ಈ ಬಾರಿ ಬಿಗ್ ಬಾಸ್ಗೆ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ‘ಬಿಗ್ ಬಾಸ್’ ಆರಂಭ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಪ್ರೋಮೋಶೂಟ್ ಪೂರ್ಣಗೊಂಡಿದೆ. ಇದರ ಪ್ರಸಾರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಬಗ್ಗೆ ಇಲ್ಲಿದೆ ವಿವರ.
ಗಾಯಕಿ ಆಶಾ ಭಟ್ ಅವರು ‘ಬಿಗ್ ಬಾಸ್’ಗೆ ಕಾಲಿಡುತ್ತಾರೆ ಎಂದು ವರದಿ ಆಗಿದೆ. ಅವರು ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿದ್ದರು.
ಮೋಕ್ಷಿತಾ ಪೈ ‘ಪಾರು’ ಧಾರಾವಾಹಿ ಮೂಲಕ ಗಮನ ಸೆಳೆದಿದ್ದಾರೆ. ಅವರು ಕೂಡ ಈ ಬಾರಿ ಬಿಗ್ ಬಾಸ್ನಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಿರುತೆರೆಯ ಮೂಲಕ ಸುಕೃತಾ ನಾಗ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಸಿಕ್ಕಿದೆ. ಅವರು ದೊಡ್ಡಮನೆಗೆ ತೆರಳಲಿದ್ದಾರೆ.
‘ಅಂತರಪಟ’ ಧಾರಾವಾಹಿ ಮೂಲಕ ಫೇಮಸ್ ಆದವರು ತನ್ವಿ ಬಾಲರಾಜ್ ಅವರು. ಅವರು ಈ ಬಾರಿ ಬಿಗ್ ಬಾಸ್ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.
ಯೂಟ್ಯೂಬರ್ ವರ್ಷಾ ಕಾವೇರಿ ಕೂಡ ಬಿಗ್ ಬಾಸ್ಗೆ ಬರೋ ನಿರೀಕ್ಷೆ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿದೆ.
ನಟ, ನಿರ್ದೇಶಕ ಎಸ್. ನಾರಾಯಣ್ ಮಗ ಪಂಕಜ್ ನಾರಾಯಣ್ ಕೂಡ ಬಿಗ್ ಬಾಸ್ಗೆ ಬರೋ ಸಾಧ್ಯತೆ ಇದೆಯಂತೆ. ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ಸತ್ಯ’ ಧಾರಾವಾಹಿಯಲ್ಲಿ ಸಖತ್ ರಗಡ್ ಪಾತ್ರ ಮಾಡಿ ಗೌತಮಿ ಜಾಧವ್ ಗಮನ ಸೆಳೆದಿದ್ದರು. ಅವರು ಕೂಡ ಬಿಗ್ ಬಾಸ್ನ ಭಾಗವಾಗಲಿದ್ದಾರಂತೆ.
‘ಗೀತಾ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದವರು ಶರ್ಮಿತಾ ಗೌಡ. ಅವರು ಈ ಬಾರಿಯ ಬಿಗ್ ಬಾಸ್ ಆಫರ್ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
‘ಗಿಚ್ಚಿ ಗಿಲಿಗಿಲಿ’ ಹಾಸ್ಯ ಶೋಗಳ ಮೂಲಕ ಗಮನ ಸೆಳೆದವರು ರಾಘವೇಂದ್ರ ಗೌಡ. ಅವರು ಈ ಬಾರಿ ದೊಡ್ಮನೆಗೆ ಒಳಗೆ ಪ್ರವೇಶ ಪಡೆಯಲಿದ್ದಾರಂತೆ.
ಇನ್ಸ್ಟಾಗ್ರಾಮ್ ಮೂಲಕ ಫೇಮಸ್ ಆದ ವರುಣ್ ಆರಾಧ್ಯಾ ಅವರು ನಂತರ ‘ಬೃಂದಾವನ’ ಧಾರಾವಾಹಿಯಲ್ಲಿ ನಟಿಸಿದರು. ಅವರು ಈ ರಿಯಾಲಿಟಿ ಶೋನಲ್ಲಿ ಮನರಂಜನೆ ನೀಡೋ ಸಾಧ್ಯತೆ ಇದೆ.
ಅಮಿತಾ ಸದಾಶಿವ ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೂ ಬಿಗ್ ಬಾಸ್ ಆಫರ್ ಹೋಗಿದೆಯಂತೆ.
ಚಂದ್ರಪ್ರಭಾ ಅವರು ಹಾಸ್ಯದ ಮೂಲಕ ಗಮನ ಸೆಳೆದವರು. ಅವರು ‘ಗಿಚ್ಚಿ ಗಿಲಿ ಗಿಲಿ 2’ ಗೆದ್ದಿದ್ದರು. ಅವರು ಈಗ ಬಿಗ್ ಬಾಸ್ ರಿಯಾಲಿಟಿ ಶೋಗೆ ಅವಕಾಶ ಪಡೆಯುತ್ತಿದ್ದಾರೆ.
‘ಪದ್ಮಾವತಿ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದವರು ತ್ರಿವಿಕ್ರಮ್. ಅವರಿಗೆ ಬಿಗ್ ಬಾಸ್ ಆಫರ್ ಹೋಗಿದೆ.
Published On - 10:59 am, Sat, 24 August 24