Kannada News Photo gallery Ganesha blossomed in the hands of special spirited children, Carving an idol commemorating Ganapa, Vijayapura News in Kannada
ವಿಶೇಷ ಚೇತನ ಮಕ್ಕಳ ಕೈಯ್ಯಲ್ಲಿ ಅರಳಿದ ವಿಘ್ನ ನಿವಾರಕ! ಗಣಪನ ಸ್ಮರಣೆ ಮಾಡುತ್ತಾ ಮೂರ್ತಿ ಕೆತ್ತನೆ
ಈ ಬಾರಿಯ ಗಣೇಶ ಚತುರ್ಥಿಯ ಸಡಗರ ಎಲ್ಲೆಡೆ ಮನೆ ಮಾಡಿದೆ. ವಿಘ್ನೇಶ್ವರನಿಗೆ ಭವ್ಯ ಸ್ವಾಗತ ಕೋರಲಾಗಿದ್ದು, ಮನೆ ಮನೆಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ವಿನಾಯಕನನ್ನು ಪ್ರತಿಷ್ಟಾಪಿಸಲಾಗಿದೆ. ವಿಶೇಷ ಅಲಂಕಾರ ಪೂಜೆ ಮಾಡುವ ದೃಷ್ಯಗಳು ಕಂಡು ಬಂದಿವೆ. ಇಷ್ಟರ ಮಧ್ಯೆ ವಿಜಯಪುರ ನಗರದಲ್ಲಿ ವಿಕಲಚೇತನ ಮಕ್ಕಳ ಗಣೇಶ ಚತುರ್ಥಿ, ಎಲ್ಲರ ಗಮನ ಸೆಳೆದಿದೆ. ವಿಶೇಷ ಮಕ್ಕಳ ಗಣಪನ ಹಬ್ಬದ ಆಚರಣೆ ಕುರಿತು ಒಂದು ವರದಿ ಇಲ್ಲಿದೆ.
1 / 6
ಎಲ್ಲೆಡೆ ಗೌರಿ ಗಣೇಶ ಹಬ್ಬದ ಆಚರಣೆ ಮನೆ ಮಾಡಿದೆ. ಮನೆ ಮನೆಗಳಲ್ಲಿ ಗಣಪನ ಮೂರ್ತಿಗಳನ್ನು ಅಲಂಕಾರ ಮಾಡಿಟ್ಟು, ಪೂಜೆ ಮಾಡುವಲ್ಲಿ ನಿರತರಾಗಿದ್ದಾರೆ. ಇತ್ತ ವಿಜಯಪುರ ನಗರದ ಜಲ ನಗರದಲ್ಲಿರುವ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆ ವಿಲಕಚೇತನ ಮಕ್ಕಳ ಪುನಶ್ಚೇತನ ಕೇಂದ್ರದಲ್ಲಿ, ‘ವಿಶೇಷ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಯಿತು.
2 / 6
ಇಲ್ಲಿನ ಕೇಂದ್ರದಲ್ಲಿ ವಿಶೇಷ ಚೇತನ ಮಕ್ಕಳು ಗಣೇಶ ಚತುರ್ಥಿ ಆಚರಣೆಗೆ ಮುಂದಾಗಿದ್ದು ವಿಶೇಷವಾಗಿತ್ತು. ಬುದ್ದಿ ಮಾಂಧ್ಯ, ವಿಕಲಚೇತನ ಸಮಸ್ಯೆ ಎದುರಿಸುವ ಮಕ್ಕಳು ಬಹು ಹುರುಪಿನಿಂದಲೇ ಉತ್ಸವಕ್ಕೆ ಅಣಿಯಾಗಿದ್ದರು. ಮಣ್ಣಿನ ಮೂರ್ತಿಗಳನ್ನು ಮಾಡುವಲ್ಲಿ ಎಲ್ಲರೂ ತಲ್ಲೀಣರಾಗಿದ್ದರು.
3 / 6
ಪುಟ್ಟ ಪುಟ್ಟ ಕೈಗಳಲ್ಲಿ ವಿವಿಧ ಆಕಾರದ ಗಣೇಶನ ಮೂರ್ತಿಗಳನ್ನು ತಯಾರಿಸಿ ಖುಷಿ ಪಟ್ಟರು. ವಿಶೇಷಚೇತನ ಮಕ್ಕಳೇ ತಯಾರಿಸಿದ ವಿವಿಧ ಆಕಾರದ ಗಣೇಶನ ಮೂರ್ತಿಗಳನ್ನೇ ಇಟ್ಟು ಗಣೇಶ ಚೌತಿಯನ್ನು ಆಚರಣೆ ಮಾಡಲಾಯಿತು. ತಾವೇ ತಯಾರಿಸಿದ ಗಣಪನ ಮೂರ್ತಿಗಳನ್ನು ಇಟ್ಟು ಪೂಜೆ ಮಾಡಿದ್ದು ಮಕ್ಕಳ ಖುಷಿಗೆ ಕಾರಣವಾಗಿತ್ತು.
