Updated on:Mar 26, 2023 | 5:19 PM
ನಟನೆ, ಮಾಡೆಲಿಂಗ್ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಹಲವು ವಿಭಾಗಗಳಲ್ಲಿ ತರಬೇತಿ ನೀಡುತ್ತಿರುವ ‘ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್’ ಸಂಸ್ಥೆ 10 ವರ್ಷಗಳನ್ನು ಪೂರೈಸಿದೆ. ಈ ಖುಷಿಯಲ್ಲಿ ಕನ್ನಡ ಚಿತ್ರರಂಗದ ಹಲವು ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ದಶಕದ ಸಂಭ್ರಮ’ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಮಮತಾ ದೇವರಾಜ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಝಗಮಗಿಸುವ ವೇದಿಕೆಯಲ್ಲಿ ‘ಫ್ಲೆಮಿಂಗೋ’ ಸಂಸ್ಥೆಯ ವಿದ್ಯಾರ್ಥಿಗಳು ಫ್ಯಾಷನ್ ಶೋ ಮಾಡಿದರು. ಬಳಿಕ ಪ್ರಶಸ್ತಿ ವಿತರಿಸಲಾಯಿತು. ಸ್ಯಾಂಡಲ್ವುಡ್ನ ಅನೇಕ ಹಿರಿಯ ಕಲಾವಿದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಪ್ರಶಸ್ತಿ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.
ವಿಜಯ್ ಕಾಶಿ, ವೈಜಯಂತಿ ಕಾಶಿ, ಸಿಹಿಕಹಿ ಚಂದ್ರು ದಂಪತಿ, ವೈಜನಾಥ್ ಬಿರಾದಾರ್, ಕಾಮಿನಿಧರನ್, ಶಿವಧ್ವಜ್, ಭವ್ಯಶ್ರೀ ರೈ ಸೇರಿದಂತೆ ಅನೇಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಕರ್ಷಕ ಟ್ರೋಫಿ ಜೊತೆ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ನೀಡಿ ಗೌರವಿಸಲಾಯಿತು.
ಸಿನಿಮಾ ಪತ್ರಿಕೋದ್ಯಮಕ್ಕೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಾದ ಲಕ್ಷ್ಮೀನಾರಾಯಣ್ ಬೀರಗಾನಹಳ್ಳಿ, ಶ್ರೀಧರ್ ಶಿವಮೊಗ್ಗ, ಛಾಯಾಗ್ರಾಹಕರಾದ ಮನೋಹರ್, ಮೋಕ್ಷೇಂದ್ರ ಅವರಿಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
‘ಫ್ಲೆಮಿಂಗೋ’ ಸಂಸ್ಥೆಯ ಮುಖ್ಯಸ್ಥ ಧವನ್ ಸೋಹಾ, ಪ್ರಿನ್ಸಿಪಾಲ್ ಆಗಿರುವ ಹಿರಿಯ ನಟಿ ಭವ್ಯ, ಪದ್ಮಾ ವಾಸಂತಿ ಮುಂತಾದವರು ಈ ಕಾರ್ಯಕ್ರಮಕ್ಕೆ ಮರುಗು ತಂದರು.
Published On - 5:19 pm, Sun, 26 March 23