- Kannada News Photo gallery French Open 2023 Novak Djokovic beats Casper Ruud to win record 23rd Grand Slam title
French Open 2023: ದಾಖಲೆಯ 23ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್..!
French Open 2023: ಫ್ರೆಂಚ್ ಓಪನ್ 2023 ರ ಫೈನಲ್‌ನಲ್ಲಿ ನಾರ್ವೆಯ ಕಾಸ್ಪರ್ ರೂಡ್ ಅವರನ್ನು ಸೋಲಿಸುವ ಮೂಲಕ ಜೊಕೊವಿಕ್ ದಾಖಲೆಯ 23 ನೇ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on:Jun 11, 2023 | 10:53 PM

ಜೂನ್ 11 ರಂದು ಭಾನುವಾರ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ನಡೆದ ಫ್ರೆಂಚ್ ಓಪನ್ 2023 ರ ಫೈನಲ್‌ನಲ್ಲಿ ನಾರ್ವೆಯ ಕಾಸ್ಪರ್ ರೂಡ್ ಅವರನ್ನು ಸೋಲಿಸುವ ಮೂಲಕ ಜೊಕೊವಿಕ್ ದಾಖಲೆಯ 23 ನೇ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಕ್ಯಾಸ್ಪರ್ ರೂಡ್ ಅವರನ್ನು 7-6, 6-3, 7-5 ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿದ ಜೊಕೊವಿಕ್, ತಮ್ಮ ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ದಾಖಲೆಯ 23ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ನೊವಾಕ್ ಜೊಕೊವಿಕ್ ಗ್ರ್ಯಾಂಡ್ ಸ್ಲಾಮ್‌ಗಳ ಸಂಖ್ಯೆಯಲ್ಲಿ ದಂತಕಥೆ ರೋಜರ್ ಫೆಡರರ್, ಸ್ಪ್ಯಾನಿಷ್ ಸ್ಟಾರ್ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ್ದಾರೆ. ಟೆನಿಸ್ ಇತಿಹಾಸದಲ್ಲಿ ನೊವಾಕ್ ಜೊಕೊವಿಕ್ ಈಗ ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದ ದಾಖಲೆ ಬರೆದಿದ್ದಾರೆ.

ಜೊಕೊವಿಕ್ ಮೂರನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದು, ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲಾಮ್ (ಆಸ್ಟ್ರೇಲಿಯಾ ಓಪನ್, ವಿಂಬಲ್ಡನ್, ಫ್ರಂಚ್ ಓಪನ್, ಯುಎಸ್ ಓಪನ್) ಪ್ರಶಸ್ತಿಗಳನ್ನು ಕನಿಷ್ಠ 3 ಬಾರಿ ಗೆದ್ದ ಮೊದಲ ಪುರುಷ ಟೆನಿಸ್ ಸ್ಟಾರ್ ಎಂಬ ದಾಖೆಯನ್ನು ಜೊಕೊವಿಕ್ ಬರೆದಿದ್ದಾರೆ.

ಜೊಕೊವಿಕ್ ಅವರ ಐತಿಹಾಸಿಕ ವಿಜಯದ ನಂತರ ನಡಾಲ್ ಟ್ವೀಟ್ ಮಾಡಿದ್ದು, ಕೆಲವು ವರ್ಷಗಳ ಹಿಂದೆ 23 ರ ಸಂಖ್ಯೆ ಅಸಾಧ್ಯವಾಗಿತ್ತು, ಈಗ ಜೊಕೊವಿಕ್ ಅದನ್ನು ಸಾಧ್ಯವಾಗಿಸಿದ್ದಾರೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಸತತ ಎರಡನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್ಗೆ ಎಂಟ್ರಿಕೊಟ್ಟಿದ್ದ ನಾರ್ವೆಯ ಕಾಸ್ಪರ್ ರೂಡ್ ಕಳೆದ ಬಾರಿ ರಾಫೆಲ್ ನಡಾಲ್ ವಿರುದ್ಧ ಸೋತು ರನ್ನರ್ ಅಪ್ ಆಗಿದ್ದರು. ಇದೀಗ ಎರಡನೇ ಬಾರಿಯೂ ಕಾಸ್ಪರ್ ರೂಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡಬೇಕಿದೆ.
Published On - 10:29 pm, Sun, 11 June 23




