Misunderstandings: ತಪ್ಪುತಿಳುವಳಿಕೆಯಾದಾಗ ಅರ್ಥಮಾಡಿಸಲು ಹೀಗೆ ಮಾಡಿ
ಕೆಲವೊಮ್ಮೆ ಆಡಿದ ಮಾತುಗಳು, ನಡೆದುಕೊಂಡ ರೀತಿ ಸಮಯಕ್ಕೆ ಅನುಗುಣವಾಗಿದ್ದರೂ ತಪ್ಪು ತಿಳಿವಳಿಕೆಗೆ ಕಾರಣವಾಗುತ್ತದೆ. ಆಗ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಇಲ್ಲವಾದರೆ ಒತ್ತಡ, ಖಿನ್ನತೆಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗೆ ಮಾಡಿದರೆ ತಪ್ಪು ತಿಳುವಳಿಕೆಯನ್ನು ಸರಿಪಡಿಸಬಹುದು.
Updated on: Feb 02, 2022 | 12:20 PM

ತಪ್ಪುತಿಳುವಳಿಕೆ ಸಂಬಂಧಗಳಲ್ಲಿ ಬಿರುಕನ್ನು ಮೂಡಿಸುತ್ತದೆ. ಅದನ್ನು ಸರಿಪಡಿಸಿಕೊಳ್ಳದಿದ್ದರೆ ಒತ್ತಡ, ಖಿನ್ನತೆಗೆ ಕಾರಣವಾಗುತ್ತದೆ. ಹೀಗಾಗಿ ನಿಮಗೆ ತಪ್ಪು ತಿಳುವಳಿಕೆಯಾದಾಗ ಈ ರೀತಿ ಪ್ರತಿಕ್ರಿಯಿಸಿ.

ನೀವು ಮಾತನಾಡಿದ ಪದಗಳು ಎದುರಿನವರಿಗೆ ತಪ್ಪು ತಿಳುವಳಿಕೆಯನ್ನು ಉಂಟುಮಾಡಿದರೆ ಅಂತಹ ಸಂದರ್ಭಗಳಲ್ಲಿ ನಾನೇ ಹೇಳಿದ್ದು ಸರಿ ಎಂದು ವಾದಿಸುವ ಬದಲು ನನ್ನ ಯೋಚನೆಗಳನ್ನು ಇನ್ನೊಮ್ಮ ಪರಾಮರ್ಶೆ ಮಾಡುತ್ತೇನೆ ಎಂದು ಹೇಳಿ. ಆಗ ಎದುರಿಗಿದ್ದವರು ಕೊಂಚ ಕನ್ವಿನ್ಸ್ ಆಗುತ್ತಾರೆ.

ನೀವು ಆಡಿದ ಮಾತಗಳು ತಪ್ಪು ತಿಳುವಳಿಕೆಗೆ ಕಾರಣವಾಗಿದೆ ಎನಿಸಿದರೆ ನೀವು ಏನನ್ನು ಹೇಳಲು ಬಯಸಿದ್ದೀರೋ ಅದನ್ನು ನಿಧಾನವಾಗಿ ವಿವರಿಸಿ ಹೇಳಿ.

ಕೆಲವೊಮ್ಮೆ ತಪ್ಪುತಿಳಿದುಕೊಂಡು ಜನರು ಮಾತನಾಡುವುದನ್ನು ಕೇಳಿಸಿಕೊಳ್ಳದೆ ಎದ್ದು ಹೊರಡುತ್ತಾರೆ ಅಂತಹ ಸಂದರ್ಭಗಳಲ್ಲಿ ಅವರನ್ನು ತಡೆದು, ತಪ್ಪು ತಿಳುವಳಿಕೆಗೆ ಕಾರಣವಾದ ವಿಷಯಗಳನ್ನು ಬಗೆಹರಿಸಿಕೊಳ್ಳೋಣ ಎಂದು ಕುಳಿತು ಮಾತನಾಡಿ.

ಸಂವಹನದ ವೇಳೆ ವಿಷಯಗಳು ಅರ್ಥವಾಗದಿದ್ದರೆ, ಇನ್ನೊಮ್ಮೆ ವಿವರಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿ.

ತಪ್ಪು ತಿಳುವಳಿಕೆಯನ್ನು ನಿವಾರಿಸುವ ನಿಮ್ಮ ಪ್ರಯತ್ನಗಳು ವ್ಯರ್ಥವಾಗುತ್ತಿದ್ದರೆ, ಏನನ್ನೂ ಮಾಡಬೇಡಿ ಅಥವಾ ಹೇಳಬೇಡಿ. ಕೆಲವರು ನಮ್ಮನ್ನು ಅರ್ಥಮಾಡಿಕೊಳ್ಳಲು ಬಯಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮೌನವಾಗಿದ್ದುಬಿಡಿ.
