4 / 6
ಕೇವಲ ವಿಶೇಷ ಚೇತನ ಮಕ್ಕಳಿಂದ ಗಣಪನ ಮೂರ್ತಿಗಳನ್ನು ತಯಾರಿಸಿ ಇಡುವುದಷ್ಟೇ ಅಲ್ಲ, ಪರಿಸರ ಪೂರಕವಾಗಿರುವಂತೆಯೂ ಸಂಸ್ಥೆಯ ಪದಾಧಿಕಾರಿಗಳು ಮುಂದಾಗಿದ್ದಾರೆ. ವಿಶೇಷಚೇತನ ಮಕ್ಕಳ ಕೈಯ್ಯಲ್ಲಿ ಅರಳಿದ ಗಣಪನ ಮೂರ್ತಿಗಳು ಶುದ್ದ ಮಣ್ಣಿನಿಂದ ತಯಾರು ಮಾಡಲು ಸಕಲ ಸಹಾಯ ಮಾಡಿದರು. ಜೊತೆಗೆ ಪ್ರತಿ ಮೂರ್ತಿಯಲ್ಲಿ ಹಣ್ಣಿನ ಮರಗಳ, ತರಕಾರಿಗಳ ಹಾಗೂ ಹೂವಿನ ಬೀಜಗಳನ್ನು ಹಾಕಿದ್ದರು.
5 / 6
ಹಬ್ಬದ ಕೊನೆಯಲ್ಲಿ ಮಣ್ಣಿನ ಗಣಪನ ಮೂರ್ತಿಗಳನ್ನು ವಿಸರ್ಜನೆ ಮಾಡಿದಾಗ ಪರಿಸಕ್ಕೆ ಅನಕೂಲಕರವಾಗಿ ಹಣ್ಣಿನ ಮರ, ತರಕಾರಿ ಹಾಗೂ ಹೂವಿನ ಸಸಿಗಳು ಬೆಳೆಸುವ ನಿಟ್ಟಿನಲ್ಲಿ ಮೂರ್ತಿಗಳಲ್ಲಿ ಬೀಜಗಳನ್ನು ಹಾಕಲಾಗಿತ್ತು. ವಿಶೇಷಚೇತನ ಮಕ್ಕಳ ಹಬ್ಬದ ಆಚರಣೆಯಲ್ಲಿ ಇತರೆ ಮಹಿಳಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿದ್ದರು. ಏನೂ ಆರಿಯದ ಮುಗ್ದ ಮಕ್ಕಳೊಂದಿಗೆ ಚತುರ್ಥಿಯನ್ನು ಆಚರಣೆ ಮಾಡಿ ಖುಷಿ ಪಟ್ಟರು.
6 / 6
ಗಣೇಶ ಚತುರ್ಥಿ ಎಂದರೆ ಕುಣಿದು ಕುಪ್ಪಳಿಸಿ ಮೂರ್ತಿಗಳನ್ನು ಮೆರವಣಿಗೆ ಮಾಡುತ್ತಾ ಹಬ್ಬವನ್ನು ಮಾಡುವವರ ಮಧ್ಯೆ ವಿಕಲಚೇತನ, ಬುದ್ದಿಮಾಂದ್ಯ ಮಕ್ಕಳ ಗಣೇಶನ ಹಬ್ಬದ ಆಚರಣೆ ಮಾತ್ರ ವಿಶೇಷವಾಗಿತ್ತು. ದೈಹಿಕವಾಗಿ ಮಾನಸಿಕವಾಗಿ ಸಮಸ್ಯೆಯಿದ್ದರೂ ಅವರೆಲ್ಲರ ಮನಸ್ಸಿನಲ್ಲಿ ಗಣಪನ ಕಲ್ಪನೆ ಎದ್ದು ಕಾಣುತ್ತಿತ್ತು. ನಿಜವಾದ ಹಾಗೂ ಅರ್ಥಪೂರ್ಣವಾದ ಗೌರಿ ಗಣೇಶನ ಹಬ್ಬವನ್ನು ಇವರು ಆಚರಿಸಿದರು ಎಂದರೆ ಅದು ತಪ್ಪಾಗಲಾರದು.
Published On - 5:17 pm, Sat, 7 September 24