Updated on: Sep 07, 2024 | 8:38 AM
ದೇಶದೆಲ್ಲೆಡೆ ಇಂದು (ಸೆಪ್ಟೆಂಬರ್ 7) ಗಣೇಶ ಚತುರ್ಥಿಯನ್ನು ಹಿಂದೂಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಗೌರಿ-ಗಣೇಶನ ಕೂರಿಸಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಸೆಲೆಬ್ರಿಟಿಗಳ ಮನೆಯಲ್ಲೂ ಹಬ್ಬದ ಆಚರಣೆ ಜೋರಾಗಿಯೇ ಇದೆ.
ನಟಿ ಕವಿತಾ ಗೌಡ ಅವರು ಕೂಡ ಹಬ್ಬ ಆಚರಿಸುತ್ತಿದ್ದಾರೆ. ಅವರು ಸೀರೆ ಉಟ್ಟು ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಬೇಬಿ ಬಂಪ್ ಗಮನ ಸೆಳೆದಿದೆ. ಈ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಕವಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಫ್ಯಾನ್ಸ್ಗಾಗಿ ಅವರು ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಶೀಘ್ರವೇ ಅವರು ತಾಯಿ ಆಗಲಿದ್ದಾರೆ.
ಇತ್ತೀಚೆಗೆ ಕವಿತಾ ಗೌಡ ಹಾಗೂ ಪತಿ ಚಂದನ್ ಕುಮಾರ್ ಅವರು ಫೋಟೋಶೂಟ್ ಒಂದನ್ನು ಮಾಡಿಸಿದ್ದರು. ಕೆರೆಯ ಸಮೀಪ ನಿಂತು ಅವರು ಬೇಬಿಬಂಪ್ ಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಾಕಷ್ಟು ಗಮನ ಸೆಳೆದಿದ್ದವು.
ಕವಿತಾ ಹಾಗೂ ಚಂದನ್ ಇಬ್ಬರೂ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದವರು. ಈ ಮೊದಲು ಇಬ್ಬರೂ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದರು. ಆ ಬಳಿಕ ಪ್ರೀತಿಸಿ ಅವರು ಮದುವೆ ಆದರು.