- Kannada News Photo gallery Fifa World Cup 2022: Teams qualified for the quarter finals of Qatar Kannada News zp
Fifa World Cup 2022: ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ಗೆ 8 ತಂಡಗಳ ಎಂಟ್ರಿ
Fifa World Cup 2022: ಫುಟ್ಬಾಲ್ ಅಂಗಳದ ಬಲಿಷ್ಠ ಪಡೆಗಳೆಂದೇ ಗುರುತಿಸಿಕೊಂಡಿರುವ ಸ್ಪ್ಯಾನಿಷ್ ಪಡೆಯು ಮೊರಕ್ಕೊ ವಿರುದ್ಧ ಪೆನಾಲ್ಟಿ ಶೂಟೌಟ್ 0-3 ಅಂತರದಿಂದ ಸೋಲನುಭವಿಸಿತು.
Updated on:Dec 07, 2022 | 12:25 PM

ಖತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ಮುಗಿದಿವೆ. 16 ತಂಡಗಳ ನಡುವಣ ಸೆಣಸಾಟದಲ್ಲಿ ಗೆದ್ದಿರುವ 8 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದೆ.

ಪ್ರೀ ಕ್ವಾರ್ಟರ್ ಫೈನಲ್ನಲ್ಲಿನ ಅಚ್ಚರಿಯ ಫಲಿತಾಂಶವೆಂದರೆ ಸ್ಪೇನ್ ಹೊರಬಿದ್ದಿರುವುದು. ಫುಟ್ಬಾಲ್ ಅಂಗಳದ ಬಲಿಷ್ಠ ಪಡೆಗಳೆಂದೇ ಗುರುತಿಸಿಕೊಂಡಿರುವ ಸ್ಪ್ಯಾನಿಷ್ ಪಡೆಯು ಮೊರಕ್ಕೊ ವಿರುದ್ಧ ಪೆನಾಲ್ಟಿ ಶೂಟೌಟ್ 0-3 ಅಂತರದಿಂದ ಸೋಲನುಭವಿಸಿತು. ಇದರೊಂದಿಗೆ ಸ್ಪೇನ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿದೆ. ಹಾಗೆಯೇ ವಿಶ್ವಕಪ್ ಇತಿಹಾಸದಲ್ಲೇ ಚೊಚ್ಚಲ ಬಾರಿಗೆ ಮೊರಕ್ಕೊ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.

ಶುಕ್ರವಾರದಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ಶುರುವಾಗಲಿದ್ದು, ಈ ಸುತ್ತಿನಲ್ಲಿ ಒಟ್ಟು 8 ತಂಡಗಳು ಸೆಣಸಲಿದೆ. ಇದರಲ್ಲಿ ಗೆಲ್ಲುವ 4 ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಇತ್ತ ಬಲಿಷ್ಠ ಪಡೆಗಳೇ ನಾಕೌಟ್ ಹಂತಕ್ಕೇರಿರುವ ಕಾರಣ ಕ್ವಾರ್ಟರ್ಫೈನಲ್ ಪಂದ್ಯಗಳು ಮತ್ತಷ್ಟು ರಂಗೇರಲಿದೆ. ಹಾಗಿದ್ರೆ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿರುವ ತಂಡಗಳಾವುವು ಎಂದು ನೋಡೋಣ...

ನೆದರ್ಲ್ಯಾಂಡ್ಸ್.

ಅರ್ಜೆಂಟೀನಾ.

ಫ್ರಾನ್ಸ್.

ಇಂಗ್ಲೆಂಡ್.

ಕ್ರೊಯೇಷಿಯಾ.

ಬ್ರೆಝಿಲ್.

ಮೊರಕ್ಕೊ.

ಪೋರ್ಚುಗಲ್.

ಕ್ವಾರ್ಟರ್ ಫೈನಲ್ನಲ್ಲಿ ಬ್ರೆಝಿಲ್ ಕ್ರೊಯೇಷಿಯಾ ತಂಡವನ್ನು ಎದುರಿಸಲಿದೆ. ಅದೇ ರೀತಿ ಅರ್ಜೆಂಟೀನಾ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ. ಹಾಗೆಯೇ ಪೋರ್ಚುಗಲ್ ತಂಡವು ಮೊರಕ್ಕೊ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯಲ್ಲಿ ಇಂಗ್ಲೆಂಡ್ ಎದುರಾಳಿ ಫ್ರಾನ್ಸ್. ಈ ಸುತ್ತಿನಲ್ಲಿ ಗೆಲ್ಲುವ 4 ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
Published On - 12:22 pm, Wed, 7 December 22
























