
ನಟಿ ಆಲಿಯಾ ಭಟ್ಗೆ ಬಾಲಿವುಡ್ನಲ್ಲಿ ಭಾರೀ ಬೇಡಿಕೆ ಇದೆ. ಅವರು ಈಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದು, ಅವರ ಮೊದಲ ಸಿನಿಮಾ ‘ಆರ್ಆರ್ಆರ್’ ಮಾರ್ಚ್ 25ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ನೋಡೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ದಕ್ಷಿಣ ಭಾರತದಿಂದ ಆಲಿಯಾ ಭಟ್ಗೆ ಹಲವು ಸಿನಿಮಾ ಆಫರ್ಗಳು ಬರುತ್ತಿವೆ. ಆದರೆ, ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ತುಂಬಾನೇ ಜಾಗರೂಕರಾಗಿ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ಜ್ಯೂ.ಎನ್ಟಿಆರ್ ಹಾಗೂ ಅಲ್ಲು ಅರ್ಜುನ್ ಜತೆ ನಟಿಸಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದರು.

ಈಗ ಆಲಿಯಾ ಅವರು ಮತ್ತೊಂದು ಆಸೆಯನ್ನು ಹೊರ ಹಾಕಿದ್ದಾರೆ. ಅವರಿಗೆ ಟಾಲಿವುಡ್ನ ಖ್ಯಾತ ನಟಿ ಸಮಂತಾ ಜತೆ ನಟಿಸಬೇಕು ಎನ್ನುವ ಆಸೆ ಇದೆಯಂತೆ! ಈ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅವರು ಹೀಗೆ ಹೇಳುವುದಕ್ಕೂ ಒಂದು ಕಾರಣ ಇದೆ.

‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅವರು ಆ್ಯಕ್ಷನ್ ದೃಶ್ಯಗಳಲ್ಲೂ ಮಿಂಚಿದ್ದರು. ಸಮಂತಾ ಅವರ ನಟನೆ ಆಲಿಯಾಗೆ ಸಖತ್ ಇಷ್ಟವಾಗಿದೆ. ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

‘ಸಮಂತಾ ಜತೆ ನಟಿಸಬೇಕು ಎನ್ನುವ ಆಸೆ ಇದೆ. ಅದು ಆ್ಯಕ್ಷನ್ ಸಿನಿಮಾ ಆದರೆ ಇನ್ನೂ ಉತ್ತಮ. ಆ ರೀತಿಯ ಅವಕಾಶ ಕೂಡಿ ಬಂದರೆ ಖಂಡಿತವಾಗಿಯೂ ನಟಿಸುತ್ತೇನೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ’ ಎಂದಿದ್ದಾರೆ ಆಲಿಯಾ.

ಸ್ಟಾರ್ ನಟಿಯರನ್ನು ಒಟ್ಟಿಗೆ ತೆರೆಮೇಲೆ ತರಬೇಕು ಎನ್ನುವ ಆಸೆ ಅನೇಕ ನಿರ್ಮಾಪಕರು/ನಿರ್ದೇಶಕರಲ್ಲಿ ಇರುತ್ತದೆ. ಈಗ ಆಲಿಯಾ ಅವರು ಸಮಂತಾ ಜತೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮುಂದೊಂದು ದಿನ ನಿರ್ದೇಶಕರು ಒಳ್ಳೆಯ ಕಥೆಯೊಂದಿಗೆ ಬಂದರೆ ಇವರನ್ನು ಒಟ್ಟಿಗೆ ತರೆಮೇಲೆ ನೋಡಬಹುದು.