Kannada News Photo gallery Ganesh Chaturthi 2024: When will Ganesha Chaturthi be celebrated this year? Know the muhurat, rituals, idol establishment immersion timings
Ganesh Chaturthi 2024: ಗಣೇಶ ಚತುರ್ಥಿ ಈ ಬಾರಿ ಯಾವಾಗ ಆಚರಿಸಲಾಗುತ್ತದೆ? ಮೂರ್ತಿ ಪ್ರತಿಷ್ಠಾಪನೆ-ವಿಸರ್ಜನೆಯ ಸಮಯ, ನಿಯಮ ತಿಳಿಯಿರಿ
ಸಾಧು ಶ್ರೀನಾಥ್ | Updated By: Digi Tech Desk
Updated on:
Aug 27, 2024 | 11:41 AM
ಇನ್ನು ಕೆಲವೇ ದಿನಗಳಲ್ಲಿ ಶ್ರಾವಣ ಮುಗಿಸಿ ಭಾದ್ರಪದ ಮಾಸದೊಳ್ ಪ್ರವೇಶಿಸುತ್ತೇವೆ. ಇದರಿಂದಾಗಿ ಮೋದಕ ಪ್ರಿಯ ಗಣೇಶನ ಜನ್ಮದಿನವಾದ ವಿನಾಯಕ ಜನ್ಮದಿನವನ್ನು ಆಚರಿಸಲು ಹಿಂದೂಗಳು ಸಿದ್ಧರಾಗಿದ್ದಾರೆ. ಈ ಲೇಖನದಲ್ಲಿ ಗಣಪತಿ ನವರಾತ್ರಿ ಅಥವಾ ಗಣೇಶ ಉತ್ಸವ ಯಾವಾಗ ಪ್ರಾರಂಭವಾಗುತ್ತದೆ? ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸರಿಯಾದ ವಿಧಾನ ಮತ್ತು ನಿಯಮಗಳನ್ನು ತಿಳಿಯೋಣ..
1 / 6
Ganesh Chaturthi 2024: ವಿನಾಯಕ ಚೌತಿ ಉತ್ಸವವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ 4 ನೇ ದಿನದಂದು ಆಚರಿಸಲಾಗುತ್ತದೆ. ಈ ವಿನಾಯಕ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಬ್ಬ ಆರಂಭವಾಗುತ್ತದೆ ಮತ್ತು ನೀರಿನಲ್ಲಿ ಮುಳುಗಿಸುವುದರೊಂದಿಗೆ ಹಬ್ಬ ಮುಕ್ತಾಯವಾಗುತ್ತದೆ.
2 / 6
ವಿನಾಯಕ ಚೌತಿ ದಿನಾಂಕ, ಪೂಜೆಯ ಶುಭ ಸಮಯ: ವೈದಿಕ ಪಂಚಾಂಗದ ಪ್ರಕಾರ, ವಿನಾಯಕ ಚೌತಿಯು ಶುಕ್ರವಾರ, ಸೆಪ್ಟೆಂಬರ್ 6, 2024 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7, ಶನಿವಾರ, ಸಂಜೆ 5.37 ಕ್ಕೆ ಕೊನೆಗೊಳ್ಳುತ್ತದೆ. ಇದರಿಂದಾಗಿ ಈ ವರ್ಷ ವಿಗ್ರಹ ಪ್ರತಿಷ್ಠಾನವನ್ನು ಸೆ. 7ರಂದು ಆಚರಿಸಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು 8ನೇ ತಾರೀಖಿನಂದು ಆಚರಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಉದಯ ತಿಥಿ ಪ್ರಕಾರ, ಸೆಪ್ಟೆಂಬರ್ 7 ರ ಶನಿವಾರದಿಂದ ಗಣೇಶ ಹಬ್ಬ ಪ್ರಾರಂಭವಾಗಲಿವೆ. ಈ ದಿನ ವಿನಾಯಕನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.
3 / 6
Ganesh idol Sthapana or installation timings: ಮೂರ್ತಿ ಪೂಜೆಗೆ ಶುಭ ಮುಹೂರ್ತ: ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7ರಂದು ಬೆಳಗ್ಗೆ ಆಚರಿಸಬೇಕು. ಇದಲ್ಲದೆ, ದೇವತಾರಾಧನೆಗೆ ಶುಭ ಮುಹೂರ್ತವು ಬೆಳಿಗ್ಗೆ 11.04 ರಿಂದ ಮಧ್ಯಾಹ್ನ 1.34 ರವರೆಗೆ ಇರುತ್ತದೆ. ವಿನಾಯಕನ ವಿಗ್ರಹವನ್ನು ಪೂಜಿಸಲು ಭಕ್ತರಿಗೆ ಒಟ್ಟು 2 ಗಂಟೆ 30 ನಿಮಿಷಗಳ ಸಮಯವಿರುತ್ತದೆ.
4 / 6
Ganesh idol immersion timings: ಗಣೇಶನ ನಿಮಜ್ಜನ (ವಿಸರ್ಜನೆ) ಸಮಯ : ಗಣೇಶ ಹಬ್ಬವು ಸೆಪ್ಟೆಂಬರ್ 7 ಶನಿವಾರದಂದು ಪ್ರಾರಂಭವಾಗುತ್ತದೆ. ಈ ಬಾರಿಯ ಗಣೇಶ ಹಬ್ಬಗಳು ಸೆಪ್ಟೆಂಬರ್ 17ರ ಮಂಗಳವಾರ ಅನಂತ ಚತುರ್ದಶಿ ದಿನ ಮುಗಿಯಲಿದೆ. ಗಣೇಶ ಮೂರ್ತಿಯನ್ನು ಮನೆಯಲ್ಲಿಟ್ಟು 10 ದಿನಗಳ ಕಾಲ ಪೂಜಿಸುವವರು ಅನಂತ ಚತುರ್ದಶಿಯಂದು ವಿನಾಯಕನನ್ನು ನೀರಿನಲ್ಲಿ (ನಿಮಜ್ಜನ, ವಿಸರ್ಜನೆ) ಮುಳುಗಿಸುತ್ತಾರೆ.
5 / 6
ವಿಗ್ರಹ ಪ್ರತಿಷ್ಠಾಪನೆಗೆ ಸರಿಯಾದ ನಿಯಮ: ಶುಭ ಮುಹೂರ್ತದಲ್ಲಿ ಮನೆಯ ಉತ್ತರ ಅಥವಾ ಆಗ್ನೇಯ ದಿಕ್ಕಿನಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬಲಭಾಗದಲ್ಲಿ ಸೊಂಡಿಲು ಇರುವ (ಬಲಮುರಿ) ವಿನಾಯಕನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅದೇ ಸಮಯದಲ್ಲಿ ಗಣೇಶನು ಕುಳಿತ ಭಂಗಿಯಲ್ಲಿರಬೇಕು.
6 / 6
ಆ ವಿನಾಯಕ ಮೂರ್ತಿಯಲ್ಲಿ ಪವಿತ್ರ ಜನಿವಾರ ಇರಬೇಕು. ಇಲಿಯೂ ಇರಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ ಸ್ವಚ್ಛ ಮತ್ತು ಪವಿತ್ರವಾಗಿರಬೇಕು. ಗಣೇಶನ ಮೂರ್ತಿಯ ಮುಖವು ಪಶ್ಚಿಮಕ್ಕೆ ಇರಬೇಕು. ಗಣೇಶನನ್ನು ವಿಸರ್ಜಿಸುವುದಕ್ಕೂ ಮುನ್ನ ವಿಗ್ರಹವನ್ನು ಅಪ್ಪಿತಪ್ಪಿಯೂ ಅಲುಗಾಡಿಸಬಾರದು.
Published On - 11:05 am, Sat, 24 August 24