
ವಿದ್ಯೆ, ಬುದ್ಧಿ, ಸಂಪತ್ತಿನ ಅಧಿದೇವತೆ ಈ ವಿನಾಯಕ. ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಎಲ್ಲ ಹಿಂದೂಗಳ ಅಚ್ಚುಮೆಚ್ಚಿನ ದೇವರು. ದೇಶದಾದ್ಯಂತ ಸರ್ವ ವಿಘ್ನ ನಿವಾರಕ ಗಣೇಶನ ಅನೇಕ ದೇವಾಲಯಗಳನ್ನು ಕಾಣಬಹುದು.

ಈ ಭಾರತದಲ್ಲಿ ಹಲವಾರು ಪುರಾತನ ಹಾಗೂ ಇಷ್ಟಾರ್ಥಗಳನ್ನು ಸಿದ್ಧಿಸುವ ಗಣೇಶನ ದೇವಾಲಯಗಳಿವೆ. ಗಣೇಶ ಚತುರ್ಥಿಯಂದು ವಿನಾಯಕ ದೇವಸ್ಥಾನಕ್ಕೆ ತೆರಳುವವರು ಹೆಚ್ಚಿನವರಾಗಿರುತ್ತಾರೆ. ಆದರೆ ಇಲ್ಲೊಂದು ಕಡೆ ತಲೆಯಿಲ್ಲದ ಗಣೇಶನ ವಿಗ್ರಹವನ್ನು ಪೂಜಿಸುವುದು ವಿಶೇಷವಾದ ದೇವಾಲಯವಿದೆ.

ಪುರಾಣದಲ್ಲಿ ಗಣೇಶನ ತಲೆಯನ್ನು ಕೋಪ ಕತ್ತರಿಸಿದ ಆನೆಯ ತಲೆಯನ್ನು ಜೋಡಿಸ ಕಥೆಯನ್ನು ಕೇಳಿದ್ದಿರಬಹುದು. ಆದರೆ ಶಿವನು ಗಣಪತಿಗೆ ತಲೆಯನ್ನು ಜೋಡಿಸಿದ್ದು ಈ ದೇವಸ್ಥಾನವಿರುವ ದೇವಭೂಮಿಯಲ್ಲಿಯೇ ಎನ್ನಲಾಗಿದೆ.

ಈ ಮುಂಡಿಕಾಟೀಯ ದೇವಾಲಯವು ಕೇದರ ಕಣಿವೆಯಲ್ಲಿದೆ. ಇಲ್ಲಿ ತಲೆಯಿಲ್ಲದ ಗಣಪತಿಯನ್ನು ಆರಾಧನೆ ಮಾಡಲಾಗುತ್ತದೆ. ಈ ಕೇದರ ಕಣಿವೆಯೂ ಉತ್ತರಕಾಂಡ ರಾಜ್ಯದ ಸೋನ್‌ಪ್ರಯಾಗ್‌ನಿಂದ 3 ಕಿಮೀ ದೂರದಲ್ಲಿದೆ.

ಈ ಪ್ರದೇಶವನ್ನು ದೇವಭೂಮಿ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಶಿವ ಗಣಪತಿಯ ತಲೆ ತೆಗೆದು, ಇಲ್ಲಿಯೇ ಗಣೇಶನಿಗೆ ಆನೆ ತಲೆಯನ್ನು ಜೋಡಿಸಿದ. ಹೀಗಾಗಿ ಈ ಪ್ರದೇಶಕ್ಕೆ ಮುಂಡಿಕಾಟೀಯ ಎನ್ನುವ ಹೆಸರು ಬಂದಿತು ಎನ್ನಲಾಗಿದೆ.