G-20 ಪ್ರತಿನಿಧಿಗಳಿಂದ ವಿಶ್ವ ವಿಖ್ಯಾತ ಹಂಪಿ ವೀಕ್ಷಣೆ, ಸ್ಮಾರಕಗಳ ಸೊಬಗಿಗೆ ಮನಸೋತ ಗಣ್ಯರು
ಹೊಸಪೇಟೆ ತಾಲೂಕಿನ ಖಾಸಗಿ ಹೊಟೇಲ್ ನಲ್ಲಿ ನಡೆಯುತ್ತಿರುವ ಶೆರ್ಪಾ ಸಭೆಯಲ್ಲಿ ಪಾಲ್ಗೊಂಡ ಜಿ-20 ರಾಷ್ಟ್ರಗಳ ಪ್ರತಿನಿಧಿಗಳು ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು. ವಿಶ್ವ ವಿಖ್ಯಾತ ಹಂಪಿಯನ್ನ ವೀಕ್ಷಣೆ ಮಾಡಿ ಐತಿಹಾಸಿಕ ತಾಣದ ಸೊಬಗಿಗೆ ಮನಸೋತಿದ್ದಾರೆ.
Updated on:Jul 14, 2023 | 10:12 PM

ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿರುವ ಜಿ- 20 ಶೃಂಗಸಭೆಯ ಶೆರ್ಪಾ ಸಭೆಯಲ್ಲಿ ಪಾಲ್ಗೊಂಡ ವಿವಿಧ ದೇಶಗಳ ಅತ್ಯುನ್ನತ ಪ್ರತಿನಿಧಿಗಳು ವಿಶ್ವ ವಿಖ್ಯಾತ ಹಂಪಿಯನ್ನ ವೀಕ್ಷಣೆ ಮಾಡಿ ಐತಿಹಾಸಿಕ ತಾಣದ ಸೊಬಗಿಗೆ ಮನಸೋತಿದ್ದಾರೆ.

ಹೊಸಪೇಟೆ ತಾಲೂಕಿನ ಖಾಸಗಿ ಹೊಟೇಲ್ ನಲ್ಲಿ ನಡೆಯುತ್ತಿರುವ ಶೆರ್ಪಾ ಸಭೆಯಲ್ಲಿ ಪಾಲ್ಗೊಂಡ ಜಿ-20 ರಾಷ್ಟ್ರಗಳ ಪ್ರತಿನಿಧಿಗಳಿಗೆ ಇಂದು ಸಂಜೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಲು ಪ್ರವಾಸೋದ್ಯಮ ಇಲಾಖೆ, ಕೇಂದ್ರ ಮತ್ತು ರಾಜ್ಯ ಎಎಸ್‌ಐ ಆಯೋಜಿಸಲಾಗಿತ್ತು.

ಹಂಪಿಯ ಮಹಾನವಮಿ ದಿಬ್ಬ ಹಜಾರರಾಮ ಕಮಲ ಮಹಲ್ ಗಜಶಾಲೆ ಪ್ರವಾಸಿ ಮಾರ್ಗದರ್ಶಿಗಳಿಂದ ಸ್ಮಾರಕಗಳ ಕುರಿತು ಜಿ-20 ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು. ಮಹಾನವಮಿ ದಿಬ್ಬದ ಮೇಲೆ ಹತ್ತಿ ಸುತ್ತಲಿನ ಹಂಪಿ ಪರಿಸರವನ್ನು ಕಣ್ತುಂಬಿಕೊಂಡ ವಿವಿಧ ದೇಶಗಳ ಗಣ್ಯರು ಮಹಾನವವಿ ದಿಬ್ಬದ ಸುತ್ತಲೂ ಕೆತ್ತಿರುವ ಆಕರ್ಷಕ ಉಬ್ಬು ಶಿಲೆಗಳನ್ನು ಕಂಡು ಬೆರಗಾದರು.

ಮಹಾನವಮಿ ದಿಬ್ಬದ ಸಮೀಪದಲ್ಲಿರುವ ಪುಷ್ಕರಣಿಯನ್ನು ಕಂಡು ಆಗಿನ ಕಾಲದ ನೀರು ಸರಬರಾಜು ವ್ಯವಸ್ಥೆಯ ಬಗ್ಗೆ ಮಾಹಿತಿ ತಿಳಿದುಕೊಂಡರು. ನಂತರ ರಾಜ ಸಭಾಂಗಣ, ನೆಲಸ್ತರದ ಕೋಣೆ, ಹಜಾರ ರಾಮಚಂದ್ರ ದೇವಾಲಯ ವೀಕ್ಷಿಸಿದರು. ಕಮಲ ಮಹಲ್, ಗಜಶಾಲೆ, ರಾಣಿ ಅರಮನೆ ಅನುಷ್ಠಾನಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಪ್ರವಾಸೋದ್ಯಮ ಇಲಾಖೆಯಿಂದ ನಿಯೋಜಿಸಿದ ಪ್ರವಾಸಿ ಮಾರ್ಗದರ್ಶಿಗಳು ಮಹಿತಿಯನ್ನು ನೀಡಿದರು.

