ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಈ ಟಿಪ್ಸ್​ ಅನುಸರಿಸಿ

ವ್ಯಾಲೆಂಟೈನ್ಸ್​ ಡೇ ಹತ್ತಿರ ಬರುತ್ತಿದೆ. ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಅವರ ಬಗ್ಗೆ ತಿಳಿದುಕೊಳ್ಳಿ. ಮುಕ್ತವಾಗಿ ಮಾತನಾಡಿ ವಿಚಾರ ಹಂಚಿಕೊಳ್ಳಿ. ಅದಕ್ಕೆ ಇಲ್ಲಿದೆ ಸಿಂಪಲ್​ ಟಿಪ್ಸ್​

TV9 Web
| Updated By: Pavitra Bhat Jigalemane

Updated on: Feb 09, 2022 | 5:08 PM

ಆದ್ಯತೆಯಲ್ಲಿ ಸಂಗಾತಿಯಿರಲಿ:
ನಿಮ್ಮ ಬದುಕಿನಲ್ಲಿ ಸಂಗಾತಿ ಮೊದಲ ಆಯ್ಕೆಯಾಗಿರಲಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಸಂಗಾತಿಯ ಸಲಹೆ ಪಡೆಯಿರಿ. ನಿಮ್ಮ ಬ್ಯಸಿ ಶೆಡ್ಯೂಲ್​ನಲ್ಲಿಯೂ ಒಂದಷ್ಟು ಸಮಯ ಸಂಗಾತಿಯೊಂದಿಗೆ ಕಳೆಯಿರಿ.

ಆದ್ಯತೆಯಲ್ಲಿ ಸಂಗಾತಿಯಿರಲಿ: ನಿಮ್ಮ ಬದುಕಿನಲ್ಲಿ ಸಂಗಾತಿ ಮೊದಲ ಆಯ್ಕೆಯಾಗಿರಲಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಸಂಗಾತಿಯ ಸಲಹೆ ಪಡೆಯಿರಿ. ನಿಮ್ಮ ಬ್ಯಸಿ ಶೆಡ್ಯೂಲ್​ನಲ್ಲಿಯೂ ಒಂದಷ್ಟು ಸಮಯ ಸಂಗಾತಿಯೊಂದಿಗೆ ಕಳೆಯಿರಿ.

1 / 8
ನಿಮ್ಮ ನ್ಯೂನತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ: 
ಸಂಗಾತಿಯೆಂದರೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಿರಬೇಕು. ನಿಮ್ಮ ನ್ಯೂನ್ಯತೆಗಳನ್ನು ಹಂಚಿಕೊಳ್ಳಿ. ಏಕೆಂದರೆ ಮುಂದೊಂದು ದಿನ ಅವರಿಗೇ ಅರಿವಿಗೆ ಬಂದರೆ ಗೊತ್ತಿದ್ದೂ ತಿಳಿಸಲಿಲ್ಲ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

ನಿಮ್ಮ ನ್ಯೂನತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ: ಸಂಗಾತಿಯೆಂದರೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಿರಬೇಕು. ನಿಮ್ಮ ನ್ಯೂನ್ಯತೆಗಳನ್ನು ಹಂಚಿಕೊಳ್ಳಿ. ಏಕೆಂದರೆ ಮುಂದೊಂದು ದಿನ ಅವರಿಗೇ ಅರಿವಿಗೆ ಬಂದರೆ ಗೊತ್ತಿದ್ದೂ ತಿಳಿಸಲಿಲ್ಲ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

2 / 8
ಸಮಸ್ಯೆಗಳನ್ನು ಹಂಚಿಕೊಳ್ಳಿ:
ಕೆಲವೊಮ್ಮೆ ಸಂಗಾತಿಯ ಸ್ನೇಹಿತರಿಂದ ಅಥವಾ ಹೊರಗಿನಿನವರಿಂದ ಕಿರಿಕಿರಿ ಉಂಟಾದರೆ ಹೇಳಿಕೊಳ್ಳಿ. ಕಾಡುವ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಆಗ ಸಂವಹನವೂ ಉತ್ತಮವಾಗುತ್ತದೆ, ನಂಬಿಕೆಯೂ ಬೆಳೆಯುತ್ತದೆ.

ಸಮಸ್ಯೆಗಳನ್ನು ಹಂಚಿಕೊಳ್ಳಿ: ಕೆಲವೊಮ್ಮೆ ಸಂಗಾತಿಯ ಸ್ನೇಹಿತರಿಂದ ಅಥವಾ ಹೊರಗಿನಿನವರಿಂದ ಕಿರಿಕಿರಿ ಉಂಟಾದರೆ ಹೇಳಿಕೊಳ್ಳಿ. ಕಾಡುವ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಆಗ ಸಂವಹನವೂ ಉತ್ತಮವಾಗುತ್ತದೆ, ನಂಬಿಕೆಯೂ ಬೆಳೆಯುತ್ತದೆ.

3 / 8
ಆಸೆಗಳನ್ನು ಹೇಳಿಕೊಳ್ಳಿ: ನಿಮ್ಮ ಹಾಗೂ ಸಂಗಾತಿಯ ನಡುವೆ ಮುಜುಗರ ಬೇಡ. ಯಾವುದೇ ರೀತಿಯ ಆಸೆ, ಕನಸುಗಳನ್ನು ಹೇಳಿಕೊಳ್ಳಿ. ಶುದ್ಧ ಹಾಗೂ ನಿಸ್ವಾರ್ಥ ಪ್ರೀತಿಯಲ್ಲಿ ಬೇರೆ ಎನ್ನುವ ಮಾತು ಬರುವುದಿಲ್ಲ.

