ್ಖನ ಜೊತೆ ವಾದ ಮಾಡಿದರೆ.. (Stupid): ಆಚಾರ್ಯರ ಪ್ರಕಾರ ಮೂರ್ಖನ ಜೊತೆ ವಾದ ಮಾಡಿದರೆ ಎಮ್ಮೆಯ ಮುಂದೆ ವೀಣೆ ನುಡಿಸಿದಂತೆ. ಮೂರ್ಖನು ನಿಮ್ಮ ಮಾತುಗಳನ್ನು ಅರ್ಥ ಮಾಡಿಕೊಳ್ಳಲಾರನು. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತೀರಿ. ಇದರ ನಂತರ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ.

4 / 4
Follow us