ಈ ವೇಳೆ ವಿಜಯವಿಠ್ಠಲ ದೇವಸ್ಥಾನದ ವಿಶಾಲ ಮಾರ್ಗದಲ್ಲಿ ನಡೆದು ಬರುತ್ತಿದ್ದ ಅತ್ಯುನ್ನತ ಪ್ರತಿನಿಧಿಗಳಿಗೆ ನಗಾರಿ ಬಾರಿಸುವ ಮೂಲಕ ಸ್ವಾಗತ ಕೋರಲಾಯಿತು. ಕಗ್ಗತ್ತಲ ನಡುವೆ ಸ್ಮಾರಕಗಳಿಗೆ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರಗಳು ಭವ್ಯವಾಗಿ ಸ್ವಾಗತಿಸಿದರು. ವಿಜಯವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಬರುತ್ತಿದ್ದಂತೆ ಕಹಳೆ ಊದಿ ಸ್ವಾಗತಿಸಲಾಯಿತು.

ಸ್ಮಾರಕಗಳ ವೀಕ್ಷಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಗವಹಿಸಿದ ಪ್ರತಿನಿಧಿಗಳಿಗಳಿಗೆ ವಿಜಯವಿಠಲ ದೇವಸ್ಥಾನದಲ್ಲಿ ಖ್ಯಾತ ಜಾನಪದ ಗಾಯಕಿ ಶಿಲ್ಪಾ ಮುಡಬಿ ಅವರಿಂದ "ಆರತಿ ಬೆಳಗಿರಿ ಕಾರುಣ್ಯ ಮೃಢ ಹರನಿಗೆ" ಎಂಬ ಜಾನಪದ ಹಾಡಿನ ಮೂಲಕ ಅತಿಥಿಗಳನ್ನು ವಿಜಯವಿಠಲ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ವಿಜಯವಿಠ್ಠಲ ದೇವಸ್ಥಾನದ ಆವರಣದ ಪ್ರತಿ ಮಂಟಪದ ಕಲಾವಿದರು ತಮ್ಮ ಕಲಾ ಪ್ರದರ್ಶನ ಮುಂದುವರೆಸಿದರು. ಭರತ್ಯ ನಾಟ್ಯ, ಮೊಹಿನಿಯಾಟ್ಟಂ, ಓಡಿಸ್ಸಿ, ಕುಚುಪುಡಿ ನೃತ್ಯಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.

ಮಂಟಪದಲ್ಲಿ ಕಲಾವಿದರು ಜಾನಪದ ಗೀತೆಗೆ ಕೋಲಾಟ ಪ್ರದರ್ಶಿಸಿದರು. ನಂತರ ಅರಸನ ತುಲಾಭಾರಕ್ಕೆ ಅಲ್ಲಿನ ಐತಿಹಾಸಿಕ ಮಾಹತ್ವವನ್ನು ಸಾಂಸ್ಕೃತಿಕ ಉಡುಪನ್ನು ಧರಿಸಿದ್ದ ಪ್ರವಾಸಿ ಮಾರ್ಗದರ್ಶಿಗಳಿಂದ ಮಾಹಿತಿ ಪಡೆದುಕೊಂಡರು.

ನಂತರ ಪ್ರತಿನಿಧಿಗಳಿಗೆ ಕಲ್ಲಿನ ರಥ, ಸಪ್ತ ಸ್ವರ ಮಂಟಪದ ಮಹತ್ವ ಸಾರಿ ಸಪ್ತಸ್ವರ ಕಂಬದಲ್ಲಿ ಬರುವ ಸ್ವರಗಳನ್ನು ಒಮ್ಮಿಸಿ ಕೇಳಿಸಿದರು. ನಂತರ ವಿಕ್ಕು ವಿನಾಯಕ್ ತಂಡದಿಂದ ಗಟ ವಾದನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಹಂಪಿ ವೀಕ್ಷಿಸುತ್ತಿರುವ ಜಿ-20 ಪ್ರತಿನಿಧಿಗಳು

ಹಂಪಿ ವೀಕ್ಷಿಸುತ್ತಿರುವ ಜಿ-20 ಪ್ರತಿನಿಧಿಗಳು
Published On - 10:08 pm, Fri, 14 July 23



