ಆಸೆಗಳನ್ನು ಹೇಳಿಕೊಳ್ಳಿ: ನಿಮ್ಮ ಹಾಗೂ ಸಂಗಾತಿಯ ನಡುವೆ ಮುಜುಗರ ಬೇಡ. ಯಾವುದೇ ರೀತಿಯ ಆಸೆ, ಕನಸುಗಳನ್ನು ಹೇಳಿಕೊಳ್ಳಿ. ಶುದ್ಧ ಹಾಗೂ ನಿಸ್ವಾರ್ಥ ಪ್ರೀತಿಯಲ್ಲಿ ಬೇರೆ ಎನ್ನುವ ಮಾತು ಬರುವುದಿಲ್ಲ.

4 / 8
ಸಮಸ್ಯೆಗಳನ್ನು ಜತೆಯಾಗಿ ಎದುರಿಸಿ:
ಬಂಧ ಗಟ್ಟಿಯಾಗಿದ್ದರೆ ಯಾವ ಸಮಸ್ಯೆಯೂ ಕಷ್ಟವೆನಿಸುವುದಿಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ, ನಿಮ್ಮ ಸಂಗಾತಿಯ ಕಷ್ಟಕ್ಕೆ ನೀವು ಕೈ ಜೋಡಿಸಿದರೆ ಸಮಸ್ಯೆಯನ್ನು ಪರಿಹರಿಸಬಹುದು.

ಸಮಸ್ಯೆಗಳನ್ನು ಜತೆಯಾಗಿ ಎದುರಿಸಿ: ಬಂಧ ಗಟ್ಟಿಯಾಗಿದ್ದರೆ ಯಾವ ಸಮಸ್ಯೆಯೂ ಕಷ್ಟವೆನಿಸುವುದಿಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ, ನಿಮ್ಮ ಸಂಗಾತಿಯ ಕಷ್ಟಕ್ಕೆ ನೀವು ಕೈ ಜೋಡಿಸಿದರೆ ಸಮಸ್ಯೆಯನ್ನು ಪರಿಹರಿಸಬಹುದು.

5 / 8
ನೀವು ಇರುವ ರೀತಿಯನ್ನು ಅರ್ಥಮಾಡಿಸಿ: ಎರಡು ಬದುಕು ಒಂದಾಗಬೇಕಾದರೆ ಒಂದಷ್ಟು ಮಾರ್ಪಾಡುಗಳು ಅಗತ್ಯ. ಹೀಗಾಗಿ ನೀವು ಇರುವ ರೀತಿಯನ್ನು ತಿಳಿಸಿ, ನಂತರ ಅವರೇ ಹೊಂದಿಕೊಳ್ಳುವುದಾದರೆ ಅಥವಾ ಲೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದರೆ ಗೊತ್ತಾಗುತ್ತದೆ.

6 / 8
ನಿಮ್ಮ ಸಾಮರ್ಥ್ಯದ ಬಗ್ಗೆ ತಿಳಿಸಿ: ಜೀವನದಲ್ಲಿ ಕಷ್ಟ ಸಾಮಾನ್ಯ. ಹೀಗಾಗಿ ಅದನ್ನು ಎದುರಿಸುವ ಸಾಮರ್ಥ್ಯ ಇದೆ ಎಂದು ತಿಳಿಸಿ ಧೈರ್ಯ ಹೇಳಿ. ಆಗ ಅವರಿಗೂ ಆತಂಕ ದೂರವಾಗುತ್ತದೆ.

ನಿಮ್ಮ ಸಾಮರ್ಥ್ಯದ ಬಗ್ಗೆ ತಿಳಿಸಿ: ಜೀವನದಲ್ಲಿ ಕಷ್ಟ ಸಾಮಾನ್ಯ. ಹೀಗಾಗಿ ಅದನ್ನು ಎದುರಿಸುವ ಸಾಮರ್ಥ್ಯ ಇದೆ ಎಂದು ತಿಳಿಸಿ ಧೈರ್ಯ ಹೇಳಿ. ಆಗ ಅವರಿಗೂ ಆತಂಕ ದೂರವಾಗುತ್ತದೆ.

7 / 8
ಸಂಗಾತಿಯಾಗುವವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ: ಕೇವಲ ಒಳ್ಳೆಯ ಗುಣಗಳನ್ನು ತಿಳಿದುಕೊಂಡು ಬದುಕು ನಡೆಸಲು ಸಾಧ್ಯವಿಲ್ಲ. ಹೀಗಾಗಿ ನೀವು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಸಂಪೂರ್ಣ ಜೀವನದ ಬಗ್ಗೆ ತಿಳಿದುಕೊಳ್ಳಿ

ಸಂಗಾತಿಯಾಗುವವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ: ಕೇವಲ ಒಳ್ಳೆಯ ಗುಣಗಳನ್ನು ತಿಳಿದುಕೊಂಡು ಬದುಕು ನಡೆಸಲು ಸಾಧ್ಯವಿಲ್ಲ. ಹೀಗಾಗಿ ನೀವು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಸಂಪೂರ್ಣ ಜೀವನದ ಬಗ್ಗೆ ತಿಳಿದುಕೊಳ್ಳಿ

8 / 8
Follow us