11 ಭರ್ಜರಿ ಸಿಕ್ಸ್: ಶಿಮ್ರಾನ್ ಹೆಟ್ಮೆಯರ್ ಬ್ಯಾಟ್​ನಿಂದ ವರ್ಲ್ಡ್ ರೆಕಾರ್ಡ್

Shimron Hetmyer: ಶಿಮ್ರಾನ್ ಹೆಟ್ಮೆಯರ್ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 72 ಪಂದ್ಯಗಳನ್ನಾಡಿದ್ದಾರೆ. ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿರುವ ಹೆಟ್ಮೆಯರ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.

ಝಾಹಿರ್ ಯೂಸುಫ್
|

Updated on:Sep 07, 2024 | 10:26 AM

ಒಂದೇ ಪಂದ್ಯದಲ್ಲಿ 11 ಭರ್ಜರಿ ಸಿಕ್ಸ್​... ಇದರಲ್ಲೇನು ವಿಶೇಷತೆ ಎಂದು ನಿಮಗೂ ಅನಿಸಬಹುದು... ಆದರೆ ಶಿಮ್ರಾನ್ ಹೆಟ್ಮೆಯರ್ ಬಾರಿಸಿದ ಈ 11 ಸಿಕ್ಸ್​ಗಳೇ ಇದೀಗ ಟಿ20 ಕ್ರಿಕೆಟ್​​ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ದಾಖಲೆಗೆ ಮುಖ್ಯ ಕಾರಣ ಅವರು ಫೋರ್ ಬಾರಿಸದಿರುವುದು ಎಂಬುದೇ ವಿಶೇಷ.

1 / 5
ಹೌದು, ಟಿ20 ಪಂದ್ಯದಲ್ಲಿ ಒಂದೇ ಒಂದು ಫೋರ್ ಬಾರಿಸದೇ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಇದೀಗ ವೆಸ್ಟ್ ಇಂಡೀಸ್ ದಾಂಡಿಗ ಶಿಮ್ರಾನ್ ಹೆಟ್ಮೆಯರ್ ಪಾಲಾಗಿದೆ. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಸೌತ್ ಆಫ್ರಿಕಾದ ರಿಕಿ ವೆಸೆಲ್ಸ್ ಹೆಸರಿನಲ್ಲಿತ್ತು.

2 / 5
2018 ರಲ್ಲಿ ನಡೆದ ಇಂಗ್ಲೆಂಡ್ ಕೌಂಟಿ ಪಂದ್ಯದಲ್ಲಿ ನಾಟಿಂಗ್​ಹ್ಯಾಮ್​ಶೈರ್ ಪರ ಕಣಕ್ಕಿಳಿದಿದ್ದ ರಿಕಿ ವೆಸೆಲ್ಸ್ ವೋರ್ಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ 55 ರನ್ ಬಾರಿಸಿದ್ದರು. ಈ ವೇಳೆ ಒಂದೇ ಒಂದು ಫೋರ್ ಬಾರಿಸದೇ 9 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

3 / 5
ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಶಿಮ್ರಾನ್ ಹೆಟ್ಮೆಯರ್ ಯಶಸ್ವಿಯಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ಪರ ಕಣಕ್ಕಿಳಿದಿರುವ ಹೆಟ್ಮೆಯರ್ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಪಂದ್ಯದಲ್ಲಿ 39 ಎಸೆತಗಳಲ್ಲಿ 91 ರನ್ ಚಚ್ಚಿದ್ದಾರೆ.

4 / 5
ಈ 91 ರನ್​ಗಳಲ್ಲಿ 66 ರನ್​ಗಳು ಮೂಡಿಬಂದಿರುವುದು ಬರೀ ಸಿಕ್ಸ್​ಗಳಿಂದ ಎಂಬುದು ವಿಶೇಷ. ಅಂದರೆ ಒಟ್ಟು 11 ಸಿಕ್ಸ್​ಗಳನ್ನು ಬಾರಿಸುವ ಮೂಲಕ ಶಿಮ್ರಾನ್ ಹೆಟ್ಮೆಯರ್ ಟಿ20 ಕ್ರಿಕೆಟ್​ ಪಂದ್ಯದಲ್ಲಿ ಒಂದೇ ಒಂದು ಫೋರ್ ಬಾರಿಸದೇ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ ಫೋರ್ ಬಾರಿಸದೇ ಹತ್ತಕ್ಕಿಂತ ಅಧಿಕ ಸಿಕ್ಸ್ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 5

Published On - 10:25 am, Sat, 7 September 24

Follow us
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್

ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?

ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ

Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ

Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು